ವ್ಯಾಕ್ಸಿನೇಷನ್‌ ಪಡೆದ ಕೆಲವೇ ಹೊತ್ತಿನಲ್ಲಿ ಒಂದೂವರೆ ತಿಂಗಳ ಮಗು ಸಾವು

ಬೈರಾಪಟ್ಟಣ ಗ್ರಾಮದ ಮೋಹನ್ ಹಾಗೂ ಸ್ಪೂರ್ತಿ ದಂಪತಿಯ ಮಗು ಸಾತ್ವಿಕ್ ಪೇಂಟಾ ವ್ಯಾಕ್ಸಿನೇಷನ್‌ ಬಳಿಕ ಅಸ್ವಸ್ಥವಾಗಿದ್ದು ಕೆಲವೇ ಹೊತ್ತಿನಲ್ಲಿ ಅಸುನೀಗಿದೆ.‌ ಇದಕ್ಕೆ ಕಾರಣ ವೈದ್ಯರ ನಿರ್ಲಕ್ಷ್ಯ ಅಂತ ಪೋಷಕರು ಆರೋಪ ಮಾಡಿದ್ದಾರೆ..

Written by - Yashaswini V | Last Updated : Feb 14, 2024, 09:06 AM IST
  • ಪ್ರತಿ ಮಂಗಳವಾದ ಶಿಶು ಹಾಗೂ ಮಕ್ಕಳಿಗೆ ಸರಕಾರದ ವತಿಯಿಂದ ಉಚಿತವಾಗಿ ವ್ಯಾಕ್ಸಿನೇಷನ್‌ ಹಾಕಲಾಗುತ್ತದೆ.
  • ಎಲ್ಲಾ ಮಕ್ಕಳಿಗೆ ವ್ಯಾಕ್ಸಿನೇಷನ್‌ ಹಾಕಿಸುವಂತೆ ಸಾತ್ವಿಕ್ ಪೋಷಕರು ಸಹ ನಿನ್ನೆ ಮಗುವಿಗೆ ಲಸಿಕೆ ಹಾಕಿಸಿದ್ದಾರೆ.
  • ಎಪಿ ಪೇಂಟಾ ವ್ಯಾಕ್ಸಿನೇಷನ್‌ ಪಡೆದ ಮಗು ಕೆಲವೇ ಹೊತ್ತಿನಲ್ಲಿ ಅಸ್ತಸ್ಥಗೊಂಡಿದೆ.
ವ್ಯಾಕ್ಸಿನೇಷನ್‌ ಪಡೆದ ಕೆಲವೇ ಹೊತ್ತಿನಲ್ಲಿ ಒಂದೂವರೆ ತಿಂಗಳ ಮಗು ಸಾವು  title=

ಆ ಮಗುವಿನ ಆಗಮನದಿಂದ ಇಡೀ ಮನೆಯಲ್ಲಿ ಸಂತೋಷದ ವಾತವರಣ ಇತ್ತು... ಹೊಸ‌ ಅತಿಥಿಗೆ ಇಡೀ ಮನೆ ಸದಸ್ಯರು ಸಂಭ್ರಮ ಸಡಗರದಿಂದ ಹೆಸರಿಟ್ಟು ಕೆಲವೇ ತಾಸುಗಳು ಕಳೆದಿದ್ವು, ಆದರೆ ಲಸಿಕೆ ಹಾಕಿಸಿಕೊಂಡ ಕೆಲವೇ ಹೊತ್ತಿನಲ್ಲಿ ಮಗು ತೀವ್ರ ಅಸ್ವಸ್ಥಗೊಂಡು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಬೆಳಕಿಗೆ ಬಂದಿದೆ. 

ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಬೈರಾಪಟ್ಟಣ ಗ್ರಾಮದಲ್ಲಿ ನಡೆದ ಘಟನೆ ‌ಇಡೀ ಊರಿನ ಪೋಷಕರಿಗೆ ಆತಂಕ ತಂದಿದೆ.‌ ಕಾರಣ ವ್ಯಾಕ್ಸಿನೇಷನ್‌ ಪಡೆದ ಕೆಲವೇ ಹೊತ್ತಿನಲ್ಲಿ ಒಂದೂವರೆ ತಿಂಗಳ ಮಗು ಸಾತ್ವಿಕ್ ಕೊನೆಯುಸಿರೆಳೆದಿದ್ದು, ತಂದೆ ತಾಯಿಗೆ ದಿಕ್ಕೇ ತೋಚದಂತಾಗಿದೆ. 

ಬೈರಾಪಟ್ಟಣ ಗ್ರಾಮದ ಮೋಹನ್ ಹಾಗೂ ಸ್ಪೂರ್ತಿ ದಂಪತಿಯ ಮಗು ಸಾತ್ವಿಕ್ ಪೇಂಟಾ ವ್ಯಾಕ್ಸಿನೇಷನ್‌ ಬಳಿಕ ಅಸ್ವಸ್ಥವಾಗಿದ್ದು ಕೆಲವೇ ಹೊತ್ತಿನಲ್ಲಿ ಅಸುನೀಗಿದೆ.‌ ಇದಕ್ಕೆ ಕಾರಣ ವೈದ್ಯರ ನಿರ್ಲಕ್ಷ್ಯ ಅಂತ ಪೋಷಕರು ಆರೋಪ ಮಾಡಿದ್ದಾರೆ.

ಇದನ್ನೂ ಓದಿ- ಅತಿಥಿ ಶಿಕ್ಷಕನ ಕೊಲೆ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌.. ಕೊಲೆಗೆ ಹೆಂಡತಿ, ಮಗಳ ಸುಫಾರಿ!

ಪ್ರತಿ ಮಂಗಳವಾದ ಶಿಶು ಹಾಗೂ ಮಕ್ಕಳಿಗೆ ಸರಕಾರದ ವತಿಯಿಂದ ಉಚಿತವಾಗಿ ವ್ಯಾಕ್ಸಿನೇಷನ್‌ ಹಾಕಲಾಗುತ್ತದೆ. ಎಲ್ಲಾ ಮಕ್ಕಳಿಗೆ ವ್ಯಾಕ್ಸಿನೇಷನ್‌ ಹಾಕಿಸುವಂತೆ ಸಾತ್ವಿಕ್ ಪೋಷಕರು ಸಹ ನಿನ್ನೆ (ಫೆ. 13, ಮಂಗಳವಾರ) ದೊಡ್ಡಮಳೂರು ಗ್ರಾಮದ ಪ್ರಾರ್ಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದು,  ಅಲ್ಲಿ ಲಸಿಕೆ ಪಡೆಯಲು ಬಂದಿದ್ದ 18 ಮಕ್ಕಳ ಪೈಕಿ ಸಾತ್ವಿಕ್ ಗೂ ಕೂಡ ವೈದ್ಯರು ವ್ಯಾಕ್ಸಿನೇಷನ್‌ ಹಾಕಿದ್ದಾರೆ. ಎಪಿ ಪೇಂಟಾ ವ್ಯಾಕ್ಸಿನೇಷನ್‌ ಪಡೆದ ಸಾತ್ವಿಕ ‌ಕೆಲವೇ ಹೊತ್ತಿನಲ್ಲಿ ನಡುಗಲು ಪ್ರಾರಂಭಿಸಿದ್ದಾನೆ.‌ ಮಗು ಸ್ಥಿತಿ ಕಂಡು ಗಾಬರಿಗೊಂಡ ಪೋಷಕರು ತಕ್ಷಣವೇ ಮಗುವನ್ನು ಕರೆದುಕೊಂಡು ಹೋಗಿ ಆಸ್ಪತ್ರೆಗೆ ತೆರಳಿದ್ದಾರೆ. ಆದರೆ, ಆಸ್ಪತ್ರೆಗೆ ಹೋಗುವ ದಾರಿ ಮಧ್ಯೆದಲ್ಲಿಯೇ ಮಗು ಸಾತ್ವಿಕ್ ಕೊನೆಯುಸಿರೆಳೆದಿದೆ. 

ಇದನ್ನೂ ಓದಿ- ಮೇಕೆ ಬಚಾವ್ ಮಾಡಲು ಮುಂದಾದ ಕುರಿಗಾಹಿಗಳ ಮೇಲೆ ಎಗರಿದ ಹುಲಿ; ಇಬ್ಬರಿಗೆ ಗಾಯ!

ಇನ್ನು ಈ ಬಗ್ಗೆ ವೈದ್ಯರು ಹೇಳುತ್ತಿರುವುದು ಬೇರೆಯದ್ದೇ‌ ಇದೆ. ವ್ಯಾಕ್ಸಿನೇಷನ್‌ ನೀಡುವುದರಲ್ಲಿ ಯಾವುದೇ ತಪ್ಪು ನಡೆದಿಲ್ಲ,‌ ಉಳಿದ 17 ಮಕ್ಕಳು ಆರೋಗ್ಯವಾಗಿದ್ದಾರೆ. ಮಗು ಸಾವಿಗೆ ಕಾರಣ ಏನು ಅನ್ನೋದನ್ನು ನಿಖರವಾಗಿ ತಿಳಿಯಲು ಮಗು ಗೆ ಪೋಸ್ಟ್ ಮಾರ್ಟಮ್ ಮಾಡಿಸಿ ಅಂತ ಹೇಳಿದ್ದಾರೆ. ಆದರೆ ಇದಕ್ಕೆ ಒಪ್ಪದ ಸಾತ್ವಿಕ್ ಪೋಷಕರು ಮಗುವನ್ನು ಪೋಸ್ಟ್ ಮಾರ್ಟಮ್ ಮಾಡೋದು‌ಬೇಡ ಅಂತ‌ ನಿರ್ಧಾರಕ್ಕೆ ಬಂದು ಮಗಿವಿನ ಅಂತಿಮ ಸಂಸ್ಕಾರ ಮಾಡಿದ್ದಾರೆ.. ಸದ್ಯ ಈ ಕುರಿತು ಯಾವುದೇ ಪ್ರಕರಣ ದಾಖಲಾಗದೇ ಇದ್ದರೂ ವೈದ್ಯರು ಮಕ್ಕಳಿಗೆ ನೀಡಲಾಗಿರುವ ವ್ಯಾಕ್ಸೀನ್ ನ್ನು ಲ್ಯಾಬ್ ಗೆ ಕಳುಹಿಸಿಕೊಟ್ಟಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News