ಬಳ್ಳಾರಿ : ಧಾರವಾಡದ ಕೋರ್ಟ್‌ ಗೆ ಆಗಮಿಸಿದ್ದ ಭೂಗತ ಪಾತಕಿ ಬಚ್ಚಾಖಾನ್ ಗೆ ಪ್ರೇಯಸಿಯೊಂದಿಗೆ ಸಮಯ ಕಳೆಯೋದಕ್ಕೆ ಪೊಲೀಸರೇ ಅವಕಾಶ ಮಾಡಿಕೊಟ್ಟಿದ್ದರಂತೆ. ಬಳ್ಳಾರಿಯಿಂದ ಅಲ್ಲಿನ ಪೊಲೀಸರೊಂದಿಗೆ ಧಾರವಾಡದ ಕೋರ್ಟ್ ಗೆ ವಿಚಾರಣೆಗಾಗಿ ಪಾತಕಿ ಬಚ್ಚಾಖಾನ್ ಬಂದಿದ್ದ. ಈ ವೇಳೆ ಧಾರವಾಡದಲ್ಲಿ ಹೊಟೇಲ್ ನಲ್ಲಿ ಈತನ ಪ್ರೇಯಸಿಯೂ ಬಂದು ಕಾಯುತ್ತಿದ್ದಳು. ಇದಕ್ಕೆಲ್ಲಾ ಬಳ್ಳಾರಿ ಪೊಲೀಸರೇ ವ್ಯವಸ್ಥೆ ಮಾಡಿಕೊಟ್ಟಿದ್ದರು ಎಂದು ತಿಳಿದುಬಂದಿದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: ನಕ್ಸಲೀಯರ ನಿಯಂತ್ರಣಕ್ಕೆ ಬ್ರೇಕ್ ಹಾಕಲು ಕೇಂದ್ರ ಫ್ಲಾನ್: ನಾಲ್ಕು ತಂಡ ರಚಿಸಿದ ರಾಜ್ಯ ಪೊಲೀಸ್


ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ನಿರ್ಲಕ್ಷ್ಯ ತೋರಿದ ಬಳ್ಳಾರಿಯ ನಾಲ್ಕು ಜನ ಪೊಲೀಸರನ್ನು ಅಮಾನತು ಮಾಡಿ ಬಳ್ಳಾರಿ ಎಸ್ಪಿ ಸೈದುಲು ಅಡಾವತ್ ಅವರು ಆದೇಶ ಹೊರಡಿಸಿದ್ದಾರೆ. ಯೋಗೇಶಾಚಾರಿ, ಎಸ್ ಶಶಿಕುಮಾರ್, ರವಿಕುಮಾರ್ ಮತ್ತು ಸಂಗಮೇಶ್ ಕಾಳಗಿ ಅಮಾನತ್ತಾದ ಬಳ್ಳಾರಿಯ ಸಶಸ್ತ್ರ ಮೀಸಲು ಪೊಲೀಸ್ ಪಡೆಯ ಸಿಬ್ಬಂದಿಯಾಗಿದ್ದಾರೆ.


ಪ್ರಕರಣ ವರದಿಯಾಗಿದ್ದು ಹೀಗೆ:


ಬಳ್ಳಾರಿ ಕೇಂದ್ರ ಕಾರಾಗೃಹದಿಂದ ಶನಿವಾರ ಧಾರವಾಡದ ನ್ಯಾಯಾಲಯಕ್ಕೆ ಪ್ರಕರಣವೊಂದರ ವಿಚಾರಣೆಗೆ ಸಂಬಂಧಿಸಿ ನಾಲ್ಕು ಜನ ಆರೋಪಿಗಳನ್ನು ಕರೆದೊಯ್ಯಲಾಗಿತ್ತು. ವಾಪಸ್ ಬರುವಾಗ ಈ ನಾಲ್ಕರ ಪೈಕಿ ಬಚ್ಚಾಖಾನ್ ಎಂಬ ಭೂಗತ ಲೋಕದ ನಂಟಿರುವ ಪ್ರಮುಖ ಆರೋಪಿಯನ್ನು ಲಾಡ್ಜ್ ಒಂದಕ್ಕೆ ಪೊಲೀಸರೇ ಕರೆದೊಯ್ದು ಆತನ ಪ್ರಿಯತಮೆಯೊಂದಿಗೆ ಭೇಟಿ ಮಾಡಿಸಲಾಗಿತ್ತು ಎನ್ನಲಾಗಿದೆ. ಈ ಕುರಿತು ಮಾಹಿತಿ ಪಡೆದ ಧಾರವಾಡ ಕಮಿಷನರ್ ಲಾಬೂರಾಮ್ ಲಾಡ್ಜ್ ಮೇಲೆ ದಾಳಿ ಮಾಡಿ ಪೊಲೀಸರ ಈ ಕಳ್ಳಾಟವನ್ನು ಬಯಲಿಗೆಳೆದಿದ್ದರು.


ಇದನ್ನೂ ಓದಿ: Himachal Flood: ಹಿಮಾಚಲ ಪ್ರದೇಶದಲ್ಲಿ ಮಳೆ-ಪ್ರವಾಹ ಭೂಕುಸಿತಕ್ಕೆ 22 ಸಾವು, ಹಲವರು ನಾಪತ್ತೆ!


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.