ಭಟ್ಕಳ: ಆಸ್ತಿಗೆ ಸಂಬಂಧಿಸಿದಂತೆ ಜಗಳ ಉಂಟಾಗಿ ಮಾರಕಾಸ್ತ್ರಗಳಿಂದ ನಾಲ್ವರನ್ನು ಬರ್ಬರವಾಗಿ ಕೊಲೆಗೈದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನ ಹಾಡುವಳ್ಳಿಯ ಓಣಿಬಾಗಿಲು ಗ್ರಾಮದಲ್ಲಿ ನಡೆದಿದೆ. ಈ ಘಟನೆಯಲ್ಲಿ ಇಬ್ಬರು ಮಕ್ಕಳು ಕೊಲೆಗಡುಕರಿಂದ  ಪಾರಾಗಿದ್ದಾರೆ.ಈ ಕುರಿತ ವರದಿ ಇಲ್ಲಿದೆ.


COMMERCIAL BREAK
SCROLL TO CONTINUE READING

ಭಟ್ಕಳ ತಾಲೂಕಿನ ಹಾಡುವಳ್ಳಿಯ ಓಣಿಬಾಗಿಲು ಗ್ರಾಮದಲ್ಲಿ ನಾಲ್ವರನ್ನು ಕೊಚ್ಚಿ ಕೊಲೆಗೈದ ನಡೆದ ಈ ಘಟನೆ ಉತ್ತರಕನ್ನಡ ಜಿಲ್ಲೆಯಲ್ಲಿ ತಲ್ಲಣ ಉಂಟು ಮಾಡಿದೆ. ಈ ಘಟನೆಯಲ್ಲಿ ಶಂಭು ಹೆಗಡೆ(65), ಅವರ ಪತ್ನಿ ಮಾದೇವಿ ಹೆಗಡೆ (45), ಅವರ ಮಗ ರಾಜೀವ್ ಹೆಗಡೆ (34) ಹಾಗೂ ಸೊಸೆ ಕುಸುಮಾ ಭಟ್(30) ಕೊಲೆಯಾದವರು. ಈ ಗ್ರಾಮದ ಶಂಭು ಹೆಗಡೆಗೆ ನಾಲ್ವರು ಮಕ್ಕಳು. ಇವರಲ್ಲಿ ಒರ್ವ ಮಗ ಕ್ಯಾನ್ಸರ್ ಖಾಯಿಲೆಯಿಂದ ಹಿಂದೆ ಸಾವನ್ನಪ್ಪಿದರು. ಇನ್ನೋರ್ವ ಮಗ ಸೇರಿ ಇಬ್ಬರು ಹೆಣ್ಣು ಮಕ್ಕಳು. ಊರಲ್ಲಿ ಉತ್ತಮ ಜೀವನ ಸಾಗಿಸುತ್ತಿದ್ದ ಇದ್ದ ಶಂಭು ಹೆಗಡೆ ಹಾಗೂ ಹಿರಿಯ ಮಗನ ಹೆಂಡತಿ ವಿದ್ಯಾ ನಡುವೆ ಆಗಾಗ ಆಸ್ತಿ ಸಂಬಂಧಿಸಿದಂತೆ ಜಗಳ ಆಗುತ್ತಿತ್ತು ಎನ್ನಲಾಗಿದೆ. ಶಂಭು ಹೆಗಡೆಯ ಹಿರಿಯ  ಮಗ  ಶ್ರೀಧರ ಹೆಗಡೆ ಸತ್ತ ಬಳಿಕ ಸೊಸೆ ತನ್ನ ಗಂಡನ ಆಸ್ತಿಯನ್ನು ಪಡೆದಿದ್ದಳು.


ಇದನ್ನೂ ಓದಿ: ಮಾರ್ಚ್ 11 ರಂದು ಧಾರವಾಡ ಐಐಟಿ ನೂತನ ಕಟ್ಟಡ ಉದ್ಘಾಟನೆ


ಈ ಆಸ್ತಿಯನ್ನು ಕೊಡಲು ಶಂಭು ಹೆಗಡೆ  ಹಾಗೂ ಇನೋರ್ವ  ಮಗನಾದ ರಾಜೀವ ಹೆಗಡೆಗೆ ಮನಸ್ಸು ಇರಲಿಲ್ಲ. ಬಳಿಕ ಸೊಸೆ ವಿದ್ಯಾ ಆಸ್ತಿಯನ್ನು ಪಡೆದು ಜೀವನ ಸಾಗಿಸುತ್ತಾ ಬಂದಿದ್ದಳು. ಇಂದು ಸೊಸೆಯ ವಿದ್ಯಾಳ ಸಹೋದರ ತನ್ನ ಅಕ್ಕನಿಗೆ ಸೇರಿದ ಜಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ ಶಂಭು ಹೆಗಡೆ ಹಾಗೂ ಸೊಸೆ ವಿದ್ಯಾಳ ಸಹೋದರ ವಿನಯ ಹೆಗಡೆ ನಡುವೆ ಜಗಳ ಉಂಟಾಗಿದೆ. ವಿದ್ಯಾಳಿಗೆ ಸೇರಿದ ಜಾಗದಲ್ಲಿ ಶಂಭು ಹೆಗಡೆಯವರು ಕೊಟ್ಟಿಗೆ ಕಟ್ಟುತ್ತಿದ್ದರು. ಈ ಕುರಿತಂತೆ ಮುಂಜಾನೆಯಿಂದ ಜಗಳ ನಡೆದಿತ್ತು ಎನ್ನಲಾಗಿದ್ದು, ಇದು ತುಂಬಾ ವಿಕೋಪಕ್ಕೆ ಹೋದಾಗ ಶ್ರೀಧರ ಭಟ್, ವಿದ್ಯಾ ಭಟ್ ಮತ್ತು ವಿನಯ ಭಟ್ ಈ ನಾಲ್ವರ ಮೇಲೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದರು ಎನ್ನಲಾಗಿದೆ.


ಇದನ್ನೂ ಓದಿ: ಬೆಂಗಳೂರಿನ 28 ಕ್ಷೇತ್ರಗಳಲ್ಲಿ 20 ಕ್ಷೇತ್ರ ಗೆಲ್ಲಲು ಬಿಜೆಪಿ ಭರ್ಜರಿ ಪ್ಲ್ಯಾನ್‌


ಈ ಘಟನೆಯಲ್ಲಿ ಹೆತ್ತವರು ಹಾಗೂ ಕುಟುಂಬದವರನ್ನು ಕಳೆದುಕೊಂಡ ಇಬ್ಬರು ಪುಟಾಣಿಗಳು ಅನಾಥರಾಗಿದ್ದಾರೆ. ಜಗಳ ಉಂಟಾಗಿದ್ದ ಸಂದರ್ಭದಲ್ಲಿ ಚಿಕ್ಕ ಬಾಲಕ ಮನೆಯಲ್ಲಿ ಮಲಗಿದ್ದ ಎನ್ನಲಾಗಿದ್ದು, ಇನ್ನೋರ್ವ ಬಾಲಕಿ ಶಾಲೆಗೆ ಹೋಗಿದ್ದರಿಂದ ಬದುಕಿದ್ದಾರೆ. ಇನ್ನು ಆರೋಪಿಗಳಾದ ವಿದ್ಯಾ, ಶ್ರೀಧರ ಹಾಗೂ ವಿದ್ಯಾ ಸಹೋದರ ವಿನಯ ಶ್ರೀಧರ ಭಟ್ ಕತ್ತಿಯಿಂದ ಹಲ್ಲೆ ಮಾಡಿ ಈ ಕೃತ್ಯ ಎಸಗಿದ್ದಾನೆ. ಆಸ್ತಿಯನ್ನು ನೋಡಿಕೊಳ್ಳುತ್ತಿದ್ದ ವಿದ್ಯಾಳ ಸಹೋದರ ಹಲ್ಯಾಣಿ ನಿವಾಸಿ ವಿನಯ ಶ್ರೀಧರ ಭಟ್ ನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನುಳಿದ ಇಬ್ಬರು ಕೊಲೆ ಆರೋಪಿಗಳಿಗೆ ಭಟ್ಕಳ ಗ್ರಾಮೀಣ ಠಾಣೆಯ ಪೋಲೀಸರು ಬಲೆ ಬೀಸಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.