ನವದೆಹಲಿ: ಓದು ಅಂತಾ ಬುದ್ಧಿವಾದ ಹೇಳಿದ್ದಕ್ಕೆ 9 ವರ್ಷದ ಬಾಲಕಿಯೊಬ್ಬಳು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ತಮಿಳುನಾಡಿನಲ್ಲಿ ಘಟನೆ ನಡೆದಿದೆ.


COMMERCIAL BREAK
SCROLL TO CONTINUE READING

ಮೃತ ಬಾಲಕಿಯನ್ನು ಪ್ರತೀಕ್ಷಾ ಎಂದು ಗುರುತಿಸಲಾಗಿದೆ. ಈಕೆ ತನ್ನ ರೀಲ್ಸ್ ಮೂಲಕ ‘ರೀಲ್ಸ್ ಕ್ವೀನ್ʼ ಎಂದು ಖ್ಯಾತಿ ಗಳಿಸಿದ್ದಳು. 4ನೇ ತರಗತಿಯಲ್ಲಿ  ಓದುತ್ತಿದ್ದ ಪ್ರತೀಕ್ಷಾ ಕಳೆದ 6 ತಿಂಗಳಲ್ಲಿ 70ಕ್ಕೂ ಹೆಚ್ಚು ರೀಲ್ಸ್‍ಗಳನ್ನು ಮಾಡಿದ್ದಳು. ಈಕೆಯನ್ನು ಜನರು ‘ರೀಲ್ಸ್ ಕ್ವೀನ್’ ಎಂದು ಕರೆಯುತ್ತಿದ್ದರು.


ಇದನ್ನೂ ಓದಿ: ರಾಷ್ಟ್ರ ರಾಜಧಾನಿಯಲ್ಲಿ ಮತ್ತೆ ಕರೋನಾ ಕರಿಛಾಯೆ ! ತುರ್ತು ಸಭೆ ಕರೆದ ಆರೋಗ್ಯ ಇಲಾಖೆ  


ಮಂಗಳವಾರ(ಮಾರ್ಚ್ 28) ರಾತ್ರಿ 8 ಗಂಟೆ ವೇಳೆ ಪ್ರತೀಕ್ಷಾ ತನ್ನ ಅಜ್ಜಿಯ ಮನೆಯ ಮುಂದೆ ಸ್ನೇಹಿತರೊಂದಿಗೆ ಆಟವಾಡುತ್ತಿದ್ದಳು. ಆಕೆಯ ಪೋಷಕರಾದ ಕೃಷ್ಣಮೂರ್ತಿ ಮತ್ತು ಕರ್ಪಗಂ ರಾತ್ರಿಯಾದರೂ ಆಟವಾಡುತ್ತಿದ್ದೀಯಲ್ಲ ಅಂತಾ ಗದರಿಸಿದ್ದರು. ಮನೆಗೆ ಹೋಗಿ ಓದಿಕೊಳ್ಳುವಂತೆ ಬುದ್ಧಿ ಹೇಳಿದ್ದರು. ಬಾಲಕಿಯ ಕೈಗೆ ಮನೆಯ ಕೀಲಿ ನೀಡಿದ್ದ ಪೋಷಕರು ಹೊರಗಡೆ ಹೋಗಿದ್ದರು.


ಬಳಿಕ ಸೀದಾ ಮನೆಗೆ ಬಂದ ಬಾಲಕಿ ಪ್ರತೀಕ್ಷಾ ಮನೆಯಲ್ಲಿ ಯಾರೂ ಇಲ್ಲದ್ದನ್ನು ನೋಡಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪೋಷಕರು ಗದರಿಸಿ ಬುದ್ಧಿವಾದ ಹೇಳಿದ್ದಕ್ಕೆ ಬಾಲಿಕ ಸೂಸೈಡ್ ಮಾಡಿಕೊಂಡಿದ್ದಾಳೆ. ಪೋಷಕರು ಬಂದು ಮನೆ ಬಾಗಿಲು ಒಳಗಿನಿಂದ ಮುಚ್ಚಿರುವುದನ್ನು ನೋಡಿದ್ದಾರೆ. ಪದೇ ಪದೇ ಬಾಗಿಲು ತಟ್ಟಿದರೂ ಪ್ರತೀಕ್ಷಾ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಬಳಿಕ ಆಕೆಯ ತಂದೆ ಬಾಗಿಲು ಮುರಿದು ಮನೆಯೊಳಗೆ ಪ್ರವೇಶಿಸಿದಾಗ ಪ್ರತೀಕ್ಷಾ ಕಿಟಕಿಯ ಗ್ರಿಲ್‍ಗೆ ಟವೆಲ್‌ನಿಂದ ನೇಣುಹಾಕಿಕೊಂಡಿರುವುದು ಕಂಡುಬಂದಿದೆ.


ಇದನ್ನೂ ಓದಿ: ಇಂದೋರ್‌ನಲ್ಲಿ ದೇವಸ್ಥಾನದ ಮೆಟ್ಟಿಲುಬಾವಿ ಕುಸಿದು 11 ಜನರು ಸಾವು


ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಪ್ರತೀಕ್ಷಾಳನ್ನು ಕೂಡಲೇ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಪ್ರಯೋಜನವಾಗಲಿಲ್ಲ. ಆಕೆ ಸಾವನ್ನಪ್ಪಿದ್ದಾಳೆಂದು ವೈದ್ಯರು ತಿಳಿಸಿದರು. ಈ ಬಗ್ಗೆ ತಿರುವಳ್ಳೂರು ಟೌನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.   


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.