Crime News: ಹುಬ್ಬಳ್ಳಿ ನಗರದ ಗಾಮಗಟ್ಟಿಯ ಮನೆಯೊಂದರಲ್ಲಿ ಮಹಿಳೆಯೊಂದಿಗೆ ಪೊಲೀಸ್ ಪೇದೆ (Police Constable) ನೇಣಿಗೆ ಶರಣಾಗಿರುವ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಇದೊಂದು ಆತ್ಮಹತ್ಯೆ ಪ್ರಕರಣ ಅಲ್ಲ, ಸಂಶಯಾಸ್ಪದ ಸಾವು (Suspicious Death) ಎಂದು ನವನಗರ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ  ಪ್ರಕರಣ ದಾಖಲಾಗಿದೆ.


COMMERCIAL BREAK
SCROLL TO CONTINUE READING

ಹೌದು, ಧಾರವಾಡ ಸಂಚಾರಿ ಪೊಲೀಸ್ ಠಾಣೆಯಲ್ಲಿ (Dharwad Police Station) ಮುಖ್ಯ ಪೇದೆಯಾಗಿದ್ದ ಮಹೇಶ್ ಹೆಸರೂರು ಮೂಲತಃ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಶಿಗ್ಲಿ  ಗ್ರಾಮದವರು. ಪೊಲೀಸ್ ಪೇದೆಯೊಂದಿಗೆ ಹೆಣವಾಗಿ ಪತ್ತೆಯಾಗಿರುವ ಮಹಿಳೆ ವಿಜಯಲಕ್ಷ್ಮಿ ಮೂಲತಃ ಗದಗ ಜಿಲ್ಲೆಯ ಚಿಕೇನಕೊಪ್ಪದವರು. ಇವರು ಹುಬ್ಬಳ್ಳಿಯಲ್ಲಿಯೇ ವಾಸವಾಗಿದ್ದವರು.‌ 


ಮಹೇಶ್ ಮಾತ್ರ ಇತ್ತೀಚಿಗೆ ಅಕ್ಕನ ಮಗಳನ್ನ ಮದುವೆಯಾಗಿದ್ದರು ಸಹ ಹೆಂಡತಿ ಜೊತೆಗೆ ವಾಸವಿರಲಿಲ್ಲ. ಅನೈತಿಕ ಸಂಬಂಧ (Illegal Relationship) ಇದ್ದ ಮಹಿಳೆ ವಿಜಯಲಕ್ಷ್ಮಿ ಜೊತೆಗೆ ಇತ್ತೀಚಿಗೆ ಪ್ರತ್ಯೇಕವಾಗಿ ಮನೆ ಮಾಡಿಕೊಂಡಿದ್ದ. 


ಇದನ್ನೂ ಓದಿ- ಅಥಣಿಯಲ್ಲಿ ಕಾರ್ಖಾನೆ ಬಾಯ್ಲರ್ ಬ್ಲಾಸ್ಟ್: ಓರ್ವ ಮಹಿಳಾ ಕಾರ್ಮಿಕೆ ಮೃತ್ಯು


ಮಹೇಶ್ ಹೆಸರೂರು ಸಹ ಹೆಂಡತಿ ಜೊತೆ ಇರಲಿಲ್ಲ. ವಿಜಯಲಕ್ಷ್ಮಿ ಸಹ ತನ್ನ ಗಂಡನ ಜೊತೆಗೆ ಇರಲಿಲ್ಲ.‌ ಪೊಲೀಸ್ ಪೇದೆ ಮಹೇಶ್ ಹಾಗೂ ವಿಜಯಲಕ್ಷ್ಮಿ ಅನೈತಿಕ ಸಂಬಂಧ ಹೊಂದಿದ್ದರು. ಆದರೆ ಈ ಬಗ್ಗೆ ಸಾಕಷ್ಟು ಸಲ ರಾಜಿ ಪಂಚಾಯತಿ ಸಹ ನಡೆದಿದೆ.‌ ಮಹೇಶ್ ಹಾಗೂ ವಿಜಯಲಕ್ಷ್ಮಿ ಯಾವುದೇ ಕಾರಣಕ್ಕೂ ಬಿಟ್ಟು ಇರಲು ಒಪ್ಪಿರಲಿಲ್ಲ ಎನ್ನಲಾಗಿದೆ. ಈಗ ಆತ್ಮಹತ್ಯೆ ನಂತರ ವಿಜಯಲಕ್ಷ್ಮಿ ವಾಲಿ ಹಾಗೂ ಮಹೇಶ್ ಕುಟುಂಬಸ್ಥರಿಂದ ತಕರಾರು ತೆಗೆದು ದೂರು ನೀಡಿದ್ದಾರೆ. 


ತನ್ನ ಅಕ್ಕ ಒಳ್ಳೆಯವಳು. ಆಕೆಗೆ ಇಬ್ಬರು ಮಕ್ಕಳಿದ್ದು, ನನ್ನ ಅಕ್ಕ ಆತ್ಮಹತ್ಯೆ ಮಾಡಿಕೊಳ್ಳುವವಳಲ್ಲ ಎಂದು ವಿಜಯಲಕ್ಷ್ಮಿ ಸಹೋದರಿ ಕಮಲಾ ಹಾಗೂ ಸಹೋದರ ನಾಗರಾಜ್ ಹೇಳಿದ್ದು ಆತ್ಮಹತ್ಯೆಗೆ ಸಂಶಯ ವ್ಯಕ್ತಪಡಿಸಿದ್ದಾರೆ.


ಇನ್ನೂ ಎರಡು ಕುಟುಂಬದ ಕಡೆಯಿಂದ ತಕಾರರು ಬಂದ ಹಿನ್ನೆಲೆಯಲ್ಲಿ ಇದೊಂದು ಸಂಶಸಾಸ್ಪದ ಸಾವು ಎಂದು ಪ್ರಕರಣ ದಾಖಲು ಮಾಡಲಾಗಿದೆ. 


ಇದನ್ನೂ ಓದಿ- 5 ಲಕ್ಷ ಲಂಚಕ್ಕೆ ಬೇಡಿಕೆ; ರೆಡ್‌ಹ್ಯಾಂಡ್ ಆಗಿ ʼಲೋಕಾʼ ಬಲೆಗೆ ಬಿದ್ದ PSI & ಪೇದೆ..!


ಧಾರವಾಡ ಸಂಚಾರಿ ಪೊಲೀಸ್ ಠಾಣೆಯ ಕಾನ್ಸ್​​ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹೇಶ ಹೆಸರೂರು, ಬೀದಿ ಬದಿ ವ್ಯಾಪಾರ ಮಾಡಿಕೊಂಡಿದ್ದ ವಿಜಯಲಕ್ಷ್ಮೀ ವಾಲಿ(30)   ಇಬ್ಬರ ನಡುವಿನ ಅನೈತಿಕ ಸಂಬಂಧದ ಕುರಿತು ಮಹೇಶ್ ಗ್ರಾಮದ ಹಿರಿಯರು ಹಾಗೂ ವಿಜಯಲಕ್ಷ್ಮಿ ಬಗ್ಗೆ ಸ್ಥಳೀಯರು ಸಹ ಮಾಹಿತಿ ನೀಡಿದ್ದಾರೆ.


15 ದಿನದ ಹಿಂದೆ ವಿಜಯಲಕ್ಷ್ಮೀ ಜತೆ ಮನೆ ಮಾಡಿಕೊಂಡಿದ್ದ‌ ಪೊಲೀಸ್ ಪೇದೆ ಮಹೇಶ್ ಇದೀಗ ಏಕಾಏಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅನೈತಿಕ ಸಂಬಂಧವೇ ಆತ್ಮಹತ್ಯೆಗೆ ಕಾರಣ ಎಂದು ಮೇಲ್ನೋಟಕ್ಕೆ ಹೇಳಲಾಗುತ್ತಿದೆ. ಆದರೆ  ವಿಜಯಲಕ್ಷ್ಮಿ, ಮಹೇಶ್ ಶವವನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು ಮರಣೋತ್ತರ ಪರೀಕ್ಷೆ ನಂತರ ಸತ್ಯಾಸತ್ತತೆ ಹೊರಬೀಳಬೇಕಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.