ಬೆಂಗಳೂರು: ಮಾದಕವಸ್ತು ಕಳ್ಳ ಸಾಗಾಣಿಕೆ ಜಾಲಕ್ಕೆ ಪೊಲೀಸರು ಸೆಡ್ಡು ಹೊಡೆದಿದ್ದಾರೆ. ಕಳೆದೊಂದು ವರ್ಷದಲ್ಲಿ 6 ಸಾವಿರಕ್ಕೂ ಹೆಚ್ಚು ಕೇಸ್ ಗಳಲ್ಲಿ 900ಕ್ಕೂ ಹೆಚ್ಚು ಡ್ರಗ್ ಪೆಡ್ಲರ್‍ಗಳನ್ನು ಜೈಲಿಗಟ್ಟಿದ್ದಾರೆ. ವಿಶ್ವ ಮಾದಕವಸ್ತು ಸೇವನೆ ಕಳ್ಳಸಾಗಾಣಿಕೆ ವಿರೋಧಿ ದಿನಾಚರಣೆ ಅಂಗವಾಗಿ ಕೋಟ್ಯಂತರ ರೂ. ಮೌಲ್ಯದ ಮಾದಕವಸ್ತುಗಳನ್ನು ನಾಶಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಈ ಮೂಲಕ ಮಾದಕ ದಂಧೆಗೆ ಬೆಂಗಳೂರು ಪೊಲೀಸರು ಬಿಸಿ ಮುಟ್ಟಿಸ್ತಿದ್ದಾರೆ. ಬೆಂಗಳೂರು ಪೊಲೀಸರೆಂದರೇ ಕಳ್ಳರು, ರೌಡಿಗಳು, ಸಮಾಜಘಾತುಕರು ಮಾತ್ರವಲ್ಲದೇ, ಡ್ರಗ್ ಪೆಡ್ಲರ್‌ಗಳು  ಸಹ ಕೂತಲ್ಲೇ ನಡುಗುತ್ತಾರೆ‌. ಕಳೆದೊಂದು ವರ್ಷದಲ್ಲಿ ಬೆಂಗಳೂರು ಮಹಾನಗರದಲ್ಲಿ ಬರೋಬ್ಬರಿ 6,191 ಮಾದಕವಸ್ತು ಸೇವನೆ ಹಾಗೂ ಸಾಗಾಣಿಕೆ ಪ್ರಕರಣ ದಾಖಲಾಗಿದ್ದು, ಈ ಪೈಕಿ 159 ಮಂದಿ ವಿದೇಶಿ ಪ್ರಜೆಗಳು ಹಾಗೂ 7,882 ಮಂದಿಯನ್ನು ಜೈಲಿಗಟ್ಟಲಾಗಿದೆ.


Medical seat fraud: ಮಾಜಿ ಸಚಿವ ಆರ್.ಎಲ್.ಜಾಲಪ್ಪ ಪುತ್ರನಿಗೆ ಜೈಲು ಶಿಕ್ಷೆ, 20 ಲಕ್ಷ ರೂ. ದಂಡ!


ಕಳೆದೊಂದು ವರ್ಷದಲ್ಲಿ 117 ಕೋಟಿ ರೂ. ಬೆಲೆಬಾಳುವ 6,261 ಹೆಚ್ಚು ಕೆಜಿ ಗಾಂಜಾ, 2.5 ಕೆಜಿ ಆಷಿಶ್ ಆಯಿಲ್, 15 ಕೆಜಿ ಅಫೀಮು, 52 ಕೆಜಿ MDMA, ವಿವಿಧ ರೀತಿಯ 109 ಕೆಜಿ ಸಿಂಥೆಟಿಕ್ ಡ್ರಗ್ ಸೀಜ್ ಮಾಡಲಾಗಿದೆ. ಕಳೆದೊಂದು ವರ್ಷದಲ್ಲಿ ವಶಪಡಿಸಿಕೊಂಡಿರುವ 117 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳ ಪೈಕಿ ಕಳೆದ ಮಾರ್ಚ್‍ನಲ್ಲಿ 21 ಕೋಟಿ ರೂ. ಮೌಲ್ಯದ ಗಾಂಜಾ ಹಾಗೂ ಸಿಂಥೆಟಿಕ್ ಡ್ರಗ್ ನಾಶ ಮಾಡಲಾಗಿತ್ತು.


ಬಿಜೆಪಿ ಅವಲೋಕನ ಸಭೆಯಲ್ಲಿ ಸೋಲಿಗೆ ಕಾರಣರಾದ ಜೋಷಿ, ಸಂತೋಷ್ ಏಕಿಲ್ಲ: ಕಾಂಗ್ರೆಸ್ ಪ್ರಶ್ನೆ


ಡ್ರಗ್ಸ್ ದಂಧೆ ಜೋರಾಗಿದ್ದು, ಮತ್ತಷ್ಟು ಚುರುಕಾಗಿ‌‌‌ ಕೆಲಸ ಮಾಡಬೇಕಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.