Bengaluru rave party : ರೇವ್ ಪಾರ್ಟಿ ಮೇಲೆ ದಾಳಿ.. ಕೊಕೇನ್, ಎಂಡಿಎಂಎ ಮಾತ್ರೆಗಳು ಪೊಲೀಸರ ವಶಕ್ಕೆ
Bengaluru rave party : ಬೆಂಗಳೂರಿನ ಫಾರ್ಮ್‌ಹೌಸ್‌ನಲ್ಲಿ ಆಯೋಜಿಸಲಾಗಿದ್ದ ರೇವ್ ಪಾರ್ಟಿಯ ಮೇಲೆ ಕೇಂದ್ರ ಅಪರಾಧ ವಿಭಾಗದ ತಂಡ ದಾಳಿ ನಡೆಸಿದೆ.
ಬೆಂಗಳೂರು: ಹುಟ್ಟುಹಬ್ಬದ ಕಾರ್ಯಕ್ರಮದ ನೆಪದಲ್ಲಿ ಬೆಂಗಳೂರಿನ ಫಾರ್ಮ್‌ಹೌಸ್‌ನಲ್ಲಿ ಆಯೋಜಿಸಲಾಗಿದ್ದ ರೇವ್ ಪಾರ್ಟಿಯ ಮೇಲೆ ಕೇಂದ್ರ ಅಪರಾಧ ವಿಭಾಗದ ತಂಡ ದಾಳಿ ನಡೆಸಿ 17 ಎಂಡಿಎಂಎ ಮಾತ್ರೆಗಳು ಮತ್ತು ಕೊಕೇನ್ ವಶಪಡಿಸಿಕೊಂಡಿದೆ.
ಇದನ್ನೂ ಓದಿ: IT Raid: 40 ಕೋಟಿ ರೂ. ಸೀಜ್; ಕಂತೆ ಕಂತೆ ನೋಟು ನೋಡಿ ಅಧಿಕಾರಿಗಳು ದಂಗು!
ಘಟನಾ ಸ್ಥಳದಲ್ಲಿ ಆಂಧ್ರ ಶಾಸಕ ಕಾಕಣಿ ಗೋವರ್ಧನ ರೆಡ್ಡಿ ಅವರ ಶಾಸಕರ ಪಾಸ್ ಇರುವ ಬೆಂಜ್ ಕಾರು ಪತ್ತೆಯಾಗಿದೆ. ಅಲ್ಲದೇ Mercedes-Benz, Jaguar, ಮತ್ತು Audi ಸೇರಿದಂತೆ 15 ಕ್ಕೂ ಹೆಚ್ಚು ಐಷಾರಾಮಿ ಕಾರುಗಳು ಆವರಣದಲ್ಲಿ ಕಂಡುಬಂದಿವೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ನಾರ್ಕೋಟಿಕ್ಸ್ ಸ್ನಿಫರ್ ಡಾಗ್‌ಗಳೊಂದಿಗೆ ಸ್ಥಳವನ್ನು ಪರಿಶೀಲಿಸುತ್ತಿದ್ದಾರೆ. ಪಾರ್ಟಿಯಲ್ಲಿ ಭಾಗಿಯಾಗಿರುವ ಎಲ್ಲ ವ್ಯಕ್ತಿಗಳನ್ನು ಗುರುತಿಸಲು ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ: Lok Sabha Election 2024: ಐದನೇ ಹಂತದಲ್ಲಿ ಇಂದು 49 ಸ್ಥಾನಗಳಿಗೆ ಮತದಾನ, ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.