NIA Raid on PFI : ತಲೆಮರೆಸಿಕೊಂಡಿದ್ದ PFI ರಾಜ್ಯ ಖಂಜಾಚಿ ಶಾಹಿದ್ ನಾಸಿರ್ NIA ಬಲೆಗೆ
ನ್ ಐಎ ದಾಳಿ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಪಿಎಫ್ ಐ ರಾಜ್ಯ ಖಂಜಾಚಿ ಶಾಹಿದ್ ನಾಸಿರ್ ನನ್ನು ಎನ್ ಐಎ ಅಧಿಕಾರಿಗಳು ನಗರದಲ್ಲಿ ಬಂಧಿಸಿದ್ದಾರೆ.
ಕಲಬುರಗಿ : ಎನ್ ಐಎ ದಾಳಿ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಪಿಎಫ್ ಐ ರಾಜ್ಯ ಖಂಜಾಚಿ ಶಾಹಿದ್ ನಾಸಿರ್ ನನ್ನು ಎನ್ ಐಎ ಅಧಿಕಾರಿಗಳು ನಗರದಲ್ಲಿ ಬಂಧಿಸಿದ್ದಾರೆ.
ಕೇರಳದಿಂದ ಕರ್ನಾಟಕಕ್ಕೆ ಬರುವಾಗ ಮಾರ್ಗ ಮಧ್ಯೆ ಶಾಹಿದ್ ನಾಸಿರ್ ನನ್ನು ವಶಕ್ಕೆ ಪಡೆದಿದ್ದಾರೆ. ಆದ್ರೆ, ಇಂದು ಬೆಳಗ್ಗೆ ಶಾಹಿದ್ ಮನೆ ಮೇಲೆ ಎನ್ ಐಎ ಅಧಿಕಾರಿಗಳು ದಾಳಿ ಮಾಡಿದ್ದಾಗ ಹಲವು ಕಡತ ಹಾಗೂ ಮೊಬೈಲ್ ವಶಪಡಿಸಿಕೊಂಡಿದ್ದರು.
ಇದನ್ನೂ ಓದಿ : CM Ibrahim : ತನಿಖೆ ಮಾಡೋದಕ್ಕೆ ಬಿಜೆಪಿ ಅವರಿಗೆ ... ಇಲ್ಲ : ಸಿಎಂ ಇಬ್ರಾಹಿಂ
ನಗರದ ಟಿಪ್ಪು ಚೌಕ್ ಪ್ರದೇಶದಲ್ಲಿ ನಾಸಿರ್ ನಿವಾಸವಿದೆ. ಆದರೆ ಕುಟುಂಬಸ್ಥರು, ಪಿಎಫ್ ಐ ಮುಖಂಡ ಶಾಹಿದ್ ಕೇರಳಕ್ಕೆ ಹೋಗಿ ಮರಳಿ ಬರುವ ಬಗ್ಗೆ ಮಾಹಿತಿ ನೀಡಿದ್ದರು. ಅದಾದ ಬಳಿಕ ಎನ್‌ಐಎ ತಂಡ ಶಾಹಿದ್‌ಗೆ ಬಲೆ ಬಿಸಿ ಬಂಧಿಸಿದ್ದಾರೆ. ಇದೀಗ ಬಂಧಿತ ಆರೋಪಿ ಶಾಹಿದ್‌ನನ್ನು ಸಹ ವಿಚಾರಣೆಗಾಗಿ ಬೆಂಗಳೂರು ಎನ್‌ಐಎ ತಂಡಕ್ಕೆ ಹಸ್ತಾಂತರ ಮಾಡಿದ್ದಾರೆ.
ಇಂದು ಬೆಳಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ ಮತ್ತು ಜಾರಿ ನಿರ್ದೇಶನಾಲಯ ಕೇರಳ ಮತ್ತು ತಮಿಳುನಾಡು ಸೇರಿದಂತೆ ದೇಶಾದ್ಯಂತ 10 ರಾಜ್ಯಗಳಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾಗೆ ಸಂಬಂಧಪಟ್ಟ ಸ್ಥಳಗಳ ಮೇಲೆ ದಾಳಿ ನಡೆಸಿವೆ.
ರಾಜ್ಯದ 10 ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿರುವ ಎನ್ ಐಎ, ಪಿಎಫ್ಐ ನ 8 ರಾಜ್ಯ ಸಮಿತಿ ಸದಸ್ಯರ ಮನೆ ಮೇಲೆ ಹಾಗೂ ಎರಡು ರಾಜ್ಯ ಕಚೇರಿಯಲ್ಲಿ ಶೋಧ ನಡೆಸುತ್ತಿದೆ. ಭಯೋತ್ಪಾದನಾ ಕೃತ್ಯಕ್ಕೆ ಕುಮ್ಮಕ್ಕು ನೀಡಿದ ಆರೋಪದ ಮೇಲೆ ಈ ದಾಳಿ ನಡೆಸಲಾಗುತ್ತಿದೆ. ಎಕೆ ಅಶ್ರಫ್, ಶರೀಫ್ ಬಜ್ಪೆ, ನವಾಜ್ ಕಾವೂರು, ಮೊಯ್ದೊನ್ ಹಳೆಯಂಗಡಿ, ಮೊಹಮ್ಮದ್ ಶಾಕಿಬ್, ಮೊಹಮ್ಮದ್ ತಫ್ಸೀರ್, ಯಾಸಿರ್ ಹಸನ್, ಅಬ್ದುಲ್ ಖಾದರ್ ಪುತ್ತೂರ್ ಎಂಬವರ ಮೇಲೆ ನಿವಾಸಗಳ ದಾಳಿ 10 ನಡೆಸಿದೆ. ಇದರ ಹೊರತಾಗಿ ಮಂಗಳೂರು ಪಿಫ್ಐ ಕಚೇರಿ ಹಾಗೂ ಬೆಂಗಳೂರು ಪಿಫ್ಐ ಕಚೇರಿ ಮೇಲೆ ಎನ್ ಐಎ ತಲಾಶ್ ನಡೆಸುತ್ತಿದೆ.
ಇದನ್ನೂ ಓದಿ : ಪೇ ಸಿಎಂ ಪೋಸ್ಟರ್ ಪ್ರಕರಣ - ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಮುಖ್ಯಸ್ಥ ಸೇರಿ ಐವರ ಬಂಧನ
ಟೆರರ್ ಫಂಡಿಂಗ್ ಮತ್ತು ಶಿಬಿರಗಳನ್ನು ನಡೆಸುತ್ತಿರುವ ಆರೋಪದ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ. ರಾಜ್ಯ ಪೊಲೀಸ್ ಪಡೆಗಳ ತಂಡವು ಯುಪಿ, ಕೇರಳ, ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳಲ್ಲಿ ದಾಳಿ ನಡೆಸಿದೆ. ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುವುದು, ತರಬೇತಿ ಶಿಬಿರಗಳನ್ನು ನಡೆಸುವುದು ಮತ್ತು ನಿಷೇಧಿತ ಸಂಘಟನೆಗಳಿಗೆ ಸೇರಲು ಜನರನ್ನು ಪ್ರೋತ್ಸಾಹಿಸುವುದು, ಮುಂತಾದ ಚಟುವಟಿಕೆಯಲ್ಲಿ ತೊಡಗಿರುವ ವ್ಯಕ್ತಿಗಳ ವಸತಿ ಮತ್ತು ಅಧಿಕೃತ ವಾಸ ಸ್ಥಾನಗಳ ಮೇಲೆ ದಾಳಿ ನಡೆಸಲಾಗುತ್ತಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.