ವರ್ಕ್ ಆಯ್ತು ಸೇಫ್ಟಿ ಐಲ್ಯಾಂಡ್: ಪತ್ತೆಯಾಯ್ತು ಮಾಲ್ಡೀವ್ಸ್ ಪ್ರಜೆಯ ಬ್ಯಾಗ್..!
Safety Island: ಸೋಮವಾರ ಅಶೋಕನಗರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಮಾಲ್ಡೀವ್ಸ್ ಫುಟ್ಬಾಲ್ ತಂಡದ ಫೋಟೋಗ್ರಾಫರ್ ಹಸನ್ ಮೂಸ ಕಳೆದುಕೊಂಡಿದ್ದ ಲ್ಯಾಪ್‌ಟಾಪ್, ಮಾಲ್ಡೀವ್ಸ್ ಕರೆನ್ಸಿ ಮತ್ತಿತರ ವಸ್ತುಗಳಿದ್ದ ಬ್ಯಾಗನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೆಂಗಳೂರು: ಇತ್ತೀಚೆಗೆ ವಿದೇಶಿ ಪ್ರಜೆಯೊಬ್ಬರ ಬ್ಯಾಗನ್ನು ಆಟೋ ಚಾಲಕನೊಬ್ಬ ತೆಗೆದುಕೊಂಡು ಹೋಗಿದ್ದ. ಪೊಲೀಸರು ಅಳವಡಿಸಿರುವ ಸೇಫ್ಟಿ ಐಲ್ಯಾಂಡ್ ಸಹಾಯದಿಂದ ಕೆಲವೇ ಗಂಟೆಗಳಲ್ಲಿ ಕಳೆದುಹೋದ ಬ್ಯಾಗ್ ಪತ್ತೆಯಾಗಿದೆ.
ಸೋಮವಾರ ಅಶೋಕನಗರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಮಾಲ್ಡೀವ್ಸ್ ಫುಟ್ಬಾಲ್ ತಂಡದ ಫೋಟೋಗ್ರಾಫರ್ ಹಸನ್ ಮೂಸ ಕಳೆದುಕೊಂಡಿದ್ದ ಲ್ಯಾಪ್‌ಟಾಪ್, ಮಾಲ್ಡೀವ್ಸ್ ಕರೆನ್ಸಿ ಮತ್ತಿತರ ವಸ್ತುಗಳಿದ್ದ ಬ್ಯಾಗನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: ಕೆಆರ್‌ಪುರಂ ಮೆಟ್ರೋ ಸಂಚಾರ ಆರಂಭಕ್ಕೆ ದಿನಗಣನೆ-ಆಗಸ್ಟ್ ತಿಂಗಳಲ್ಲಿ ವಾಣಿಜ್ಯ ಸಂಚಾರ ಸುಳಿವು
ಸೌತ್ ಏಷ್ಯನ್ ಫುಟ್‌ಬಾಲ್ ಫೆಡರೇಶನ್ ಚಾಂಪಿಯನ್‍ಶಿಪ್‍ಗಾಗಿ ಮಾಲ್ಡೀವ್ಸ್ ತಂಡ ಬೆಂಗಳೂರಿಗೆ ಬಂದಿದೆ. ತಂಡದೊಂದಿಗೆ ಬಂದಿದ್ದ ಫೋಟೋಗ್ರಾಫರ್ ಹಸನ್ ಮೂಸ ನಿನ್ನೆ ಸಂಜೆ ತಮ್ಮ ಇಬ್ಬರು ಸ್ನೇಹಿತರೊಂದಿಗೆ ಆಟೋದಲ್ಲಿ ಎಂ.ಜಿ.ರಸ್ತೆಯ ಗರುಡಾ ಮಾಲ್‍ಗೆ ತೆರಳಿದ್ದರು. ಆಟೋದಿಂದ ಇಳಿಯುವಾಗ ತಮ್ಮ ಲ್ಯಾಪ್‌ಟಾಪ್, ಪಾಸ್‌ಪೋರ್ಟ್, ಕ್ಯಾಮೆರಾ ಉಪಕರಣಗಳು, ಮಾಲ್ಡೀವ್ಸ್ ಕರೆನ್ಸಿಯಿದ್ದ ಬ್ಯಾಗನ್ನು ಮರೆತು ಇಳಿದಿದ್ದರು.
ಬಳಿಕ ಏನು ಮಾಡಬೇಕೆಂದು ಅರಿಯದೇ ಕಂಗಾಲಾಗಿದ್ದ ಹಸನ್‍ಗೆ ಸ್ಥಳೀಯರು ಅಲ್ಲೇ ಇದ್ದ ಸೇಫ್ಟಿ ಐಲ್ಯಾಂಡ್ ಸಹಾಯ ಪಡೆಯುವಂತೆ ಸೂಚಿಸಿದ್ದರು. ಅದರಂತೆ ಸೇಫ್ಟಿ ಐಲ್ಯಾಂಡ್ ಮೂಲಕ ಹಸನ್ ಬೆಂಗಳೂರು ಪೊಲೀಸ್ ನಿಯಂತ್ರಣ ಕೊಠಡಿಯನ್ನು ಸಂಪರ್ಕಿಸಿದ್ದರು. ಅಗತ್ಯ ಮಾಹಿತಿ ಪಡೆದ ನಿಯಂತ್ರಣ ಕೊಠಡಿಯ ಸಿಬ್ಬಂದಿ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ ತಕ್ಷಣ ಅಶೋಕನಗರ ಪೊಲೀಸರಿಗೆ ಮಾಹಿತಿ ರವಾನಿಸಿದ್ದರು. ಕೂಡಲೇ ಎಚ್ಚೆತ್ತ ಅಶೋಕನಗರ ಹೊಯ್ಸಳ ಸಿಬ್ಬಂದಿ ಆಟೋವನ್ನು ಪತ್ತೆಮಾಡಿ ಹಸನ್‍ರ ಬ್ಯಾಗ್ ವಾಪಸ್ ಮಾಡಿದ್ದಾರೆ.
ಇದನ್ನೂ ಓದಿ: ಮಾದಕ ಜಾಲದ ವಿರುದ್ಧ ಪೊಲೀಸರ ಸಮರ: ದಾಖಲೆಯ 117 ಕೋಟಿ ರೂ. ಮೌಲ್ಯದ ಡ್ರಗ್ಸ್ ನಾಶ!
ಈ ಕುರಿತು ಪ್ರತಿಕ್ರಿಯೆ ನೀಡಿರುವ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್, ‘ಸೇಫ್ ಸಿಟಿ ಯೋಜನೆಯ ಭಾಗವಾಗಿ ನಗರದ ವಿವಿಧೆಡೆ 30 ಸೇಫ್ಟಿ ಐಲ್ಯಾಂಡ್ಸ್ ನಿರ್ಮಿಸಲಾಗಿದೆ. ಮುಂದೆ ಹೊಸದಾಗಿ 20 ಐಲ್ಯಾಂಡ್ಸ್ ನಿರ್ಮಾಣವಾಗಲಿವೆ. ನಿನ್ನೆಯ ಘಟನೆ ಸೇಫ್ಟಿ ಐಲ್ಯಾಂಡ್‍ನ ಮೂಲ ಉದ್ದೇಶ ಯಶಸ್ವಿಯಾಗಿದೆ. ಕಳೆದುಕೊಂಡಿದ್ದ ಬ್ಯಾಗನ್ನು ವಿದೇಶಿ ಪ್ರಜೆಗೆ ಹಿಂದಿರುಗಿಸಲಾಗಿದ್ದು, ಆಟೋ ಚಾಲಕ ಉದ್ದೇಶಪೂರ್ವಕವಾಗಿ ಬ್ಯಾಗ್ ಕೊಂಡೊಯ್ದಿದ್ದನಾ ಅಥವಾ ಇಲ್ಲವಾ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತದೆ’ ಎಂದು ತಿಳಿಸಿದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.