Viral News: ಆರ್ಡರ್ ಮಾಡದೆಯೇ ಮಹಿಳೆ ಮನೆಗೆ ಬಂತು 100ಕ್ಕೂ ಹೆಚ್ಚು ಅಮೆಜಾನ್ ಪಾರ್ಸಲ್! ಮುಂದೆನಾಯ್ತು…

Amazon parcels: ಅಮೆಜಾನ್ ಬಾಕ್ಸ್‌’ಗಳಲ್ಲಿ ಸುಮಾರು 1,000 ಹೆಡ್‌ ಲ್ಯಾಂಪ್‌ಗಳು, 800 ಗಮ್ ಗನ್‌ ಗಳು ಮತ್ತು ಮಕ್ಕಳಿಗಾಗಿ ಡಜನ್‌ಗಟ್ಟಲೆ ಬೈನಾಕ್ಯುಲರ್‌ ಗಳು ಇದ್ದವು ಎಂದು CBS ಅಂಗಸಂಸ್ಥೆ WUSA ವರದಿ ಮಾಡಿದೆ.

Written by - Bhavishya Shetty | Last Updated : Aug 1, 2023, 01:29 PM IST
    • ಆರ್ಡರ್ ಮಾಡದೆಯೇ ಸುಮಾರು 100ಕ್ಕೂ ಹೆಚ್ಚು ಅಮೆಜಾನ್ ಆರ್ಡರ್ ಗಳು ಬಂದಿದೆ.
    • ಅಮೆಜಾನ್ ಬಾಕ್ಸ್‌’ಗಳಲ್ಲಿ ಸುಮಾರು 1,000 ಹೆಡ್‌ ಲ್ಯಾಂಪ್‌ಗಳು, 800 ಗಮ್ ಗನ್‌ ಗಳು ಇತ್ತು
    • ಅಗತ್ಯವಿರುವ ಜನರಿಗೆ ತಲುಪಿಸಲು ಸ್ಮಿತ್ ಪಟ್ಟಣದಾದ್ಯಂತ ಸಂಚಾರ ಮಾಡಿದ್ದಾರೆ
Viral News: ಆರ್ಡರ್ ಮಾಡದೆಯೇ ಮಹಿಳೆ ಮನೆಗೆ ಬಂತು 100ಕ್ಕೂ ಹೆಚ್ಚು ಅಮೆಜಾನ್ ಪಾರ್ಸಲ್! ಮುಂದೆನಾಯ್ತು… title=
Amazon parcels

Amazon parcels: ಅಮೆರಿಕದ ವರ್ಜೀನಿಯಾದಲ್ಲಿ ಮಹಿಳೆಯೊಬ್ಬರ ಮನೆಗೆ ಆರ್ಡರ್ ಮಾಡದೆಯೇ ಸುಮಾರು 100ಕ್ಕೂ ಹೆಚ್ಚು ಅಮೆಜಾನ್ ಆರ್ಡರ್ ಗಳು ಬಂದಿದೆ. ಈ ಆರ್ಡರ್ ಬರುತ್ತಿದಂತೆ ಮಹಿಳೆಗೆ ಶಾಕ್ ಆಗಿದೆ. ನ್ಯೂಯಾರ್ಕ್ ಪೋಸ್ಟ್ ವರದಿಯ ಪ್ರಕಾರ, ಈ ಪಾರ್ಸೆಲ್‌ ಗಳು 'ಲಿಕ್ಸಿಯಾವೋ ಜಾಂಗ್' ಎಂಬ ಹೆಸರಿನಲ್ಲಿತ್ತು. ಆದರೆ ಇವೆಲ್ಲವೂ ಪ್ರಿನ್ಸ್ ವಿಲಿಯಂ ಕೌಂಟಿಯಲ್ಲಿರುವ ಸಿಂಡಿ ಸ್ಮಿತ್‌ ಎಂಬವರ ಮನೆಗೆ ಬಂದಿದೆ.  

ಇದನ್ನೂ ಓದಿ: ಕ್ರಿಕೆಟ್ ಲೋಕಕ್ಕೆ ನಿವೃತ್ತಿ ಘೋಷಿಸಿದ ಇಬ್ಬರು ದಿಗ್ಗಜರು! ಒಬ್ಬ ಧೋನಿ ಪ್ರಿಯಮಿತ್ರ-ಮತ್ತೊಬ್ಬ ಯುವಿ ಸ್ನೇಹಿತ!

ಈ ಪಾರ್ಸೆಲ್‌ ಗಳಲ್ಲಿ ಏನಿತ್ತು?

ಅಮೆಜಾನ್ ಬಾಕ್ಸ್‌’ಗಳಲ್ಲಿ ಸುಮಾರು 1,000 ಹೆಡ್‌ ಲ್ಯಾಂಪ್‌ಗಳು, 800 ಗಮ್ ಗನ್‌ ಗಳು ಮತ್ತು ಮಕ್ಕಳಿಗಾಗಿ ಡಜನ್‌ಗಟ್ಟಲೆ ಬೈನಾಕ್ಯುಲರ್‌ ಗಳು ಇದ್ದವು ಎಂದು CBS ಅಂಗಸಂಸ್ಥೆ WUSA ವರದಿ ಮಾಡಿದೆ. ಈ ಬಾಕ್ಸ್‌ ಗಳನ್ನು ಅಗತ್ಯವಿರುವ ಜನರಿಗೆ ತಲುಪಿಸಲು ಸ್ಮಿತ್ ಪಟ್ಟಣದಾದ್ಯಂತ ಸಂಚಾರ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಮಾತನಾಡಿದ ಸ್ಮಿತ್, ”ನಾನು ಕಾರಿನಲ್ಲಿ ಹೆಡ್‌ ಲ್ಯಾಂಪ್ ಮತ್ತು ಗ್ಲೂ ಗನ್‌ ಹಿಡಿದುಕೊಂಡು ತಿರುಗಾಡುತ್ತಿದ್ದೆ. ನಾನು ಭೇಟಿಯಾದ ಎಲ್ಲರಿಗೂ ಅವುಗಳನ್ನು ನೀಡಿದ್ದೇನೆ. ನನ್ನ ಎಲ್ಲಾ ನೆರೆಹೊರೆಯವರು ಗಮ್ ಗನ್ ಮತ್ತು ಹೆಡ್‌ ಲ್ಯಾಂಪ್‌ ಗಳನ್ನು ತೆಗೆದುಕೊಂಡಿದ್ದಾರೆ. ಜೊತೆಗೆ ಕೆಲವನ್ನು ನಾಯಿಗಳ ಆಶ್ರಯ ಕೇಂದ್ರ ಮತ್ತು ಪ್ರಾಣಿಗಳ ಆಸ್ಪತ್ರೆಗಳಿಗೆ ನೀಡಿದ್ದೇನೆ” ಎಂದು ಹೇಳಿದರು.

ಸ್ಮಿತ್ ಅವರು 'ಬ್ರಶಿಂಗ್ ಸ್ಕ್ಯಾಮ್'ಗೆ ಸಿಲುಕಿರಬಹುದು ಎಂದು ಶಂಕಿಸಿದ್ದಾರೆ. ಮಾರಾಟಗಾರರು ಉತ್ಪನ್ನದ ರೇಟಿಂಗ್ ಅನ್ನು ಹೆಚ್ಚಿಸುವ ಸಲುವಾಗಿ ಫೇಕ್ ಪಾಸಿಟಿವ್ ರಿವ್ಯೂವ್ ಪಡೆಯಲು ಈ ರೀತಿ ಆರ್ಡರ್’ಗಳನ್ನು ಕಳುಹಿಸುತ್ತಿದ್ದಾರೆ ಎಂದನಿಸುತ್ತದೆ ಎಂದಿದ್ದಾರೆ.

ಇದನ್ನೂ ಓದಿ: IND vs WI T20 ಸರಣಿಗೆ ತಂಡ ಪ್ರಕಟ: 2 ವರ್ಷದ ಬಳಿಕ 26ರ ಹರೆಯದ ಈ ಬೌಲರ್’ಗೆ ಸ್ಥಾನ ನೀಡಿದ ಸಮಿತಿ

ಇನ್ನು ಮಹಿಳೆ ನೀಡಿದ ದೂರು ಸ್ವೀಕರಿಸಿ ಮಾತನಾಡಿದ ಅಮೆಜಾನ್ ಅಧಿಕಾರಿಗಳು “ಸ್ಮಿತ್‌ ಗೆ ಪ್ಯಾಕೇಜ್‌ ಗಳು ಅಮೆಜಾನ್ ಗೋಡೌನ್‌ ನಿಂದಲೇ ಬಂದಿದೆ. ಆದರೆ ಇವೆಲ್ಲವೂ ಮಾರಾಟವಾಗದ ಸರಕುಗಳಾಗಿದ್ದು, ಅದನ್ನು ಮಾರಾಟಗಾರರು ಯಾದೃಚ್ಛಿಕ ವಿಳಾಸಗಳಿಗೆ  ಕಳುಹಿಸುತ್ತಾರೆ. ಅದೇ ರೀತಿ ಸ್ಮಿತ್ ಮನೆಗೂ ಬಂದಿದೆ” ಎಂದು ಹೇಳಿದ್ದಾರೆ.  

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News