ಬಿಹಾರದಲ್ಲಿ ಲ್ಯಾಂಡ್ ಮಾಫಿಯಾ: ರಾತ್ರೋ ರಾತ್ರಿ ಮಾಯವಾಗಿಯೇ ಬಿಡ್ತು ಕೆರೆ...
Bihar: ಕಾರು, ಚಿನ್ನ, ದುಡ್ಡು ಅದು ಯಾಕೆ ಬಸ್ಅನ್ನ ಕಳ್ಳತನ ಮಾಡೋದನ್ನ ಕೂಡ ನೋಡಿರ್ತೀವಿ ಅದ್ರೆ ಇಲ್ಲಿ ಒಂದು ಕೆರೆಯನ್ನೆ ಕಳ್ಳರು ರಾತ್ರೋ ರಾತ್ರಿ ಮಾಯ ಮಾಡಿದ್ದಾರೆ. ಹಾಗಾದರೇ ಏನಿದು ಸ್ಟೋರಿ ಅಂತೀರಾ.. ಇಲ್ಲಿದೆ ನೋಡಿ..
ಈ ಹಿಂದೆ ಬಿಹಾರದಲ್ಲಿ ಇಡೀ ಸೇತುವೆ, ರಸ್ತೆ ಕೊಚ್ಚಿ ಹೋಗಿದ್ದು ದೇಶಾದ್ಯಂತ ಸಂಚಲನ ಮೂಡಿಸಿತ್ತು. ಇತ್ತೀಚೆಗೆ ಮತ್ತೊಂದು ಅಚ್ಚರಿಯ ಘಟನೆ ನಡೆದಿದೆ. ದರ್ಬಂಗಾ ಜಿಲ್ಲೆಯ ಕೆರೆಯನ್ನು ರಾತ್ರೋರಾತ್ರಿ ನಶಿಸಲಾಗಿದೆ. ಅಂದು ಮಧ್ಯಾನ ಇದ್ದ ಕೆರೆ ಮರು ದಿನ ಬೆಳಗ್ಗೆ ಮಾಯವಾಗಿಬಿಟ್ಟಿದೆ.
ರಾತ್ರೋರಾತ್ರಿ ಕೆರೆಯನ್ನೆ ಕಳ್ಳರು ಮಾಯ ಮಾಡಿ ಬಿಟ್ಟಿದ್ದಾರೆ. ಕೆರೆಗೆ ಮಣ್ಣು ತುಂಬಿ ಅದರ ಸುಳಿವೇ ಸಿಗದಂತೆ ಅದರ ಮೇಲೆ ಗುಡಿಸಲನ್ನ ನಿರ್ಮಿಸಿದ್ದಾರೆ.
ಅಲ್ಲಿಯವರೆಗೆ ಅಲ್ಲಿ ಕಾಣಿಸಿದ ಕೆರೆಯಲ್ಲಿ ಮಣ್ಣು ತುಂಬಿತ್ತು. ಬೆಳಗ್ಗೆ ಎದ್ದಾಗ ಕೆರೆಯ ಮೇಲೆ ಮನೆ ಉದ್ಭವಿಸಿತ್ತು. ಏನಿದು ಅಚ್ಚರಿ ಅಂತ ನೋಡಿದಾಗಲೇ ಗೊತ್ತಾಗಿದ್ದು ಅದು ಒಂದು ಲ್ಯಾಂಡ್ ಮಾಫಿಯಾ ಅಂತ.
ಇದನ್ನೂ ಓದಿ: ಹ್ಯಾಂಡ್ ಗ್ಲೌಸ್ ಫ್ಯಾಕ್ಟರಿಯಲ್ಲಿ ಅಗ್ನಿ ದರುಂತ..! 6 ಜನ ಕಾರ್ಮಿಕರು ಸಜೀವ ದಹನ
ಮೀನು ಹಿಡಿಯಲು ಮತ್ತು ತೋಟಗಾರಿಕೆಗಾಗಿ ಕೆರೆಯ ನೀರಿನ ಮೇಲೆ ಜನರು ಅವಲಂಬಿತವಾಗಿದ್ದರು. ಅದರೆ, ಅವರು ಅಲ್ಲಿಗೆ ಬಂದು ನೋಡಿದಾಗ ಕೆರೆಯೇ ಮಾಯವಾಗಿದೆ. ಇದನ್ನ ಕಂಡ ಊರಿನ ಜನರು ಅಚ್ಚರಿಗೊಂಡಿದ್ದಾರೆ. ಪೋಲಿಸರಿಗೂ ದೂರು ನೀಡಲಾಗಿದ್ದು ಪೋಲಿಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.
ದರ್ಬಂಗಾ ಜಿಲ್ಲೆಯಲ್ಲಿ ಭೂ ಮಾಫಿಯಾ ವ್ಯಾಪಕವಾಗಿದೆ. ಈ ಜಿಲ್ಲೆಯಲ್ಲಿ ಸರಕಾರಿ ಕೆರೆಯನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲಿ ಮಾಫಿಯಾದವರು ಕೆರೆಯನ್ನು ಆಕ್ರಮಿಸಿಕೊಂಡಿದ್ದಾರೆ.
ಇದನ್ನೂ ಓದಿ: ಇಸ್ರೋದ ಎಜಿಇಒಎಸ್: ಅಂಟಾರ್ಕ್‌ಟಿಕಾದ ರಿಮೋಟ್ ಸೆನ್ಸಿಂಗ್ ನೇತೃತ್ವ
ಘಟನೆ ನಡೆದ ಸ್ಥಳದಲ್ಲಿ ರಾತ್ರಿ ಲಾರಿಗಳ ಸಂಚಾರ ಹೆಚ್ಚಾಗಿತ್ತು. ಸತತ 10ರಿಂದ 15 ದಿನಗಳ ಕಾಲ ರಾತ್ರಿ ವೇಳೆ ಟ್ರಕ್‌ಗಳು ಸಂಚರಿಸುತ್ತಿದ್ದವು. ಇದರ ಜೊತೆಗೆ ಅನೇಕ ಯಂತ್ರಗಳ ಕಲರವವೂ ಇತ್ತು. ಆದರೆ ಏನು ನಡೆಯುತ್ತಿದೆ ಎಂದು ಯಾರಿಗೂ ತಿಳಿದಿರಲಿಲ್ಲ.
ಈ ಎಲ್ಲ ಕೆಲಸ ರಾತ್ರಿಯ ವೇಳೆ ನಡೆದಿದೆ ಎಂದು ಸ್ಥಳೀಯರು ಹೇಳಿದ್ದು ಆ ಜಮೀನು ಯಾರದ್ದು? ಅದು ಯಾರ ಗುಡಿಸಲು? ಇನ್ನೂ ಯಾರಿಗೂ ತಿಳಿದಿಲ್ಲ ಎಂದು ಡಿಎಸ್ಪಿ ಕುಮಾರ್ ತಿಳಿಸಿದ್ದಾರೆ. ಈ ವಿಚಿತ್ರ ಘಟನೆಯನ್ನ ಕೈಗೆತ್ತಿಕೊಂಡಿರುವ ಪೋಲಿಸರು ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳು ಸಿಕ್ಕ ನಂತರವಷ್ಟೇ ಇದರ ಹಿಂದಿನ ಸತ್ಯ ಹೊರಬೀಳಲಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ