ರೋಹಿತ್ ಶರ್ಮಾ ಬಳಿಕ ಟೀಂ ಇಂಡಿಯಾದ ಮುಂದಿನ ನಾಯಕ ಯಾರು? ಈ 3 ಆಟಗಾರರ ನಡುವೆ ಇದೆ ಭಾರೀ ಪೈಪೋಟಿ

Team India: ಗೌತಮ್ ಗಂಭೀರ್ ಬಿಸಿಸಿಐ ಜೊತೆಗೆ ಸಹಿ ಹಾಕಲಿರುವ ಒಪ್ಪಂದ 2027ರ ಏಕದಿನ ವಿಶ್ವಕಪ್’ವರೆಗೆ ಮುಂದುವರಿಯಲಿದೆ. ಒಂದು ವೇಳೆ ಗೌತಮ್ ಗಂಭೀರ್ ಆಗಮನವಾದರೆ, ಟೀಂ ಇಂಡಿಯಾದಲ್ಲಿ ಹೊಸ ಶಕೆ ಆರಂಭವಾಗುವುದು ಮಾತ್ರ ಖಚಿತ.

Written by - Bhavishya Shetty | Last Updated : Jun 20, 2024, 08:11 PM IST
    • ಭಾರತದ ಹೊಸ ನಾಯಕನನ್ನು ಸಿದ್ಧಪಡಿಸುವುದು ಗೌತಮ್ ಗಂಭೀರ್ ಗುರಿ
    • ಗೌತಮ್ ಗಂಭೀರ್ ಮುಖ್ಯ ಕೋಚ್ ಆಗಿ ನೇಮಕವಾಗುವುದು ಬಹುತೇಕ ಖಚಿತ
    • ರೋಹಿತ್ ಶರ್ಮಾ ನಾಯಕತ್ವವನ್ನು ಹೆಚ್ಚು ಕಾಲ ನಿರ್ವಹಿಸಲು ಸಾಧ್ಯವಿಲ್ಲ
ರೋಹಿತ್ ಶರ್ಮಾ ಬಳಿಕ ಟೀಂ ಇಂಡಿಯಾದ ಮುಂದಿನ ನಾಯಕ ಯಾರು? ಈ 3 ಆಟಗಾರರ ನಡುವೆ ಇದೆ ಭಾರೀ ಪೈಪೋಟಿ title=
Rohit Sharma

Team India: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಶೀಘ್ರದಲ್ಲೇ ಟೀಂ ಇಂಡಿಯಾದ ಮುಂದಿನ ಕೋಚ್ ಹೆಸರನ್ನು ಬಹಿರಂಗಪಡಿಸುವ ಸಾಧ್ಯತೆ ಇದೆ. ಇನ್ನೊಂದೆಡೆ ಗೌತಮ್ ಗಂಭೀರ್ ಮುಖ್ಯ ಕೋಚ್ ಆಗಿ ನೇಮಕವಾಗುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.

ಗೌತಮ್ ಗಂಭೀರ್ ಬಿಸಿಸಿಐ ಜೊತೆಗೆ ಸಹಿ ಹಾಕಲಿರುವ ಒಪ್ಪಂದ 2027ರ ಏಕದಿನ ವಿಶ್ವಕಪ್’ವರೆಗೆ ಮುಂದುವರಿಯಲಿದೆ. ಒಂದು ವೇಳೆ ಗೌತಮ್ ಗಂಭೀರ್ ಆಗಮನವಾದರೆ, ಟೀಂ ಇಂಡಿಯಾದಲ್ಲಿ ಹೊಸ ಶಕೆ ಆರಂಭವಾಗುವುದು ಮಾತ್ರ ಖಚಿತ. T20 ವಿಶ್ವಕಪ್ 2026 ಮತ್ತು ODI ವಿಶ್ವಕಪ್ 2027 ರಲ್ಲಿ ಟೀಮ್ ಇಂಡಿಯಾದ ನಾಯಕತ್ವವನ್ನು ವಹಿಸುವ ಭಾರತದ ಹೊಸ ನಾಯಕನನ್ನು ಸಿದ್ಧಪಡಿಸುವುದು ಗೌತಮ್ ಗಂಭೀರ್ ಅವರ ಗುರಿಯಾಗಿದೆ.

ಇದನ್ನೂ ಓದಿ: Super 8 ಮೊದಲ ಪಂದ್ಯದಲ್ಲಿ ಭಾರತ-ಅಫ್ಘನ್ ಮುಖಾಮುಖಿ: ಉಭಯ ತಂಡಗಳ ಬಲಾಬಲ, ಪಿಚ್ ರಿಪೋರ್ಟ್ ಮಾಹಿತಿ

37ರ ಹರೆಯದ ರೋಹಿತ್ ಶರ್ಮಾ ಟೀಂ ಇಂಡಿಯಾ ನಾಯಕತ್ವವನ್ನು ಹೆಚ್ಚು ಕಾಲ ನಿರ್ವಹಿಸಲು ಸಾಧ್ಯವಿಲ್ಲ. ಹೀಗಿರುವಾಗ ಏಕದಿನ ಮತ್ತು ಟಿ20 ಮಾದರಿಗಳಲ್ಲಿ ರೋಹಿತ್ ಶರ್ಮಾ ನಂತರದ ನಾಯಕನನ್ನಾಗಿ ಮಾಡುವ ಸಾಮರ್ಥ್ಯ ಹೊಂದಿರುವ ಮೂವರು ಆಟಗಾರರಿದ್ದಾರೆ.

ರಿಷಬ್ ಪಂತ್

ರಿಷಬ್ ಪಂತ್ ಅತ್ಯುತ್ತಮ ವಿಕೆಟ್ ಕೀಪರ್ ಮತ್ತು ಅತ್ಯುತ್ತಮ ಬ್ಯಾಟ್ಸ್‌ಮನ್. ಹೀಗಿರುವಾಗ ಇವರಲ್ಲಿ ನಾಯಕನಾಗುವ ಎಲ್ಲಾ ಗುಣಗಳಿವೆ. ಇನ್ನೊಂದೆಡೆ ಪಂತ್ ಐಪಿಎಲ್‌’ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನಾಯಕತ್ವದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಎಂಎಸ್ ಧೋನಿಯಷ್ಟೇ ಶಕ್ತಿ ಹೊಂದಿರುವ ಪಂತ್, ಮೈದಾನದಲ್ಲಿರುವ ಇತರ ಆಟಗಾರರಿಗಿಂತ ವಿಕೆಟ್‌ ಕೀಪಿಂಗ್’ನಲ್ಲಿ ಚಾಣಾಕ್ಷತೆ ಹೊಂದಿದ್ದಾರೆ.

ಹಾರ್ದಿಕ್ ಪಾಂಡ್ಯ

ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಕೂಡ ರೋಹಿತ್ ಶರ್ಮಾ ಬದಲಿಗೆ ಏಕದಿನ ಮತ್ತು ಟಿ20 ನಾಯಕತ್ವ ವಹಿಸುವ ಸಾಮರ್ಥ್ಯ ಹೊಂದಿದ್ದಾರೆ. ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಕಪಿಲ್ ದೇವ್ ಅವರ ಶೈಲಿಯ ಒಂದು ನೋಟವನ್ನು ಕಾಣಬಹುದು. ಇನ್ನು ನಾಯಕತ್ವದ ಚೊಚ್ಚಲ ಋತುವಿನಲ್ಲಿ, ಹಾರ್ದಿಕ್ ಪಾಂಡ್ಯ ಗುಜರಾತ್ ಟೈಟಾನ್ಸ್ ಐಪಿಎಲ್ 2022 ಪ್ರಶಸ್ತಿಯನ್ನು ಗೆಲ್ಲುವಂತೆ ಮಾಡಿದ್ದರು. ನಿರಂತರವಾಗಿ ಗಂಟೆಗೆ 140 ಕಿಮೀ ವೇಗದಲ್ಲಿ ಬೌಲಿಂಗ್ ಮಾಡುವ ಪ್ರತಿಭೆ ಇವರದ್ದು.

ಇದನ್ನೂ ಓದಿ: ಇದು ಒಂದೇ ಒಂದು ಕಾಡು ಇಲ್ಲದ ದೇಶ… ಇಲ್ಲಿ ಗಿಡಗಳು ಸಹ ಬೆಳೆಯುವುದಿಲ್ಲ!! ಯಾವುದು ಗೊತ್ತಾ ಆ ದೇಶ?

ಶ್ರೇಯಸ್ ಅಯ್ಯರ್

ಶ್ರೇಯಸ್ ಅಯ್ಯರ್ ಭಾರತದ ಏಕದಿನ ಮತ್ತು ಟಿ20 ನಾಯಕರಾಗಲು ದೊಡ್ಡ ಸ್ಪರ್ಧಿ. ಅಯ್ಯರ್ ನಾಯಕತ್ವ ಪಡೆದರೆ ಟೀಂ ಇಂಡಿಯಾ ಭವಿಷ್ಯವನ್ನೇ ಬದಲಿಸಬಹುದು. ಟೀಂ ಇಂಡಿಯಾಕ್ಕೆ ಶ್ರೇಯಸ್ ಅಯ್ಯರ್ ಅವರಂತಹ ನಿರ್ಭೀತ ಬ್ಯಾಟ್ಸ್‌ಮನ್ ಮತ್ತು ಬುದ್ಧಿವಂತ ನಾಯಕನ ಅಗತ್ಯವಿದೆ. ಶ್ರೇಯಸ್ ಅಯ್ಯರ್ ಐಪಿಎಲ್‌’ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡದ ನಾಯಕರಾಗಿದ್ದಾರೆ. ಅವರ ನಾಯಕತ್ವದಲ್ಲಿ, ಐಪಿಎಲ್ 2024 ಟ್ರೋಫಿಯನ್ನು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಗೆದ್ದಿತ್ತು. ಇನ್ನು ಅಯ್ಯರ್, ಗೌತಮ್ ಗಂಭೀರ್ ಜೊತೆ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News