ಬೆಂಗಳೂರು: ಕರ್ನಾಟಕ ಪ್ರಾದೇಶಿಕ ಸಾರಿಗೆ ಕಚೇರಿ(RTO)ಗೆ ಪಂಗನಾಮ ಹಾಕಿ ಕೋಟಿ ಕೋಟಿ ರೂ. ವಂಚಿಸಿರುವ ಪ್ರಕರಣ ಸಂಬಂಧ ಬಗೆದಷ್ಟು ಹೊಸ ಹೊಸ ವಿಚಾರಗಳು ಬಹಿರಂಗವಾಗುತ್ತಿದೆ. ಆರ್‌ಟಿಓ ಕೋಟಿ ಕೋಟಿ ವಂಚನೆಯ ಜಾಲದಿಂದ ಹಲವಾರು ಮಹತ್ವದ ಅಂಶಗಳು ಬೆಳಕಿಗೆ ಬಂದಿವೆ.  ನಕಲಿ ಚಲನ್‍ಗಳನ್ನು ಅಪ್ಲೋಡ್ ಮಾಡಿ ವಂಚಿಸಿರುವುದು ತಿಳಿದುಬಂದಿದೆ.


COMMERCIAL BREAK
SCROLL TO CONTINUE READING

ರೋಡ್ ಟ್ಯಾಕ್ಸ್ ಕಟ್ಟದೇ ಸುಮಾರು 50 ಕೋಟಿ ರೂ.ಗೂ ಅಧಿಕ ಹಣವನ್ನು ಅಧಿಕಾರಿಗಳು ನುಂಗಿ ನೀರು ಕುಡಿದಿದ್ದಾರೆ. ಇದೇ ಪ್ರಕರಣ ಸಂಬಂಧ ಮಲ್ಲೇಶ್ವರಂ ಪೊಲೀಸರು ಈ ಹಿಂದೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು. ಚಿತ್ರನಟಿ ರಾಗಿಣಿಯ ಬಾಯ್ ಫ್ರೆಂಡ್ ರವಿಶಂಕರ್ ಹಾಗೂ ಅಜಯ್‍ಗೆ ಖಾಕಿ ಕೋಳ ಹಾಕಿತ್ತು.


ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಹುಟ್ಟುಹಬ್ಬದ ಪ್ರಯುಕ್ತ 'ಯೂನಿಟಿ ಕೇಕ್ ಕಟ್' ಮಾಡಿದ ಸಿದ್ದರಾಮಯ್ಯ


ವಿಚಾರಣೆ ವೇಳೆ ರಾಗಿಣಿಯ ಬಾಯ್‍ಫ್ರೆಂಡ್ ನಿಜ ಬಾಯ್ಬಿಟ್ಟಿದ್ದಾನೆ. ಹಲವು ಆರ್‌ಟಿಓ ಅಧಿಕಾರಿಗಳು ಶಾಮೀಲಾಗಿ ಸರ್ಕಾರದ ಕೋಟ್ಯಂತರ ರೂ. ಹಣವನ್ನು ಗುಳುಂ ಮಾಡಿದ್ದಾರಂತೆ. ಇದೀಗ ಮಲ್ಲೇಶ್ವರಂ ಪೊಲೀಸರು ವಂಚನೆ ಎಸಗಿರುವ ಅಧಿಕಾರಿಗಳ ವಿಚಾರಣೆಗೆ ಮುಂದಾಗಿದ್ದಾರೆ.


ಈ ಸಂಬಂಧ ಕೋರಮಂಗಲ ಠಾಣೆಯಲ್ಲೂ ಹೊಸದೊಂದು ಎಫ್‍ಐಆರ್ ದಾಖಲಿಸಲಾಗಿದೆ. ಡಾಟಾ ಎಂಟ್ರಿ ಆಪರೇಟರ್ ಸಂತೋಷ್‍ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಕೋರಮಂಗಲದ ಆರ್‌ಟಿಓದಲ್ಲಿ ಸಂತೋಷ್‍ ಡಾಟಾ ಎಂಟ್ರಿ ಆಪರೇಟರ್ ಆಗಿದ್ದ. 2015 ರಿಂದ 2019 ರವರೆಗೂ ನಡೆದ ಬ್ರಹ್ಮಾಂಡ ಭ್ರಷ್ಟಾಚಾರ ಸದ್ಯದಲ್ಲೇ ಬಯಲಿಗೆ ಬರಲಿದೆ. ಇದೀಗ ನೂರಾರು ಕೋಟಿ ರೂ. ವಂಚನೆಯ ಜಾಡು ಹಿಡಿದು ಖಾಕಿ ಟೀಂ ತನಿಖೆ ನಡೆಸುತ್ತಿದೆ.  


ಇದನ್ನೂ ಓದಿ: Siddaramosthava: ಸಿದ್ದರಾಮಯ್ಯ ‘ಅಮೃತ ಮಹೋತ್ಸವ’ಕ್ಕೆ ಸಿದ್ಧಗೊಂಡ ಬೃಹತ್ ವೇದಿಕೆ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.