Bengaluru Crime: ಬೆಂಗಳೂರು: ಓದಿದ್ದು ಬಿಇ. ಆಗಿದ್ದು ಪ್ರಸಿದ್ಧ ಮೊಬೈಲ್ ಕಂಪನಿಯಲ್ಲಿ ಎಲೆಕ್ಟ್ರಾನಿಕ್ ಇಂಜಿನಿಯರ್. ಆದರೆ ಈಗ ಕುಖ್ಯಾತ ಅಂತರಾಜ್ಯ ಮನೆಗಳ್ಳ.  ವಿದ್ಯಾವಂತ, ಬುದ್ದಿವಂತನಾಗಿದ್ದ ಈ ಕಳ್ಳ ಈಗ ಬೈಯಪ್ಪನಹಳ್ಳಿ ಪೊಲೀಸರ ಅತಿಥಿಯಾಗಿದ್ದಾನೆ. ತಮಿಳುನಾಡು ಮೂಲದ ಮಾಮನಿ ಅಲಿಯಾಸ್ ಧೀನ ಬಂಧಿತ ಆರೋಪಿ. .


COMMERCIAL BREAK
SCROLL TO CONTINUE READING

ಇದನ್ನೂ ಓದಿ: 12 ವರ್ಷಗಳ ಬಳಿಕ ಈ ರಾಶಿಗೆ ಭಾಗ್ಯಗಳ ಸರಮಾಲೆ ತಂದ ಗುರು: ಹಣದ ಮಳೆ ಗ್ಯಾರಂಟಿ, ಸುಖ-ಸಮೃದ್ಧಿ ಹೆಚ್ಚಳ


ಮನೆಯ ಬಾಗಿಲನ್ನು ಕಬ್ಬಿಣದ ರಾಡ್ ನಿಂದ ಮುರಿದು ಕಳ್ಳತನ ಮಾಡುತ್ತಿದ್ದ ಮಾಮನಿಯಿಂದ ಬರೊಬ್ಬರಿ ರೂ.29 ಲಕ್ಷ ಮೌಲ್ಯದ 512 ಗ್ರಾಂ ಚಿನ್ನಾಭರಣ ಸೀಜ್ ಮಾಡಲಾಗಿದೆ.


ಮಾಮನಿ ಕಳ್ಳನಾದ ಕಥೆಯೇ ಸಖತ್ ಇಂಟ್ರಸ್ಟಿಂಗ್ ಆಗಿದೆ. ಒಳ್ಳೆ ಕೆಲಸ, ಕೈತುಂಬಾ ಸಂಬಳ ಪಡೆಯತ್ತಿದ್ದ ಈತನ ಜೀವನ ಐಷಾರಾಮಿಯಾಗಿತ್ತು. ಆದರೆ 2019ರಲ್ಲಿ ಪ್ರಸಿದ್ಧ ಮೊಬೈಲ್ ಕಂಪನಿಯಿಂದ ಕೆಲಸ ಕಳೆದುಕೊಂಡಿದ್ದ. ಅತಿಯಾದ ನಷ್ಟದಿಂದ ಕಂಪನಿ ಹಲವರನ್ನ ಕೆಲಸದಿಂದ ತೆಗೆದಿತ್ತು. ಅಂದಿನಿಂದ ಬೇಸತ್ತಿದ್ದ ಮಾಮನಿ ಕೆಲಸ ಕಳೆದುಕೊಂಡು ಹಣಕ್ಕಾಗಿ ಕಳ್ಳತನದ ದಾರಿ ಹಿಡಿದಿದ್ದ.


ಇದನ್ನೂ ಓದಿ: ಏಷ್ಯಾಕಪ್ ಮಾದರಿಯಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ ಕಲೆಹಾಕಿದ ಕ್ರಿಕೆಟಿಗ ಯಾರು? ಭಾರತದ ಈ ದಿಗ್ಗಜನೇ ಅಗ್ರಸ್ಥಾನಿ


ಮೊದಮೊದಲು ಹುಡುಗರ ಜೊತೆ ಸೇರಿ ಡಕಾಯಿತಿ, ರಾಬರಿ  ಮನೆಗಳ್ಳತನಕ್ಕಿಳಿದಿದ್ದ ಧೀನ, ಬರುಬರುತ್ತಾ ಒಬ್ಬಂಟಿಯಾಗಿ ಮನೆಗಳ್ಳತನ ಮಾಡುತ್ತಿದ್ದ. 2020ರಲ್ಲಿ ಜೈಲು ಸೇರಿದ್ದ ಮಾಮನಿಗೆ ಬೈಯ್ಯಪ್ಪನಹಳ್ಳಿಯಿಂದ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಆರೋಪಿಯೊಬ್ಬ ಪರಿಚಯ ಆಗಿದ್ದ. ಇದೇ ವೇಳೆ ಬೈಯ್ಯಪ್ಪನಹಳ್ಳಿಯಲ್ಲೂ ಕೆಲ ಮನೆಗಳಲ್ಲಿ ಕಳ್ಳತನ ಮಾಡಿರೋದಾಗಿ ಹೇಳಿಕೊಂಡಿದ್ದ. ಈ ಮಾಹಿತಿಯನ್ನ ಆರೋಪಿಯೊಬ್ಬ ಪೊಲೀಸರಿಗೆ ತಿಳಿಸಿದ್ದು, ಇದೇ ಆಧಾರದ ಮೇಲೆ ಹಳೇ ಕೇಸ್ ನ ರೀ ಓಪನ್ ಮಾಡಿ ತನಿಖೆ ಮುಂದುವರಿಸಿ ಈಗ ಮಾಮನಿಯನ್ನು ಬಂಧಿಸಲಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.