ಭರ್ಜರಿ ಬೇಟೆ: ಕೊಳ್ಳೇಗಾಲದಲ್ಲಿ 1.44 ಕೋಟಿ ಮೌಲ್ಯದ ಗಾಂಜಾ ವಶ
ಈಚರ್ ವಾಹನದಲ್ಲಿ ಹನೂರು ಭಾಗದಲ್ಲಿ ಮಾರಾಟ ಮಾಡಲು ಗಾಂಜಾ ತರಲಾಗುತ್ತಿದ್ದ ಖಚಿತ ಮಾಹಿತಿ ಮೇರೆಗೆ ಕೊಳ್ಳೇಗಾಲ ಗ್ರಾಮಾಂತರ ಠಾಣೆ ಪೊಲೀಸರು ದಾಳಿ ನಡೆಸಿ ಈ ಗಾಂಜಾ ಸಾಗಾಟ ಪತ್ತೆ ಹಚ್ಚಿದ್ದಾರೆ.
ಚಾಮರಾಜನಗರ: ಪೊಲೀಸರು ಭರ್ಜರಿ ಬೇಟೆಯಾಡಿದ್ದು ಬರೋಬ್ಬರಿ ಎರಡು ಕ್ವಿಂಟಾಲ್ ನಷ್ಟು ಒಣಗಾಂಜಾ ಸಾಗಾಟ ಮಾಡುತ್ತಿದ್ದವರನ್ನು ಬಂಧಿಸಿರುವ ಘಟನೆ ಕೊಳ್ಳೇಗಾಲದ ಮಧುವನಹಳ್ಳಿ ಬೈಪಾಸ್ ಬಳಿ ಮಂಗಳವಾರ ನಡೆದಿದೆ.
ಬೆಂಗಳೂರು ಮೂಲದ ಸೆಂದಿಲ್ ಕುಮಾರ್, ದಾವಣಗೆರೆಯ ರವಿಕುಮಾರ್, ಯಾದಗಿರಿಯ ಉಮಾಶಂಕರ್ ಹಾಗೂ ಹರಿಹರದ ವಿನಾಯಕ ಬಂಧಿತ ಆರೋಪಿಗಳು.
ಇದನ್ನೂ ಓದಿ- ವ್ಯಾಕ್ಸಿನೇಷನ್ ಪಡೆದ ಕೆಲವೇ ಹೊತ್ತಿನಲ್ಲಿ ಒಂದೂವರೆ ತಿಂಗಳ ಮಗು ಸಾವು
ಈಚರ್ ವಾಹನದಲ್ಲಿ ಹನೂರು ಭಾಗದಲ್ಲಿ ಮಾರಾಟ ಮಾಡಲು ಗಾಂಜಾ ತರಲಾಗುತ್ತಿದ್ದ ಖಚಿತ ಮಾಹಿತಿ ಮೇರೆಗೆ ಕೊಳ್ಳೇಗಾಲ ಗ್ರಾಮಾಂತರ ಠಾಣೆ ಪೊಲೀಸರು ದಾಳಿ ನಡೆಸಿ ಈ ಗಾಂಜಾ ಸಾಗಾಟ ಪತ್ತೆ ಹಚ್ಚಿದ್ದಾರೆ. ನಾಲ್ಕು ಬಿಳಿ ಬಣ್ಣದ ಪ್ಲಾಸ್ಟಿಕ್ ಚೀಲಗಳಲ್ಲಿ 1.44 ಕೋಟಿ ರೂ. ಮೌಲ್ಯದ ಒಟ್ಟು 221 ಕೆ.ಜಿ. ಒಣ ಗಾಂಜವನ್ನು ಪ್ಲೈವುಡ್ ಶೀಟ್‌ಗಳೊಂದಿಗೆ ಅಡಗಿಸಿ ಕೊಂಡು ಬರುತ್ತಿದ್ದುದು ಪತ್ತೆಯಾಗಿದೆ.
ಇದನ್ನೂ ಓದಿ- ಮೇಕೆ ಬಚಾವ್ ಮಾಡಲು ಮುಂದಾದ ಕುರಿಗಾಹಿಗಳ ಮೇಲೆ ಎಗರಿದ ಹುಲಿ; ಇಬ್ಬರಿಗೆ ಗಾಯ!
ಸದ್ಯ, ನಾಲ್ವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.