ಜೈಪುರ: ಇಲ್ಲಿನ ಜೈಸಿಂಗ್‌ಪುರ ಖೋರ್ ಪ್ರದೇಶದ ರೆಸಾರ್ಟ್ ಮೇಲೆ ಪೊಲೀಸರು ದಾಳಿ ನಡೆಸಿದ ಬಳಿಕ ಅಕ್ರಮ ಜೂಜಾಟದಲ್ಲಿ ತೊಡಗಿದ್ದ 13 ಮಹಿಳೆಯರು ಸೇರಿದಂತೆ 84 ಜನರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಬಂಧಿತರಲ್ಲಿ ಕರ್ನಾಟಕ ಪೊಲೀಸ್ ಇನ್ಸ್‌ಪೆಕ್ಟರ್ ಮತ್ತು ಬೆಂಗಳೂರಿನಲ್ಲಿ ತಹಸೀಲ್ದಾರ್ ಕೂಡ ಸೇರಿದ್ದಾರೆ.
ಜೈಪುರ ಪೊಲೀಸರ ತಂಡ ಶನಿವಾರ ರಾತ್ರಿ ಆರೋಪಿಗಳು ಜೂಜಾಡುತ್ತಿದ್ದ ಸಾಯಿಪುರ ಬಾಗ್ ಅರಮನೆಯ ಮೇಲೆ ದಾಳಿ ನಡೆಸಿದ ನಂತರ ಅವರನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Jaipur, Rajasthan | Crime branch team along with Jaisinghpura PS arrested 84 people, incl 13 women from a farmhouse where a rave party was ongoing. Accused would reel people in event on pretext of providing them services including alcohol, gambling&women: AP Lamba, Additional CP pic.twitter.com/Bs9ilyzngc
— ANI MP/CG/Rajasthan (@ANI_MP_CG_RJ) August 22, 2022
9 ಹುಕ್ಕಾ, ಐಎಂಎಫ್‌ಎಲ್‌ನ 44 ಬಾಟಲಿಗಳು, 66 ಬಿಯರ್ ಬಾಟಲಿಗಳು, 14 ಐಷಾರಾಮಿ ಕಾರುಗಳು, ಒಂದು ಟ್ರಕ್ ಮತ್ತು 23.78 ಲಕ್ಷ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಜೈಪುರ ಪೊಲೀಸ್ ಹೆಚ್ಚುವರಿ ಆಯುಕ್ತ ಅಜಯ್‌ಪಾಲ್ ಲಂಬಾ ತಿಳಿಸಿದ್ದಾರೆ.
ಆರೋಪಿಗಳು ಹರಿಯಾಣ, ಪಂಜಾಬ್, ಕರ್ನಾಟಕ, ಉತ್ತರ ಪ್ರದೇಶ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳವರು ಎಂದು ಪೊಲೀಸರು ತಿಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.