Kannada Crime News: ಆತ ನಟೋರಿಯಸ್ ರೌಡಿ ಶೀಟರ್. ಸಣ್ಣ ಪುಟ್ಟ ಫೈನಾನ್ಸ್ ಹಾಗೂ ರಿಯಲ್ ಎಸ್ಟೇಟ್ ವ್ಯವಹಾರ ನೋಡಿಕೊಳ್ತಿದ್ದ. ಹೀಗಿರುವಾಗ ನೆನ್ನೆ ರಾತ್ರಿ ಟೀ ಕುಡಿಯಲು ಬಂದಿದ್ದ ಆತನನ್ನ ಅಟ್ಯಾಕ್ ಮಾಡಿದ ನಾಲ್ಕೈದು ಮಂದಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದಿದ್ದಾರೆ. ಹೌದು, ರಾಜಧಾನಿಯಲ್ಲಿ ರೌಡಿ ಶೀಟರ್ ನನ್ನು ಅಟ್ಟಾಡಿಸಿ ಹತ್ಯೆ ಮಾಡಿದ್ದಾರೆ. ಹೀಗೆ ಹತ್ಯೆಗೀಡಾಗಿ ರಕ್ತದ ಮಡುವಿನಲ್ಲಿ ಬಿದ್ದವ ರೌಡಿ ಶೀಟರ್ ಕಪಿಲ್. 


COMMERCIAL BREAK
SCROLL TO CONTINUE READING

ಬೆಂಗಳೂರಿನ ಅಂಬೇಡ್ಕರ್ ಕಾಲೇಜಿನ ಬಳಿ ನೆನ್ನೆ ರಾತ್ರಿ ಈ ಕೊಲೆ ನಡೆದಿರೋದು.  ಡಿಜೆ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಡಿವಾಳ ಠಾಣೆ ರೌಡಿಶೀಟರ್ ಕಪಿಲ್ ನನ್ನ ಬರ್ಬರವಾಗಿ ಹತ್ಯೆ ಮಾಡಲಾಗಿದೆ. 2014 ರಲ್ಲಿ ನಡೆದ ನಕ್ರ ಬಾಬುವಿನ ಕೊಲೆ ಪ್ರಕರಣದಲ್ಲಿ ಕಪಿಲ್ ಆರೋಪಿಯಾಗಿದ್ದ. ಡಿಜೆ ಹಳ್ಳಿಯಲ್ಲಿ ಫೈನಾನ್ಸ್ ಹಾಗೂ ರಿಯಲ್ಸ್ ಎಸ್ಟೇಟ್ ವ್ಯವಹಾರ ಮಾಡ್ತಿದ್ದ ಮೃತ ರೌಡಿ ಶೀಟರ್  ತನ್ನದೇ ಗ್ಯಾಂಗ್ ನ್ನ ಕಟ್ಟಿಕೊಂಡಿದ್ದ. ನೆನ್ನೆ ರಾತ್ರಿ ಎಂಟು ಗಂಟೆ ಸುಮಾರಿಗೆ ತನ್ನ ಕಾರಿನಲ್ಲಿ ಆರ್ ಟಿ ನಗರದ ಕೆಎಚ್ ಬಿ ರಸ್ತೆಗೆ ಬಂದಿದ್ದ. 


ಇದನ್ನೂ ಓದಿ- ಪೋಷಕರೇ ಹುಷಾರ್! ರಾಜ್ಯದ ಈ ಭಾಗದಲ್ಲಿ ಸಕ್ರಿಯವಾಗಿದೆ ಮಕ್ಕಳ ಅಪಹರಣಕಾರರ ಗ್ಯಾಂಗ್!


ಆಗಾಗ ಸ್ನೇಹಿತರನ್ನ ಭೇಟಿಯಾಗಿ ಟೀ ಕುಡಿಯಲು ಬರ್ತಿದ್ದ ಕಪಿಲ್, ಅದೇ ರೀತಿ ನೆನ್ನೆ ರಾತ್ರಿ ಕೂಡ ಟೀ ಕುಡಿಯಲು ಬಂದಿದ್ದ. ಈ ವೇಳೆ ಎರಡು ಬೈಕ್ ಗಳಲ್ಲಿ ಬಂದಿದ್ದ ದುಷ್ಕರ್ಮಿಗಳು, ಹೆಲ್ಮೆಟ್ ಹಾಗೂ ಪುಲ್ ಓವರ್ ಧರಿಸಿದ್ರು. ಬೈಕ್ವೊಂದರ ನಂಬರ್ ಪ್ಲೇಟ್ ಮೇಲೆ ಅನುಮಾನ ಪಟ್ಟಿದ್ದು, ಸ್ನೇಹಿತನನ್ನ ಕಪಿಲ್ ಕಳುಹಿಸಿದ್ದ. ಈ ಮಧ್ಯೆ ಸ್ನೇಹಿತ ಹೋಗುತ್ತಿದ್ದಂತೆ ಕಪಿಲ್ ಮೇಲೆ ಅಟ್ಯಾಕ್ ಮಾಡಿದ ಗ್ಯಾಂಗ್, ಸುಮಾರು ನೂರು ಮೀಟರ್ ಅಟ್ಟಾಡಿಸಿಕೊಂಡು ಮಾರಣಾಂತಿಕ ಹಲ್ಲೆ ಮಾಡಿದೆ. ಆಸ್ಪತ್ರೆಗೆ ಸಾಗಿಸುವಾಗಲೇ ಕಪಿಲ್ ಮೃತಪಟ್ಟಿದ್ದಾನೆ.


ಇದನ್ನೂ ಓದಿ- ಡಬಲ್ ಮರ್ಡರ್ ಮಾಡಿ ಬಿಲ್ಡಪ್ ರೀಲ್ಸ್ ಹಾಕಿದ್ದ ಜೋಕರ್ ಫಿಲಿಕ್ಸ್ ಅಂದರ್


ಇನ್ನು ಸಿಟಿ ಮಾರ್ಕೆಟ್, ಹೆಬ್ಬಾಳ, ಮಡಿವಾಳ ಸೇರಿ ಹಲವು ಠಾಣೆಗಳಲ್ಲಿ ಕಪಿಲ್ ಮೇಲೆ ಕೇಸ್ ಗಳಿವೆ. ವಿಲ್ಸನ್ ಗಾರ್ಡನ್ ಶಿಷ್ಯನಾಗಿದ್ದ ಕಪಿಲ್ ಕೊಲೆಯನ್ನ ರೌಡಿ ಶೀಟರ್ ಮಹೇಶ್ ಏನಾದ್ರು ಮಾಡಿಸಿದ್ನಾ ಎಂಬ ಅನುಮಾನ ಹಿನ್ನೆಲೆ ತನಿಖೆ ನಡೆಸಲಾಗ್ತಿದೆ. ಸದ್ಯ ಆರೋಪಿಗಳ ಪತ್ತೆಗೆ ಮೂರು ವಿಶೇಷ ತಂಡ ರಚನೆ ಮಾಡಿದ್ದು,ಓರ್ವನನ್ನ ವಶಕ್ಕೆ ಪಡೆಯಲಾಗಿದೆ. ಅದೇನೇ ಇರಲಿ ಮತ್ತೊಬ್ಬನನ್ನ ಮಚ್ಚಿಡಿದು ನೆತ್ತರು ಹರಿಸಿದ್ದವ ಅದೇ ರೀತಿ ಬೀದಿಯಲ್ಲಿ ಹೆಣವಾಗಿದ್ದು ವಿಪರ್ಯಾಸವೆ ಸರಿ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/38l6m8543Vk?feature=share
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.