ಬೆಂಗಳೂರು: ಕಿರುತೆರೆ ನಟಿ ಚೇತನಾ ರಾಜ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯ ಡಾ.ಶೆಟ್ಟಿಗೆ ಪೊಲೀಸರು ನೋಟಿಸ್‌ ನೀಡಿದ್ದಾರೆ. ಇದೇ ತಿಂಗಳ 16 ರಂದು 9 ಗಂಟೆಗೆ ಚೇತನಾಗೆ ವೈದ್ಯರು ಸರ್ಜರಿ ಶುರುಮಾಡಿದ್ದರು. ಆದರೆ ಶಸ್ತ್ರಚಿಕಿತ್ಸೆ ವಿಫಲವಾದ ಕಾರಣ ನಟಿ ಸಾವನ್ನಪ್ಪಿದ್ದಾರೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: 


ಒಂದು ಗಂಟೆ ವೇಳೆಗೆ ಸರ್ಜರಿ ಕಂಪ್ಲೀಟ್ ಮಾಡಲಾಗಿತ್ತು. ಇದಾದ ಕೆಲವೇ ಕ್ಷಣಗಳಲ್ಲಿ ಚೇತನಾ ಹೃದಯ ಸ್ತಬ್ಧವಾಗಿತ್ತು. ಇಂಜೆಕ್ಷನ್ ಕೊಟ್ಟು ನಾರ್ಮಲ್ ಮಾಡಲು ವೈದ್ಯರು ಟ್ರೈ ಮಾಡಿದರು. ನಂತರ ಅವರ ಬಾಯಿಯಲ್ಲಿ ರಕ್ತ ಮಿಶ್ರಿತ ನೊರೆ ಬರಲು ಪ್ರಾರಂಭವಾಯಿತು. ಸಂಜೆ ನಾಲ್ಕು ಗಂಟೆ ವರೆಗೆ  ಕ್ಲಿನಿಕ್ ನಲ್ಲಿ ಚಿಕಿತ್ಸೆ ನೀಡಲಾಗಿದೆ. ಆದರೆ ಸ್ಪಂದಿಸದ ಕಾರಣ ಬೇರೆ ಖಾಸಗಿ ಆಸ್ಪತ್ರೆಗೆ ಶಿಫ್ಟ್‌ ಮಾಡಲಾಗಿತ್ತು. ಆದರೂ ಚೇತನಾ ಮಾತ್ರ ಬದುಕುಳಿಯಲಿಲ್ಲ. 


ತಾಯಿಯ ಚಿನ್ನಾಭರಣ ಅಡವಿಟ್ಟು 80 ಸಾವಿರ ಅಡ್ವಾನ್ಸ್ ಕಟ್ಟಿದ್ದ ಚೇತನಾ, ಜಿಮ್ ಟ್ರೈನರ್ ಮಾದೇಶ್ ಜೊತೆ ಕ್ಲಿನಿಕ್‌ಗೆ ತೆರಳಿದ್ದರು. ವೈದ್ಯರ ನಿರ್ಲಕ್ಷ್ಯದಿಂದಲೆ ಮಗಳು ಸಾವನ್ನಪ್ಪಿರುವುದು ಎಂದು ಅವರ ತಂದೆ-ತಾಯಿ ಆರೋಪಿಸಿದ್ದಾರೆ. 


ಸದ್ಯ ರಾಜಾಜಿನಗರ ಪೊಲೀಸರು ತನಿಖೆ ಮುಂದುವರೆಸಿದ್ದು, ಪೊಸ್ಟ್ ಮಾರ್ಟಮ್ ರಿಪೋರ್ಟ್‌ಗಾಗಿ ಕಾಯುತ್ತಿದ್ದಾರೆ. 


ಈ ಎಲ್ಲದರ ಮಧ್ಯೆ ಸುಬ್ರಮಣ್ಯನಗರ ಪೊಲೀಸರು ಇಂದು ವಿಚಾರಣೆಗೆ ಹಾಜರಾಗುವಂತೆ ಡಾ.ಶೆಟ್ಟಿಗೆ ನೋಟಿಸ್‌ ನೀಡಿದ್ದಾರೆ. ಡಾ.ಶೆಟ್ಟಿ ಸೇರಿ ಮೂವರಿಗೆ ನೋಟಿಸ್ ಕೊಟ್ಟಿದ್ದಾರೆ. ಘಟನೆ ನಡೆದ ದಿನ ರಾತ್ರಿ ಎಸಿಪಿ ವೆಂಕಟೇಶ್ ನಾಯ್ಡುರಿಂದ ವಿಚಾರಣೆ ಮಾಡಲಾಗಿತ್ತು. 


ಇದನ್ನೂ ಓದಿ: 


ಕಾಸ್ಮೆಟಿಕ್ ಗೆ ಲೈಸೆನ್ಸ್ ಇದ್ಯಾ ಅಥವಾ ಇಲ್ವಾ? ಮೆಡಿಕಲ್ ನಿಯಮ ಉಲ್ಲಂಘನೆ ಆಗಿದ್ಯಾ? ಸರ್ಜರಿ ವೇಳೆ ನಡೆದಿದ್ದೇನು ಎಂಬುದರ ಬಗ್ಗೆ ಪೊಲೀಸರು ಸಂಪೂರ್ಣ ಮಾಹಿತಿ ಪಡೆಯಲಿದ್ದಾರೆ. ಚೇತನಾ ಜೊತೆಗಿದ್ದ ಸ್ನೇಹಿತ ಮಾದೇಶ್ ಎಂಬುವವರನ್ನು ಸಹ ಪೊಲೀಸರು ವಿಚಾರಣೆಗೆ ಒಳಪಡಿಸಲಿದ್ದಾರೆ.  


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.