ಬೆಂಗಳೂರ: ರಾಜ್ಯದ 51 ಠಾಣೆಗೆ ಬೇಕಾಗಿದ್ದ ಸರಗಳ್ಳನನ್ನ ಬೆಂಗಳೂರಿನ ಪುಟ್ಟೇನಹಳ್ಳಿ ಪೊಲೀಸರು ಕೊನೆಗೂ ಬಂಧಿಸಿದ್ದಾರೆ.  ಬೆಂಗಳೂರು ಸಿಟಿ ಪೊಲೀಸರ ನಿದ್ದೆಗೆಡೆಸಿದ್ದ ತಮಿಳುನಾಡು ಮೂಲದ ಸಂತೋಷ್ ಖತರ್ನಾಕ್ ಸರಗಳ್ಳನಾಗಿದ್ದು, ಸಂತೋಷ್ ಗೆ ಸಹಕರಿಸಿದ್ದ ಆರೋಪಿ ರವಿ ಎಂಬಾತನನ್ನು ಸಹ ಕಂಬಿ ಹಿಂದೆ ತಳ್ಳಲಾಗಿದೆ.


COMMERCIAL BREAK
SCROLL TO CONTINUE READING

ಬಂಧಿತನಿಂದ ಸುಮಾರು 1 ಕೆ.ಜಿ.ಚಿನ್ನಾಭರಣ ಸೀಜ್ ಮಾಡಲಾಗಿದ್ದು,ಆರೋಪಿ ಸಂತೋಷ್ ಇಡೀ ಬೆಂಗಳೂರು ನಗರ ಸುತ್ತಿ ಸರಗಳ್ಳತನ ಮಾಡುತ್ತಿದ್ದ. ಬೆಳಗ್ಗೆ 5 ಗಂಟೆಗೆ ಬೈಕ್ ನಲ್ಲಿ ಮನೆ ಬಿಟ್ಟರೇ ಸರಗಳ್ಳತನ ಮಾಡಿಯೇ ಮನೆಗೆ ಹಿಂದಿರುಗುತ್ತಿದ್ದ. ಬೈಕ್ ಗೆ ನಕಲಿ ನಂಬರ್ ಪ್ಲೇಟ್ ಬಳಸುತ್ತಿದ್ದ ಆರೋಪಿ, ಆರ್ಟಿಓ ವೆಬ್ ಸೈಟ್ ಗೆ ಹೋಗಿ ತನ್ನ ಪಲ್ಸರ್ ಬೈಕ್ ಕಲರ್ ಗೆ ಯಾವ ಯಾವ ನಂಬರ್ ಹೊಂದಿಕೆಯಾಗುತ್ತದೆ ಎಂದು ಸರ್ಚ್ ಮಾಡಿ ಬಳಿಕ ಅದೇ ಬೇರೆ ಬೇರೆ ಬೈಕ್ ಗಳ ನಕಲಿ ನಂಬರ್ ಕಲೆಕ್ಟ್ ಮಾಡುತ್ತಿದ್ದ. ಆ ನಕಲಿ ನಂಬರ್ ಪ್ಲೇಟ್ ಬಳಸಿಕೊಂಡು ಚೈನ್ ಸ್ನ್ಯಾಚ್ ಮಾಡಲು ಫೀಲ್ಡ್ ಗೆ ಇಳಿಯುತ್ತಿದ್ದ. ಮನೆ ಬಿಡುವಾಗ ಹೆಲ್ಮೆಟ್ ಧರಿಸಿದ್ರೆ ಎಲ್ಲಿಯೂ ಹೆಲ್ಮೆಟ್ ತೆಗೆಯದೇ ಬೈಕ್ ನಲ್ಲಿ ಓಡಾಟ ನಡೆಸುತ್ತಿದ್ದ. ‌


ಒಂಟಿ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಸರ ಎಗರಿಸುತ್ತಿದ್ದ ಈತನಿಗಾಗಿ  ಕಳೆದ ಎರಡು ತಿಂಗಳಿಂದ ಪುಟ್ಟೇನಹಳ್ಳಿ ಪೊಲೀಸರು ಶೋಧ ನಡೆಸಿದ್ದರು. ಪುಟ್ಟೇನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಎರಡು ಕಡೆ ಸರಗಳ್ಳತನ ಮಾಡಿದ್ದ ಸಂತೋಷ್ ನ ಹಿಡಿಯಲು ಪೊಲೀಸರು ಸುಮಾರು 300 ಕಿ.ಲೋ .ಮೀಟರ್ ಇರುವ ಎಲ್ಲಾ ಸಿಸಿಟಿವಿ ಪರಿಶೀಲನೆ ನಡೆಸಿದ್ದರು. 


ಇದನ್ನೂ ಓದಿ- Crime News : ಗಂಡನ ಮನೆಗೆ ಕನ್ನ ಕಾಕಿದ ಹೆಂಡತಿ.. ನಗದು, ಚಿನ್ನ ದೋಚಿ ಎಸ್ಕೇಪ್!


ಈ ಖತರ್ನಾಕ್ ಆಸಾಮಿ ನಗರದ ಜೆ.ಪಿ.ನಗರ, ಪುಟ್ಟೇನಹಳ್ಳಿ, ಹೊಸಕೋಟೆ, ಜಯನಗರ, ಬನ್ನೇರಘಟ್ಟ, ಯಲಹಂಕ, ಕೊಡಿಗೆಹಳ್ಳಿ, ಅಮೃತಹಳ್ಳಿಯಲ್ಲಿ ಚೈನ್ ಸ್ನಾಚ್ ಮಾಡಿದ್ದ. ಸಂತೋಷ್ ನ  ಹಿಡಿಯಲು ಬೆಂಗಳೂರು ನಗರ, ಗ್ರಾಮಾಂತರ ಪೊಲೀಸರು ಸಾಕಷ್ಟು ತಲೆ ಕೆಡೆಸಿಕೊಂಡಿದ್ದರು. ಆದರೆ ಸಂತೋಷ್ ಕಳೆದ 4 ವರ್ಷದಿಂದ ಯಾರ ಕೈಗೂ ಸಿಕ್ಕಿರಲಿಲ್ಲ. ಪುಟ್ಟೇನಹಳ್ಳಿ ಪೊಲೀಸರು ಆರೋಪಿ ಸಂತೋಷ್ ಚಲನವಲನದ ಬಗ್ಗೆ ಹದ್ದಿನ ಕಣ್ಣಿಟ್ಟು ಕೊನೆಗೂ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


ಸಿಸಿಟಿವಿಯಲ್ಲಿ ಆರೋಪಿ ದೇಹದ ಮಾದರಿ, ಹೆಲ್ಮೆಟ್ ಹಾಗೂ ಬ್ಲೂ ಕಲರ್ ಶರ್ಟ್ ಸುಳಿವಿನಾಧರದ ಮೇಲೆ ಈ ಕಾರ್ಯಾಚರಣೆ ನಡೆಸಲಾಗಿತ್ತು.  ಇನ್ಸ್ ಪೆಕ್ಟರ್ ಮುನಿರೆಡ್ಡಿ, ಪಿಎಸ್ಐ ಪ್ರಸನ್ನ ಕುಮಾರ್, ರಮೇಶ್ ಹೂಗಾರ್, ಮನು ಹಾಗೂ ಸಿಬ್ಬಂದಿಗಳು ಹರಸಾಹಸ ಪಟ್ಟು ಅರೋಪಿ ಪತ್ತೆ ಮಾಡಿದ್ದಾರೆ.  ಸಿಸಿಟಿವಿ ಕೊಟ್ಟ ಸುಳಿವಿನ ಮೇಲೆ ಆರೋಪಿ ಸಂತೋಷ್ ನ ಜಾಡು ಬೆನ್ನತ್ತಿ ಕೊನೆಗೂ ಖತರ್ನಾಕ್ ಕಳ್ಳನ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.


ಇದನ್ನೂ ಓದಿ- Bomb Threat Call : ಮುಂಬೈನ ಸುಪ್ರಸಿದ್ಧ ಹೋಟೆಲ್‌ಗೆ ಬಂತು ಬಾಂಬ್ ಬೆದರಿಕೆ ಕರೆ


ಬಿಕಾಂ ಓದಿದ್ದ ಬಂಧಿತ ಸಂತೋಷ್ ಇಂಟಿರಿಯರ್ ಕೆಲಸ ಮಾಡುತ್ತಿದ್ದ, ಇಂಟಿರಿಯರ್ ಕೆಲಸದಿಂದ ಬರುವ ಹಣ ಸಾಕಾಗುತ್ತಿರಲಿಲ್ಲ. ಹೀಗಾಗಿ ಕಳೆದ 4 ವರ್ಷದಿಂದ ಚೈನ್ ಸ್ನ್ತಾಚ್ ಅನ್ನೇ ವೃತ್ತಿಯಾಗಿಸಿಕೊಂಡಿದ್ದ. ಸದ್ಯ ಈತನ ವಿರುದ್ಧ 51 ಕೇಸ್ ಗಳು ದಾಖಲಾಗಿವೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.