ನಕ್ಸಲೀಯರ ನಿಯಂತ್ರಣಕ್ಕೆ ಬ್ರೇಕ್ ಹಾಕಲು ಕೇಂದ್ರ ಫ್ಲಾನ್: ನಾಲ್ಕು ತಂಡ ರಚಿಸಿದ ರಾಜ್ಯ ಪೊಲೀಸ್

ಹಿಂಸಾತ್ಮಕ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವ ಮಾವೋವಾದಿ ಹಾಗೂ ನಕ್ಸಲರ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಪ್ಲಾನ್ ಮಾಡಿಕೊಂಡಿದೆ. ಹೀಗಾಗಿ ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ರಾಜ್ಯ ಸರ್ಕಾರ ನಾಲ್ಕು‌ ವಿಶೇಷ ಪಡೆ ರಚಿಸಿ‌ ಆದೇಶ ಹೊರಡಿಸಿದೆ.

Written by - VISHWANATH HARIHARA | Edited by - Manjunath N | Last Updated : Aug 22, 2022, 09:01 AM IST
  • ಮಾವೋವಾದಿ, ನಕ್ಸಲೀಯರ ಚಟುವಟಿಕೆ ಹೆಚ್ಚಿರುವ ಪ್ರದೇಶಗಳಲ್ಲಿ ನಾಲ್ಕು ವಿಶೇಷ ತಂಡ ಕಾರ್ಯಾಚರಣೆಗೆ ಇಳಿಯಲಿದೆ.
 ನಕ್ಸಲೀಯರ ನಿಯಂತ್ರಣಕ್ಕೆ ಬ್ರೇಕ್ ಹಾಕಲು ಕೇಂದ್ರ ಫ್ಲಾನ್: ನಾಲ್ಕು ತಂಡ ರಚಿಸಿದ ರಾಜ್ಯ ಪೊಲೀಸ್ title=
ಸಾಂದರ್ಭಿಕ ಚಿತ್ರ

ಬೆಂಗಳೂರು: ಹಿಂಸಾತ್ಮಕ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವ ಮಾವೋವಾದಿ ಹಾಗೂ ನಕ್ಸಲರ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಪ್ಲಾನ್ ಮಾಡಿಕೊಂಡಿದೆ. ಹೀಗಾಗಿ ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ರಾಜ್ಯ ಸರ್ಕಾರ ನಾಲ್ಕು‌ ವಿಶೇಷ ಪಡೆ ರಚಿಸಿ‌ ಆದೇಶ ಹೊರಡಿಸಿದೆ.

ನಕ್ಸಲ್ ಚಟುವಟಿಕೆ ಹೆಚ್ಚಿರುವ ಪ್ರದೇಶಗಳಲ್ಲಿ‌ ಈ ವಿಶೇಷ ಪಡೆಗಳು ಕಾರ್ಯ ನಿರ್ವಹಿಸಲಿವೆ.ಇತ್ತೀಚೆಗೆ  ಮಾವೋವಾದಿಗಳು ಕಾನೂನು‌ ಸುವ್ಯವಸ್ಥೆಗೆ‌ ಧಕ್ಕೆ ತರುತ್ತಿದ್ದಾರೆ. ತಮ್ಮದೇ ಸಿದ್ದಾಂತದ ಆಧಾರದ‌ ಮೇಲೆ ಯುವಕರನ್ನ‌ ಒಗ್ಗೂಡಿಸಿ ಗುಪ್ತವಾಗಿ ಕಾರ್ಯನಿರ್ವಹಿಸಿ ಹಿಂಸಾತ್ಮಕ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ‌.‌

ಈ ನಿಟ್ಟಿನಲ್ಲಿ ಕೇಂದ್ರದ ಸೂಚನೆ ಮೇರೆಗೆ ನಕ್ಸಲರ ದುಷ್ಟ ಚಟುವಟಿಕೆ ತಡೆಯುವ ನಿಟ್ಟಿನಲ್ಲಿ ರಾಜ್ಯದ ನಾಲ್ಕು ಪ್ರತ್ಯೇಕ ಕಡೆಗಳಲ್ಲಿ ಕರ್ನಾಟಕ ಪೊಲೀಸ್ ಮೀಸಲು ಪಡೆ (ಕೆಎಸ್ ಆರ್ ಪಿಎಫ್ ) ಒಳಗೊಂಡಂತೆ ನಾಲ್ಕು ವಿಶೇಷ ತಂಡ ರಚಿಸಲಾಗಿದೆ‌.

ಮಾವೋವಾದಿ, ನಕ್ಸಲೀಯರ ಚಟುವಟಿಕೆ ಹೆಚ್ಚಿರುವ ಪ್ರದೇಶಗಳಲ್ಲಿ ನಾಲ್ಕು ವಿಶೇಷ ತಂಡ ಕಾರ್ಯಾಚರಣೆಗೆ ಇಳಿಯಲಿದೆ. ಕೊಡಗಿನ ವಿರಾಜಪೇಟೆ ತಾಲೂಕಿನ ಕುಟ್ಟಾ, ಮಡಿಕೇರಿಯ ಕರಿಕೆ, ಮೈಸೂರು ಎಚ್.ಡಿ.ಕೋಟೆ ಬಳಿಯ ಬವಾಲಿ ಹಾಗೂ ಚಾಮರಾಜಪೇಟೆಯ ಗುಂಡ್ಲುಪೇಟೆಯ ಮೂಲೆಹೊಳೆ ಬಳಿ ಪೊಲೀಸ್ ಪಡೆ ಕೆಲಸ ಮಾಡಲಿದೆ.

ಇದನ್ನೂ ಓದಿ : Vastu Tips : ಮನೆಯ ಈ ದಿಕ್ಕಿನಲ್ಲಿ ಗಡಿಯಾರ ಹಾಕಿದ್ರೆ ನಿಮ್ಮ ಕೆಟ್ಟ ಸಮಯ ಶುರುವಾದಂತೆ

ಈ ತಂಡಗಳಿಗಾಗಿ ಒಟ್ಟು 267 ಮಂದಿ ಪೊಲೀಸರನ್ನು ನಿಯೋಜಿಸಲಾಗಿದೆ. ಇಬ್ಬರು ಎಸಿಪಿಗಳು ಕಾರ್ಯಾಚರಣೆ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ. ಆಪರೇಷನ್‌ ಟೀಮ್ ಕಮಾಂಡರ್ ಆಗಿ 8 ಮಂದಿ, ಸಹಾಯಕ‌ ಕಮಾಂಡರ್ ಆಗಿ ಪಿಐ‌ ಅಥವಾ ಆರ್ ಎಸ್ಐ, 16 ಪಿಎಸ್ಐ, ಮಹಿಳಾ ಪಿಎಸ್ಐ 1, (ವೈರ್ ಲೇಸ್ ಇನ್ ಚಾರ್ಜ್) 4 ಮಹಿಳಾ ಎಎಸ್ಐ, ಹೆಡ್ ಕಾನ್ ಸ್ಟೇಬಲ್‌ 40, 120 ಪೊಲೀಸ್ ಕಾನ್ ಸ್ಟೇಬಲ್, ಶ್ವಾನದಳ ಸಿಬ್ಬಂದಿ 16 ಸೇರಿದಂತೆ‌ ಒಟ್ಟು 267 ಮಂದಿ ಪೊಲೀಸರನ್ನು ನಿಯೋಜಿಸಲಾಗಿದೆ. ವಿಶೇಷವಾಗಿ ಬೆಲ್ಜಿಯಂ ಶೆರ್ಪಡ್ ಸೇರಿದಂತೆ ವಿವಿಧ ತಳಿ ಶ್ವಾನಗಳಿಗೂ ವಿಶೇಷ ತರಬೇತಿ‌ ನೀಡಲಾಗುತ್ತದೆ.

ಈ ಟೀಂಗಳು ಚಾಮರಾಮನಗರ, ಕೊಡಗು ಹಾಗೂ‌‌ ಮೈಸೂರಿನಲ್ಲಿ ಪ್ರತ್ಯೇಕ ತಂಡಗಳಾಗಿ ಕಾರ್ಯಾಚರಣೆ ನಡೆಸಲಿವೆ. ತಮಿಳುನಾಡು ಹಾಗೂ ಕೇರಳ ರಾಜ್ಯಗಳಿಗೂ ಕರ್ನಾಟಕ ಹತ್ತಿರವಾಗಿದೆ.ಬೇರೆ ಬೇರೆ ರಾಜ್ಯಗಳಿಂದ ರಾಜ್ಯಕ್ಕೆ ನುಸುಳುವ ಮಾವೋವಾದಿಗಳು ಯುವಕರ ತಲೆಕೆಡಿಸಿ ತನ್ನ ಕಾರ್ಯಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಿರುವುದು ಹೆಚ್ಚಾಗಿದೆ. ಹಲವು ಕಡೆ ನಾಕಾಬಂದಿ ಹಾಕಿ ಗಸ್ತು ಕಾದರೂ‌ ಆರೋಪಿಗಳು ತಲೆಮರೆಸಿಕೊಳ್ಳುತ್ತಿದ್ದಾರೆ.

ಇಂತಹ ಕಿಡಿಗೇಡಿಗಳ ಮಟ್ಟ ಹಾಕುವುದಕ್ಕಾಗಿ ವಿಶೇಷ ತಂಡಗಳನ್ನ ರಚಿಸಲಾಗಿದೆ. ಅಸ್ಸಾಂ ಮಾವೋವಾದಿ ಹಾಗೂ ನಕ್ಸಲೀಯರ ಕೇಂದ್ರ ಸ್ಥಾನವಾಗಿದ್ದು ಆಂಧ್ರಪ್ರದೇಶ, ಕರ್ನಾಟಕ, ಕೇರಳ ಹಾಗೂ ತಮಿಳುನಾಡು ನಕ್ಸಲೀಯರ ಕಾರಿಡಾರ್ ಪ್ರದೇಶವಾಗಿದೆ ಎಂದು ಕೇಂದ್ರ ಗುಪ್ತಚರ ಇಲಾಖೆ ವರದಿ ನೀಡಿತ್ತು. ಈ ವರದಿ ಆಧರಿಸಿ ಕೇಂದ್ರದ  ಸೂಚನೆ ಮೇರೆಗೆ ರಾಜ್ಯ ಸರ್ಕಾರ ನಾಲ್ಕು ವಿಶೇಷ ತಂಡ ರಚಿಸಿ ಕಾರ್ಯಾಚರಣೆಗೆ ಮುಂದಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News