Prajwal Revanna Update: ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣದಲ್ಲಿ ವಶದಲ್ಲಿರುವ ಪ್ರಜ್ವಲ್ ರೇವಣ್ಣ (Prajwal Revanna) ಈಗಾಗಲೇ 4 ದಿನದಿಂದ ವಿಚಾರಣೆ ಎದುರಿಸುತ್ತಿದ್ದಾರೆ. ಆದರೆ ಪ್ರಜ್ವಲ್ ನನ್ನು ವಿಚಾರಣೆಗೆ ಒಳಪಡಿಸಲು ಎಸ್ಐಟಿ ಅಧಿಕಾರಿಗಳು ತಮ್ಮ ಕಸ್ಟಡಿಗೆ ತೆಗೆದುಕೊಳ್ಳಬೇಕಾಗಿತ್ತು. ಸದ್ಯ ಸಂಸದ ಪ್ರಜ್ವಲ್ ರೇವಣ್ಣನನ್ನು ವಶಕ್ಕೆ ಪಡೆಯಲು ಕೋರ್ಟ್ ಮುಂದೆ ಇಟ್ಟಂತಹ ಅಂಶಗಳೇನೂ ಎಂಬುದು ಸಹ ಗಮನಾರ್ಹವಾಗುತ್ತದೆ. ಹಾಗಾದ್ರೆ ಕೋರ್ಟ್ ಮುಂದೆ  ಎಸ್ಐಟಿ ಅಧಿಕಾರಿಗಳು ಇಟ್ಟ ಅಂಶಗಳು ಇಲ್ಲಿವೆ. 


COMMERCIAL BREAK
SCROLL TO CONTINUE READING

ಮಹಿಳೆ ಮೇಲಿನ ಲೈಂಗಿಕ ದೌರ್ಜನ್ಯ (Sexual Assault) ಗಂಭೀರ ಸ್ವರೂಪದ ಪ್ರಕರಣವಾಗಿದ್ದು, ಆರೋಪಿ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಿ ಸಾಕ್ಷ್ಯ ಸಂಗ್ರಹಿಸಬೇಕು.ಸದರಿ ಆರೋಪಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತೆಯರು ಕಂಡು ಬಂದಿದ್ದು, ಅವರನ್ನ ಗುರುತಿಸಿ ಹೆಚ್ಚಿನ ಸಾಕ್ಷ್ಯ ಸಂಗ್ರಹಿಸಬೇಕು.


ಸದರಿ ಆರೋಪಿ ಪ್ರಜ್ವಲ್ ರೇವಣ್ಣ‌ (Prajwal Revanna) ಮಹಿಳೆಯರ ವಿಡಿಯೋ ಮಾಡಿದ ಬಗ್ಗೆ ಕಂಡು ಬಂದಿದ್ದು, ವಿಡಿಯೋ ಚಿತ್ರೀಕರಣ ಮಾಡಲು ಕಾರಣ ತಿಳಿಯಬೇಕಿದೆ. 


ಇದನ್ನೂ ಓದಿ- ಎಸ್ಐಟಿ ವಶದಲ್ಲಿ ಪ್ರಜ್ವಲ್...! ಮೊಬೈಲ್ ಪತ್ತೆ ಮಾಡೋದೆ ದೊಡ್ಡ ಚಾಲೆಂಜ್


ವಿಡಿಯೋ ಮಾಡಿದ ಮೊಬೈಲ್ ಬಗ್ಗೆ ಮತ್ತು ವಿಡಿಯೋ ಪ್ರಸಾರದ ವಿಚಾರಣೆ ನಡೆಸಿ ತನಿಖೆ ನಡೆಸಬೇಕಿದೆ.ಪ್ರಕರಣದ ತನಿಖೆ ವೇಳೆ ಎರಡನೇ ಆರೋಪಿಯ ಬಗ್ಗೆ ಬಹಳಷ್ಟು ತಾಂತ್ರಿಕ, ವೈಜ್ಞಾನಿಕ ಸಾಕ್ಷ್ಯ ಸಂಗ್ರಹಿಸಲಾಗಿದ್ದು ಈ ಕುರಿತು ವಿಚಾರಣೆ ನಡೆಸಬೇಕಿದೆ. 


ಅತ್ಯಾಚಾರ ಸಂಬಂಧ ಕೃತ್ಯ ನಡೆದ ಸ್ಥಳ ತೋರಿಸಿ, ರೆಕಾರ್ಡ್ ಮಾಡಲು ಬಳಸಿದ ಉಪಕರಣ ಶೋಧನೆ ನಡೆಸಬೇಕು. ಸದರಿ ಆರೋಪಿ ವಿಚಾರಣೆ ನಡೆಸಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿ ವಿಡಿಯೋದಲ್ಲಿ ಇರುವವರಲ್ಲದೆ, ವಿಡಿಯೋ ರೆಕಾರ್ಡ್ ಮಾಡದೆ ದೌರ್ಜನ್ಯಕ್ಕೆ ಒಳಗಾದವರ ಬಗ್ಗೆ ತನಿಖೆ ನಡೆಸಬೇಕಿದೆ. 


ಸದರಿ ಆರೋಪಿ ಪ್ರಜ್ವಲ್ ರೇವಣ್ಣ‌ ವಿದೇಶಕ್ಕೆ ಪಲಾಯನವಾದ ಸಮಯ ಹಾಗೂ ಆನಂತರ ವಿದೇಶದಲ್ಲಿ ವಾಸ್ತವ್ಯಕ್ಕೆ ಆಶ್ರಯ ನೀಡಿ ಸಹಕರಿಸಿದವರ ಬಗ್ಗೆ ತನಿಖೆ ನಡೆಸಬೇಕಿದೆ. ಆರೋಪಿ ಪ್ರಜ್ವಲ್ ರೇವಣ್ಣ‌ ಬಗ್ಗೆ ಸಿಆರ್ ಪಿಸಿ 53a ಅಡಿಯಲ್ಲಿ ವಿವರವಾದ ವೈದ್ಯಕೀಯ ಪರೀಕ್ಷೆ ನಡೆಸಲು ವಶಕ್ಕೆ ಕೊಡಬೇಕು.


ಇದನ್ನೂ ಓದಿ- SIT ಕಚೇರಿಯ ಶೌಚಾಲಯ ಗಬ್ಬು ವಾಸನೆ ಬರುತ್ತೆ ಅಂದ ಪ್ರಜ್ವಲ್ ರೇವಣ್ಣ!


ಸಂತ್ರಸ್ತೆಯೊಂದಿಗಿನ ಸಂಭಾಷಣೆಯೊಂದಿಗೆ ಧ್ವನಿ ಪರೀಕ್ಷೆ ನಡೆಸುವ ಅವಶ್ಯಕತೆ ಇದೆ. ಲೈಂಗಿಕ ದೌರ್ಜನ್ಯ ಸಂಬಂಧ ತನಿಖೆಗೆ ಹಾಜರಾಗಲು ನೋಟಿಸ್ ನೀಡಿದ್ದು, ಆರೋಪಿ ವಿದೇಶಕ್ಕೆ ಪ್ರಯಾಣ ಮಾಡಿದ್ದರು, ಕೃತ್ಯದ ಬಗ್ಗೆ ವಿಚಾರಣೆ ಮಾಡಿ ಹೆಚ್ಚಿನ ಸಾಕ್ಷ್ಯ ಸಂಗ್ರಹಿಸಬೇಕು ಎಂಬ 11 ಅಂಶಗಳನ್ನ ಮುಂದಿಟ್ಟು 14 ದಿನ  ಕೇಳಿದ್ದ ಎಸ್ಐಟಿ ಅಧಿಕಾರಿಗಳು ಪ್ರಜ್ವಲ್ ರೇವಣ್ಣನನ್ನು ಕಸ್ಟಡಿಗೆ ಕೇಳಿದರು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.