PSI Recruitment Scam : ಪಿಎಸ್‌ಐ ಪರೀಕ್ಷೆ ಅಕ್ರಮ : ಸಿಐಡಿ ಬಲೆಗೆ ಬಿದ್ದ ಮಹಿಳಾ ಅಭ್ಯರ್ಥಿ!
ಪಿಎಸ್‌ಐ ಮಹಿಳಾ ಕೋಟಾದಲ್ಲಿ ರಚನಾ ಮೊದಲ ರ‍್ಯಾಂಕ್ ಪಡೆದಿದ್ದರು. ಹಾಗೆ, ರಚನಾ ಪಿಎಸ್‌ಐ ಪರೀಕ್ಷಾ ಅಕ್ರಮದಲ್ಲಿ ಮುಂಚೂಣಿಯಲ್ಲಿದ್ದಾರೆ.
ಕಲಬುರಗಿ : ಪಿಎಸ್‌ಐ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಮತ್ತೊಬ್ಬ ಪಿಎಸ್‌ಐ ಅಭ್ಯರ್ಥಿಯನ್ನ ಬಂಧಿಸಿದ್ದಾರೆ. ಮಹಿಳಾ ಪಿಎಸ್‌ಐ ಅಭ್ಯರ್ಥಿ ರಚನಾ ಬಂಧಿತ ಆರೋಪಿಯಾಗಿದ್ದಾರೆ. ಪಿಎಸ್‌ಐ ಮಹಿಳಾ ಕೋಟಾದಲ್ಲಿ ರಚನಾ ಮೊದಲ ರ‍್ಯಾಂಕ್ ಪಡೆದಿದ್ದರು. ಹಾಗೆ, ರಚನಾ ಪಿಎಸ್‌ಐ ಪರೀಕ್ಷಾ ಅಕ್ರಮದಲ್ಲಿ ಮುಂಚೂಣಿಯಲ್ಲಿದ್ದಾರೆ.
ರಚನಾ ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ಮೂಲದವಳು, ಪಿಎಸ್‌ಐ ಹಗರಣ ಹೊರ ಬಂದಾಗಿನಿಂದ ನಾಪತ್ತೆಯಾಗಿದ್ದರು. ಬೆಂಗಳೂರು ಸಿಐಡಿ ಅಧಿಕಾರಿಗಳು ರಚನಾಳನ್ನು ಎಷ್ಟೇ ಹುಡುಕಿದರು ಅವರ ಕೈಗೆ ಸಿಕ್ಕಿರಲಿಲ್ಲ. ಈ ಆರೋಪಿ ತಲೆ ಮರೆಸಿಕೊಂಡು ಮಹಾರಾಷ್ಟ್ರ ಗಡಿಯಲ್ಲಿ ಓಡಾಡುತ್ತಿದ್ದಳು. ಕೊನೆಗೆ ಮಹಾರಾಷ್ಟ್ರ-ಕರ್ನಾಟಕ ಗಡಿ ಹಿರೋಳ್ಳಿ ಚೆಕ್‌ಪೋಸ್ಟ್ ಬಳಿ ರಚನಾ ಸಿಐಡಿ ಬಲೆಗೆ ಬಿದ್ದಿದ್ದಾಳೆ. ಇವಳಿಗಾಗಿ ಕಲಬುರಗಿ ಸಿಐಡಿ ಅಧಿಕಾರಿಗಳು ಒಂದುವರೆ ತಿಂಗಳಿಂದ ಫಾಲೋಅಪ್ ಮಾಡಿದ್ದರು.
ಇದನ್ನೂ ಓದಿ : ರಾಹುಲ್ ಗಾಂಧಿ ಪಕ್ಷದ ಮುಖ್ಯಸ್ಥರಾಗಲು ಒತ್ತಾಯಿಸುತ್ತೇವೆ-ಮಲ್ಲಿಕಾರ್ಜುನ್ ಖರ್ಗೆ
ಸಿಐಡಿ ಅಧಿಕಾರಿಗಳು ಆರೋಪಿ ರಚನಾಳನ್ನು ನಿನ್ನೆ ಸಂಜೆ ಬಂಧಿಸಿ ಕಲಬುರಗಿಗೆ ಕರೆತಂದಿದ್ದಾರೆ. ಇಂದು ಕಲಬುರಗಿ 5ನೇ ಜೆಎಂಎಫ್ ಸಿ ಕೋರ್ಟ್ ನ್ಯಾಯಾಧೀಶರ ಮುಂದೆ ರಚನಾ ಹಾಜರುಪಡಿಸಿದ್ದಾರೆ.
ಇದಾದ ಮೇಲೆ ಬೆಂಗಳೂರು ಸಿಐಡಿ ಟೀಂ ಆರೋಪಿ ರಚನಾಳನ್ನು ಕರೆದ್ಯೊಯಲು ಕಲಬುರಗಿಗೆ ಆಗಮಿಸಿದ್ದಾರೆ. ಇಂದು ರಾತ್ರಿ ಸಿಐಡಿ ಅಧಿಕಾರಿಗಳು ಕಲಬುರಗಿಯಿಂದ ಬೆಂಗಳೂರಿಗೆ ಕರೆದ್ಯೊಯಲಿದ್ದಾರೆ.
ಇದನ್ನೂ ಓದಿ : Muruga Matha : ಮಠದ ಮಾಜಿ ಆಡಳಿತಾಧಿಕಾರಿ ವಿರುದ್ದವು ಅತ್ಯಾಚಾರ ಯತ್ನ, ದೂರು ನೀಡಿದ ಮುರುಘಾ ಮಠ ವಾರ್ಡನ್
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.