ಹುಡುಗಿಯರ ಜೊತೆ ಮಜಾ ಮಾಡಿ ಕದ್ದ ಚಿನ್ನ ಟಿಪ್ಸ್ ಕೊಡುತ್ತಿದ್ದ ಕುಖ್ಯಾತ ಕಳ್ಳನ ಬಂಧನ
ಕದ್ದ ಚಿನ್ನಾಭರಣವನ್ನು ರೌಡಿ ಶೀಟರ್ ಗಳಾದ ಅನಿಲ್, ಯಶವಂತ್ ಎಂಬುವವರಿಗೆ ನೀಡುತ್ತಿದ್ದ. ಕದ್ದ ಚಿನ್ನವನ್ನು ಇವರಿಬ್ಬರು ಮಾರಿ ಪ್ರಕಾಶನಿಗೆ ಹಣ ನೀಡುತ್ತಿದ್ದರು. ಇನ್ನೂ ಹುಡುಗಿಯರ ಶೋಕಿ ಹೊಂದಿದ್ದ ಪ್ರಕಾಶ ಲೊಕ್ಯಾಂಟೋ ಆ್ಯಪ್ ಮೂಲಕ ಹುಡುಗಿಯರನ್ನು ಕರೆಸಿಕೊಂಡು ಮಜಾ ಮಾಡಿ ಅವರಿಗೆ ಟಿಪ್ಸ್ ಅಂತಾ ಕದ್ದ ಚಿನ್ನವನ್ನು ಕೊಡುತ್ತಿದ್ದ ಎಂಬುದು ತನಿಖೆ ವೇಳೆ ಗೊತ್ತಾಗಿದೆ.
ಬೆಂಗಳೂರು: ಕಳ್ಳತನ ಮಾಡಿ ಹುಡುಗಿಯರ ಜೊತೆ ಮಜಾ ಮಾಡುತ್ತಿದ್ದ ಕುಖ್ಯಾತ ಮನೆಗಳ್ಳ ಸೇರಿ ಮೂವರನ್ನು ಹೆಚ್ ಎಸ್ ಆರ್ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ಕುಖ್ಯಾತ ಕಳ್ಳ ಪ್ರಕಾಶ್ ಅಲಿಯಾಸ್ ಬಾಲಾಜಿ ಎಂಬಾತನೇ ಬಂಧಿತ ಆರೋಪಿ. ಈತ 2005 ರಿಂದ ಕಳ್ಳತನವನ್ನೇ ಕಾಯಕ ಮಾಡಿಕೊಂಡಿದ್ದ. ಒಟ್ಟು 78 ಪ್ರಕರಣದಲ್ಲಿ ಭಾಗಿಯಾಗಿ ಅನೇಕ ಬಾರಿ ಜೈಲು ಸೇರಿ ಜಾಮೀನು ಪಡೆದು ಜೈಲಿಂದ ಬಿಡುಗಡೆಯಾಗಿ ಮತ್ತೆ ಅದೇ ಕೃತ್ಯದಲ್ಲಿ ತೊಡಗಿದ್ದ. ಹೀಗಾಗಿ ಈತನ ವಿರುದ್ಧ 17 ವಾರೆಂಟ್ ಜಾರಿಯಾಗಿವೆ. ಆದರೆ ಎಷ್ಟೇ ಬಾರಿ ಜೈಲಿಗೆ ಹೋಗಿ ಬಂದ್ರೂ ಈತ ಬುದ್ದಿ ಕಲಿತಿರಲಿಲ್ಲ.
ಜೊಮ್ಯಾಟೋ ಡಿಲಿವೆರಿ ಬಾಯ್ಸ್ ಹೆಸರಲ್ಲಿ ಮನೆಗಳಿಗೆ ನುಗ್ಗುತ್ತಿದ್ದ ಈತ, ಮನೆಯಲ್ಲಿ ಯಾರು ಇಲ್ಲದನ್ನ ಗಮನಿಸಿ ನಕಲಿ ಕೀ ಬಳಸಿ ಮನೆಯ ಬಾಗಿಲು ಓಪನ್ ಮಾಡುತ್ತಿದ್ದ. ನಂತರ ಮನೆಯಲ್ಲಿನ ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದ. ಈತ ಅದೆಷ್ಟೂ ಕಿಲಾಡಿ ಎಂದರೆ ಮನೆಗಳಿಗೆ ಲಾಕ್ ಸಿಸ್ಟಂ ಹಾಕುವಾಗಲೇ ಕೀ ನಕಲು ಮಾಡಿಕೊಳ್ಳುತ್ತಿದ್ದ. ಪ್ರತಿಷ್ಠಿತ ಯುರೋಪ್ ಹಾಗೂ ಗಾಡ್ರೇಜ್ ಕಂಪನಿಯ ಡೋರ್ ಸಹ ಓಪನ್ ಮಾಡುತ್ತಿದ್ದ ಎನ್ನಲಾಗಿದೆ.
ಇದನ್ನೂ ಓದಿ- Crime News: ಗರ್ಭಿಣಿಯನ್ನು ಬಲಿ ಪಡೆದ ಆಟೋ ರಿಕ್ಷಾ
ಕದ್ದ ಚಿನ್ನಾಭರಣವನ್ನು ರೌಡಿ ಶೀಟರ್ ಗಳಾದ ಅನಿಲ್, ಯಶವಂತ್ ಎಂಬುವವರಿಗೆ ನೀಡುತ್ತಿದ್ದ. ಕದ್ದ ಚಿನ್ನವನ್ನು ಇವರಿಬ್ಬರು ಮಾರಿ ಪ್ರಕಾಶನಿಗೆ ಹಣ ನೀಡುತ್ತಿದ್ದರು. ಇನ್ನೂ ಹುಡುಗಿಯರ ಶೋಕಿ ಹೊಂದಿದ್ದ ಪ್ರಕಾಶ ಲೊಕ್ಯಾಂಟೋ ಆ್ಯಪ್ ಮೂಲಕ ಹುಡುಗಿಯರನ್ನು ಕರೆಸಿಕೊಂಡು ಮಜಾ ಮಾಡಿ ಅವರಿಗೆ ಟಿಪ್ಸ್ ಅಂತಾ ಕದ್ದ
ಚಿನ್ನವನ್ನು ಕೊಡುತ್ತಿದ್ದ ಎಂಬುದು ತನಿಖೆ ವೇಳೆ ಗೊತ್ತಾಗಿದೆ.
ಇದನ್ನೂ ಓದಿ- ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಸಿದ ಪಿಎಸ್ಐ ಸಸ್ಪೆಂಡ್: ಎಫ್ಐಆರ್ ದಾಖಲಿಸಿ ತನಿಖೆ
ಸದ್ಯ ಕಾರ್ಯಾಚರಣೆ ನಡೆಸಿರುವ ಹೆಚ್ ಎಸ್ ಆರ್ ಲೇಔಟ್ ಪೊಲೀಸರು 1 ಕೋಟಿಗೂ ಅಧಿಕ ಮೌಲ್ಯದ ಚಿನ್ನಾಭರಣ ಸೀಜ್ ಮಾಡಿ ಮೂವರು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.