ಬೆಂಗಳೂರು: ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿ ಬಂಧನವಾಗಿದೆ. ಮಹಿಳಾ ವಿಭಾಗದ ಟಾಪರ್ ರಚನಾ ಹಣಮಂತ ಅರೆಸ್ಟ್ ಆಗಿದ್ದಾಳೆ. ಆಳಂದ ತಾಲೂಕಿನ ಹೀರೋಳ್ಳಿ ಬಳಿ ರಚನಾಳನ್ನು ಸಿಐಡಿ ಡಿಟೆಕ್ಟಿವ್ ಇನ್ಸ್ ಪೆಕ್ಟರ್ ಮಂಜುನಾಥ್ ಆಂಡ್ ಟೀಂ  ಬಂಧಿಸಿದ್ದಾರೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: Murugha Mutt : ಮುರುಘಾ ಶರಣರ ಆಡಿಯೋ ವೈರಲ್ : ಅದ್ರಲ್ಲಿ ಏನಿದೆ ಗೊತ್ತಾ?


ಬಂಧಿಸಿದ ಬಳಿಕ ಗುಲ್ಬರ್ಗ ಕೋರ್ಟ್ ಗೆ ಹಾಜರುಪಡಿಸಿ ಇಂದು ವಿಚಾರಣೆಗಾಗಿ ಬೆಂಗಳೂರಿನ  ಸಿಐಡಿ ಕಚೇರಿಗೆ ಕರೆತಂದಿದ್ದಾರೆ.


ಸದ್ಯ ಸಿಕ್ಕಿರುವ ಮಾಹಿತಿಯ ಪ್ರಕಾರ ರಚನಾ ಪಿಎಸ್ಐ ಹುದ್ದೆ ಪಡೆಯಲು 50 ಲಕ್ಷ ರೂ ನೀಡಿದ್ದಳಂತೆ. ನಂತರ ಪಿಎಸ್ಐ ಸ್ಕ್ಯಾಮ್ ಬೆಳಕಿಗೆ ಬರುತ್ತಿದ್ದಂತೆ ಪರಾರಿಯಾಗಿದ್ದ ರಚನಾ ಬೀದರ್,ಕಲಬುರಗಿ, ಮಹಾರಾಷ್ಟ್ರ ಭಾಗದಲ್ಲಿ  ಓಡಾಡಿಕೊಂಡಿದ್ದಳು. ಮೊದಮೊದಲು ರಚನಾ ಮೊಬೈಲ್ ಕೂಡ ಬಳಸುತ್ತಿರಲಿಲ್ಲ. ಕಳೆದ ಒಂದು ವಾರದಿಂದ ಸಿಮ್ ಹಾಗೂ ಮೊಬೈಲ್ ಬಳಸಿ ಮನೆಯವರ ಜೊತೆ ಮಾತನಾಡಿದ್ದಳು. 


ಇದನ್ನೂ ಓದಿ: ಲಾರಿಗೆ ಅಡ್ಡ ಹಾಕಿ ಹಣಕ್ಕೆ ಬೇಡಿಕೆ: ನಾಲ್ವರು ಬ್ಲ್ಯಾಕ್ ಮೇಲ್ ಪತ್ರಕರ್ತರು ಅರೆಸ್ಟ್..!


ಸದ್ಯ ನೆಟ್ವರ್ಕ್ ಜಾಡು ಹಿಡಿದ ಸಿಐಡಿ ರಚನಾಳನ್ನ ಖೆಡ್ಡಾಕ್ಕೆ ಕೆಡವಿದ್ದಾರೆ. ತಲೆ ಮರೆಸಿಕೊಳ್ಳುವ ಮೊದಲು ಐದು ಲಕ್ಷ ಹಣವನ್ನು ರಚನಾ ಹೊಂದಿದ್ದಳು ಎಂದು ತಿಳಿದು ಬಂದಿದೆ‌‌.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ