ಬೆಂಗಳೂರು : ಅತ್ಯಾಚಾರ ಪ್ರಕರಣದಲ್ಲಿ ಎಸ್ಐಟಿ ವಶದಲ್ಲಿರುವ ಪ್ರಜ್ವಲ್ ರೇವಣ್ಣ ವಿಚಾರಣೆ ಮುಂದುವರೆದಿದೆ. ಪ್ರಜ್ವಲ್ ಇನ್ನೂ 6 ದಿನ ಅಷ್ಟೇ ಅಲ್ಲಾ, ಇನ್ನೂ 15 ರಿಂದ 20 ದಿನ ಎಸ್ಐಟಿ ಕಸ್ಟಡಿಯಲ್ಲಿ ಇರಬೇಕಾದ ಸಾಧ್ಯತೆ ಇದೆ. ಅದು ಯಾಕೆ, ಪ್ರಜ್ವಲ್ ಕೇಸಲ್ಲಿ ಮುಂದೆ ಏನೆಲ್ಲಾ ಆಗಬಹುದು ಎಂಬುದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ.
ಯೆಸ್... ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣನನ್ಮು ನಿನ್ನೆ ನ್ಯಾಯಲಯ 6 ದಿನಗಳ ಕಾಲ ವಿಚಾರಣೆಗಾಗಿ ಎಸ್ ಐಟಿಗೆ ಸುಪರ್ದಿಗೆ ನೀಡಿದೆ. ಆದರೆ ಆರು ದಿನದ ಬಳಿಕ ಎಸ್ ಐ ಟಿ ಕಸ್ಟಡಿಯಿಂದ ಪ್ರಜ್ವಲ್ ಜೈಲಿಗೆ ಹೋಗಲ್ಲ. ಬದಲಾಗಿ ಕನಿಷ್ಠ 15-20 ದಿನ ಎಸ್ ಐ ಟಿ ವಶದಲ್ಲೇ ಪ್ರಜ್ವಲ್ ಇರಬೇಕಾಗುತ್ತೆ. ಸದ್ಯ ಹೊಳೆನರಸೀಪುರ ಠಾಣೆಯಲ್ಲಿ ದಾಖಲಾಗಿದ್ದ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ನ ಎಸ್ ಐಟಿಯ ಒಂದು ಟೀಮ್ ಕಸ್ಟಡಿಗೆ ಪಡೆದುಕೊಂಡಿದೆ. ಇದಾದ ನಂತರ ಸಿಐಡಿಯಲ್ಲಿ ದಾಖಲಾಗಿರೋ ಮತ್ತೊಂದು ಅತ್ಯಾಚಾರ ಪ್ರಕರಣದಲ್ಲಿ ಮತ್ತೊಂದು ಟೀಮ್ ಕಸ್ಟಡಿಗೆ ಪಡೆಯಲಿದೆ. ಇದಾದ ನಂತರ ಮಗದೊಂದು ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ವಿಚಾರಣೆ ಬಾಕಿಯಿದೆ. ಮೂರು ಪ್ರಕರಣಗಳನ್ನ ಬೇರೆ ಬೇರೆ ತನಿಖಾಧಿಕಾರಿಗಳು ತನಿಖೆ ನಡೆಸಯತ್ತಿದ್ದು, ಒಂದು ಪ್ರಕರಣದ ನಂತರ ಮತ್ತೊಂದು ಪ್ರಕರಣದಲ್ಲಿ ಎಸ್ಐಟಿ ಪ್ರಜ್ವಲ್ ನ ವಿಚಾರಣೆಗಾಗಿ ವಶಕ್ಕೆ ಪಡೆಯಲಿದೆ. ಒಂದು ವೇಳೆ ತನಿಖೆಗೆ ಪ್ರಜ್ವಲ್ ಸರಿಯಾಗಿ ಸಹಕಾರ ನೀಡದೆ ಹೋದ್ರೆ ಎಸ್ ಐಟಿ ಪ್ರಜ್ವಲ್ ನ ಮತ್ತೆ ಕಸ್ಟಡಿಗೆ ಕೇಳಿ ಪಡೆಯುವ ಸಾಧ್ಯತೆಯಿದೆ.
ಇದನ್ನೂ ಓದಿ:ಮನೆ ಇಲ್ಲದವರಿಗೆ ರಾಜ್ಯ ಸರ್ಕಾರದಿಂದಲೇ ಸಿಗಲಿದೆ ಉಚಿತ ಮನೆ..!
ಮತ್ತೊಂದು ಕಡೆ ಪ್ರಜ್ವಲ್ ವಿಚಾರಣೆಯನ್ನು ಎಸ್ ಐ ಟಿ ಅಧಿಕಾರಿಗಳು ಚುರುಕುಗೊಳಿಸಿದ್ದಾರೆ. ಪ್ರಜ್ವಲ್ ಮೊಬೈಲ್ ಪತ್ತೆ ಮಾಡೋದೆ ಎಸ್ ಐ ಟಿ ಗೆ ದೊಡ್ಡ ಚಾಲೆಂಜ್ ಆಗಿದ್ದು,
ವೀಡಿಯೋ ರೆಕಾರ್ಡ್ ಮಾಡಿದ ಮದರ್ ಡಿವೈಸ್ ಸಿಗುತ್ತಾ ಇಲ್ವಾ ಎಂಬುದು ಎಸ್ ಐ ಟಿಗೆ ದೊಡ್ಡ ತಲೆನೋವಾಗಿದೆ. ಇನ್ನೂ ತನಿಖೆ ವೇಳೆ ಮೊಬೈಲ್ ಬಗ್ಗೆ ಹೇಳಿಕೆ ಕೊಟ್ಟಿರುವ ಪ್ರಜ್ವಲ್, ನನ್ನ ಮೊಬೈಲ್ ಕಳೆದು ಹೋಗಿದೆ. ಒಂದು ವರ್ಷದ ಹಿಂದೆಯೇ ನನ್ನ ಪಿಎ ಭರತ್ ರಾಜ್ ಮೂಲಕ ಈ ಬಗ್ಗೆ ನಾನು ಸ್ಥಳೀಯ ಠಾಣೆಯಲ್ಲಿ ಹಾಗೂ KSP ಆಪ್ ಮೂಲಕವೂ ದೂರು ದಾಖಲಿಸಿದ್ದೆ ಎಂದಿದ್ದಾರೆ. ಇನ್ನೂ ಪೊಲೀಸರು ಸಹ ಕೂಡ ಕೇಸ್ ದಾಖಲಿಸಿ ಮೊಬೈಲ್ ಪತ್ತೆಗೆ ಮುಂದಾಗಿದ್ರು ಎಂದಿದ್ದಾರೆ.
ಪ್ರಜ್ವಲ್ ಹೇಳಿಕೆ ಬೆನ್ನಲ್ಲೇ ಹೊಳೆನರಸೀಪುರ ಪೊಲೀಸರನ್ನ ಈ ಬಗ್ಗೆ ಎಸ್ಐಟಿ ಅಧಿಕಾರಿಗಳು ಸಂಪರ್ಕ ಮಾಡಿದ್ದಾರೆ. ಸಂಪರ್ಕ ಮಾಡಿದಾಗ ಎಷ್ಟು ಹುಡುಕಿದ್ರು ಮೊಬೈಲ್ ಸಿಕ್ಕಿಲ್ಲ ಎಂಬ ಉತ್ತರ ಸಿಕ್ಕಿದೆ. ಹೀಗಾಗಿ ಮೊಬೈಲ್ IMEI ನಂಬರ್ ಪಡೆದು ಮತ್ತೆ ಮೊಬೈಲ್ ಪತ್ತೆಗೆ ಮುಂದಾದ ಎಸ್ ಐಟಿ ಮುಂದಾಗಿದೆ.
ಇದನ್ನೂ ಓದಿ:ಕೇರಳದ ದೇವಾಲಯದಲ್ಲಿ ಯಾಗ ನಡೆಯುತ್ತಿದೆ ಎಂದು ಹೇಳಿಲ್ಲ, ನನ್ನ ಹೇಳಿಕೆ ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ: ಡಿಸಿಎಂ
ಇವತ್ತು ಸಿಐಡಿ ಕಚೇರಿಗೆ ಬಂದ ಪ್ರಜ್ವಲ್ ರೇವಣ್ಣ ಪರ ವಕೀಲ ಅರುಣ್ ಭೇಟಿ ಕೊಟ್ಟರು.ನ್ಯಾಯಾಲಯದಿಂದ ಪ್ರಜ್ವಲ್ ಭೇಟಿಗೆ ಅವಕಾಶ ಸಿಕ್ಕ ಹಿನ್ನೆಲೆ ಮುಂದಿನ ಕಾನೂನು ಹೋರಾಟದ ಬಗ್ಗೆ ಪ್ರಜ್ವಲ್ ಜೊತೆ ವಕೀಲ ಅರುಣ್ ಮಾತುಕತೆ ನಡೆಸಿ ತೆರಳಿದ್ದಾರೆ. ಒಟ್ಟಾರೆಯಾಗಿ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಏನೆಲ್ಲಾ ಮಾಡಬೇಕು ಎಂದು ಪ್ರಜ್ವಲ್ ತಲೆಕೆಡಿಸಿಕೊಂಡಿದ್ದಾರೆ. ಮತ್ತೊಂದು ಕಡೆ ಎಸ್ಐಟಿ ತಂಡ ಪ್ರಜ್ವಲ್ ವಿರುದ್ದ ಸಾಕ್ಷ್ಯಧಾರ ಕಲೆಹಾಕುವಂತ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.