ದೇವರಿಗೂ ಇನ್ಮುಂದೆ ಕ್ಯೂ ಆರ್ ಕೋಡ್! ರಾಜ್ಯದ ಪ್ರಖ್ಯಾತ ದೇಗುಲದಲ್ಲಿ ಇ-ಹುಂಡಿ ಸೇವೆ ಆರಂಭ

ವಾರಾಂತ್ಯ ಬಂತೆಂದರೆ ರಾಜ್ಯ-ಅಂತರಾಜ್ಯಗಳಿಂದ ಜನರು‌ ಕಿಕ್ಕಿರುದು ಪ್ರಕೃತಿ ಸೌಂದರ್ಯ ಸವಿಯಲಿದ್ದು ಸಾವಿರಾರು ಕೃಷ್ಣ ಭಕ್ತರು ದೇವರ ದರ್ಶನಕ್ಕೆ ಲಗ್ಗೆ ಇಡುತ್ತಾರೆ‌

Written by - Bhavishya Shetty | Last Updated : Aug 27, 2022, 03:17 PM IST
    • ಹಿಮವದ್ ಗೋಪಾಲ ಸ್ವಾಮಿ ದೇವಸ್ಥಾನದಲ್ಲಿ ಇ-ಹುಂಡಿ ಸೇವೆ
    • ಧಾರ್ಮಿಕ ಸ್ಥಳ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಇ-ಹುಂಡಿ ಸೇವೆ
    • ಭಕ್ತಾದಿಗಳು ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಇ-ಹುಂಡಿಗೆ ಹಣ ಸಲ್ಲಿಸಬಹುದಾಗಿದೆ
ದೇವರಿಗೂ ಇನ್ಮುಂದೆ ಕ್ಯೂ ಆರ್ ಕೋಡ್! ರಾಜ್ಯದ ಪ್ರಖ್ಯಾತ ದೇಗುಲದಲ್ಲಿ ಇ-ಹುಂಡಿ ಸೇವೆ ಆರಂಭ title=
Himavad Gopalaswai

ಚಾಮರಾಜನಗರ: ಸದಾ ಹಿಮಚ್ಛಾದಿತವಾಗಿರುವ, ನಾಡಿನ ಪ್ರಮುಖ ಪ್ರೇಕ್ಷಣೀಯ ಸ್ಥಳದಲ್ಲಿ ಒಂದಾಗಿರುವ ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಇ-ಹುಂಡಿ ಸೇವೆ ಆರಂಭವಾಗಿದೆ.

ಹಿಮವದ್ ಗೋಪಾಲ ಸ್ವಾಮಿ ದೇವಸ್ಥಾನದಲ್ಲಿ ಇ-ಹುಂಡಿ ಸೇವೆಗೆ ತಹಸೀಲ್ದಾರ್ ಸಿ.ಜಿ.ರವಿಶಂಕರ್ ಇಂದು  ಚಾಲನೆ ಕೊಟ್ಟು ಮಾತನಾಡಿ, ದೇಶವೇ ಡಿಜಿಟಲೀಕರಣವಾಗುತ್ತಿರುವ ಸಂದರ್ಭದಲ್ಲಿ ಭಕ್ತರು ಕಾಣಿಕೆ ಸಲ್ಲಿಸಲು ನೆರವಾಗಲಿ ಎಂಬ ಉದ್ದೇಶದಿಂದ ಧಾರ್ಮಿಕ ಸ್ಥಳ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಇ-ಹುಂಡಿ ಸೇವೆಯನ್ನು ಎಸ್ ಬಿಐ ಸಹಭಾಗಿತ್ವದಲ್ಲಿ ಆರಂಭಿಸಲಾಗಿದೆ ಎಂದರು. 

ಇದನ್ನೂ ಓದಿ: ಬೇಬಿ ಬಂಪ್ ಮರೆಮಾಚಿ ಫೋಟೋಗೆ ಪೋಸ್ ನೀಡಿದ್ರಾ ನಟಿ ಕತ್ರಿನಾ ಕೈಫ್!

ಭಕ್ತಾದಿಗಳು ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಇ-ಹುಂಡಿಗೆ ಹಣ ಸಲ್ಲಿಸಬಹುದಾಗಿದೆ. ಭಕ್ತರು ತಾವು ಕುಳಿತ ಸ್ಥಳದಲ್ಲೆ ದೇವಸ್ಥಾನಕ್ಕೆ ಹಣ ಜಮಾ ಮಾಡಲು ನೆರವಾಗುವ ಉದ್ದೇಶದಿಂದ ಇ-ಹುಂಡಿ ಆರಂಭ ಮಾಡಲಾಗಿದ್ದು, ಇನ್ನು ಮುಂದೆ ಜನರು ದೇವಸ್ಥಾನದ ಗೋಲಕಕ್ಕೆ ಹಣ ನೀಡುವ ಬದಲು ಇ-ಹುಂಡಿಗೆ ಗೂಗಲ್ ಪೇ, ಫೋನ್ ಪೇ, ಭೀಮ್ ಆ್ಯಪ್, ಪೇಟಿಎಂ ಮೂಲಕ ಹಣ ಹಾಕಬಹುದು ಎಂದು ತಿಳಿಸಿದರು. 

ಇದನ್ನೂ ಓದಿ: ದೇಶದ 49ನೇ ಸಿಜೆಐ ಆಗಿ ನ್ಯಾ. ಉದಯ್ ಉಮೇಶ್ ಲಲಿತ್ ಪ್ರಮಾಣವಚನ!

ನೆಟ್ ವರ್ಕ್ ಸಮಸ್ಯೆ: ವಾರಾಂತ್ಯ ಬಂತೆಂದರೆ ರಾಜ್ಯ-ಅಂತರಾಜ್ಯಗಳಿಂದ ಜನರು‌ ಕಿಕ್ಕಿರುದು ಪ್ರಕೃತಿ ಸೌಂದರ್ಯ ಸವಿಯಲಿದ್ದು ಸಾವಿರಾರು ಕೃಷ್ಣ ಭಕ್ತರು ದೇವರ ದರ್ಶನಕ್ಕೆ ಲಗ್ಗೆ ಇಡುತ್ತಾರೆ‌.‌ ಆದರೆ, ಗೋಪಾಲಸ್ವಾಮಿ ಬೆಟ್ಟ ಏರುತ್ತಿದ್ದಂತೆ ಎಲ್ಲಾ ಮೊಬೈಲ್ ನೆಟ್ವರ್ಕ್ ಕೈಕೊಡಲಿದ್ದು ದೇವಸ್ಥಾನಕ್ಕೆ ಭೇಟಿ ಕೊಡುವ ಮಂದಿ ಇ-ಹುಂಡಿ ಬಳಸುವುದು ದುಸ್ತರ. ಆದರೆ, ಫೋಟೋ ಸೆರೆಹಿಡಿದು ತಪ್ಪಲಿನಲ್ಲಿ ಇಲ್ಲವೇ ತಾವು ಇಷ್ಟ ಪಟ್ಟ ದಿನಗಳಲ್ಲಿ ಮನೆಯಲ್ಲೇ ಕುಳಿತು ಗೋಲಕಕ್ಕೆ ಹಣ ಹಾಕಬಹುದಾಗಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News