ಕೆಆರ್‌ಪುರಂ ಮೆಟ್ರೋ ಸಂಚಾರ ಆರಂಭಕ್ಕೆ ದಿನಗಣನೆ-ಆಗಸ್ಟ್ ತಿಂಗಳಲ್ಲಿ ವಾಣಿಜ್ಯ ಸಂಚಾರ ಸುಳಿವು

KR puram metro service : ಸಿಲಿಕಾನ್ ಸಿಟಿಯ ಟ್ರಾಫಿಕ್‌ ಸಮಸ್ಯೆಗೆ ಮುಕ್ತಿ ನೀಡೋಕೆ ಅಂತ ಬಂದಿದ್ದೇ ನಮ್ಮ ಮೆಟ್ರೋ. ಮೆಟ್ರೋ ಸಂಚಾರ ಆರಂಭವಾದಾಗಿಂದ ಇಲ್ಲಿಯವರೆಗೂ ಮೆಟ್ರೋ ಸೌಲಭ್ಯವನ್ನು ಪಡೆಯುತ್ತಲೇ ಬಂದಿರೋ ಪ್ರಯಾಣಿಕರು, ಇನ್ನೂ ಹೆಚ್ಚಿನ ಕಡೆ ಸಂಪರ್ಕ ನೀಡುವಂತೆ ಮನವಿ ಇಟ್ಟಿದ್ದಾರೆ.  

Written by - Manjunath Hosahalli | Edited by - Savita M B | Last Updated : Jun 26, 2023, 05:38 PM IST
  • ಬೈಯಪ್ಪನಹಳ್ಳಿಗೆ ಸಂಪರ್ಕ ಕಲ್ಪಿಸೋ ಮಾರ್ಗದ ಕೆಲಸ ಬಾಕಿ ಇತ್ತು
  • ಅದೂ ಕೂಡ ಈಗ ಕಂಪ್ಲೀಟ್ ಆಗ್ತಿದೆ
  • ಮೂರು ಪಟ್ಟು ಹೆಚ್ಚಾಗಲಿರೋ ಪ್ರಯಾಣಿಕರ ಸಂಖ್ಯೆ
ಕೆಆರ್‌ಪುರಂ ಮೆಟ್ರೋ ಸಂಚಾರ ಆರಂಭಕ್ಕೆ ದಿನಗಣನೆ-ಆಗಸ್ಟ್ ತಿಂಗಳಲ್ಲಿ ವಾಣಿಜ್ಯ ಸಂಚಾರ ಸುಳಿವು title=

ಬೆಂಗಳೂರು: ಚುನಾವಣೆಗೂ ಮೊದಲು ಪ್ರಧಾನಿ ನರೇಂದ್ರ ಮೋದಿಯವರಿಂದ ವೈಟ್‌ಫೀಲ್ಡ್‌ ಟು ಕೆಆರ್ ಪುರಂ ಮಾರ್ಗಕ್ಕೆ ಚಾಲನೆ ನೀಡಲಾಗಿತ್ತಾದ್ರೂ, ಬೈಯಪ್ಪನಹಳ್ಳಿಗೆ ಸಂಪರ್ಕ ಕಲ್ಪಿಸೋ ಮಾರ್ಗದ ಕೆಲಸ ಬಾಕಿ ಇತ್ತು. ಅದೂ ಕೂಡ ಈಗ ಕಂಪ್ಲೀಟ್ ಆಗ್ತಿದ್ದು, ಇದ್ರಿಂದ ಪ್ರಯಾಣಿಕರ ಸಂಖ್ಯೆ 30 ಸಾವಿರದಿಂದ 1 ಲಕ್ಷಕ್ಕೆ ಏರಿಕೆಯಾಗೋ ಮುನ್ಸೂಚನೆ ಲಭಿಸಿದೆ.

ಎಸ್ಐಟಿ ಕಾರಿಡರ್ ಅಂತಲೇ ಗುರುತಿಸಿಕೊಂಡಿರೋ ವೈಟ್‌ಫೀಲ್ಡ್ ಕೆಆರ್‌ಪುರಂ ಮೆಟ್ರೋ ಮಾರ್ಗ ಕೆಲವೇ ದಿನಗಳಲ್ಲಿ ಬೈಯಪ್ಪನಹಳ್ಳಿ ವರೆಗೂ ಎಕ್ಸ್‌ಟೆಂಡ್ ಆಗಲಿದೆ. ಸ್ಟೇಶನ್ ಹಾಗು ವಯಾಡಕ್ಟ್ ಕೆಲಸ ಈಗಾಗಲೇ ಅಂತಿಮ ಹಂತದಲ್ಲಿದ್ದು, ಬ್ಯಾರಿಕೇಡಿಂಗ್ ಅಳವಡಿಸಿ ದಿನದ 24 ಗಂಟೆಗಳ ಕಾಲವೂ ಕಾಮಗಾರಿ ನಡೆಸಲಾಗ್ತಿದೆ. ಟ್ರಾಕ್ ಕೆಲಸವೂ ಪೂರ್ಣಗೊಂಡಿದ್ದು, ರೈಲು ಸಂಚಾರ ಕೂಡ ಸಣ್ಣ ಪ್ರಮಾಣದಲ್ಲಿ ಈಗ ಆರಂಭವಾಗಿದೆ.

ಈ ಮಾರ್ಗದ ಸಿಗ್ನಲಿಂಗ್ ಕೆಲಸ ನಡೆಯುತ್ತಿದ್ದು ಜುಲೈ ಅಂತ್ಯದ ವೇಳೆಗೆ ಪ್ರಾಯೋಗಿಕ ಸಂಚಾರ ಆರಂಭವಾಗಲಿದೆ. ಆಗಸ್ಟ್‌ 1ನೇ ವಾರದಲ್ಲಿ ಸಿಎಂಆರ್‌ಸಿ ಪರಿಶೀಲನೆ ನಡೆಸಲಿದ್ದು, ಆಗಸ್ಟೇ 2ನೇ ವಾರದ ವೇಳೆಗೆ ಪ್ರಯಾಣಿಕರಿಗೆ ಓಪನ್ ಆಗಲಿದೆ ಎಂದು ಬಿಎಂಆರ್ ಸಿ ಎಲ್ ಎಂಡಿ ತಿಳಿಸಿದ್ದಾರೆ.

ಇದನ್ನೂ ಓದಿ-ಶಕ್ತಿ ಯೋಜನೆ ಹೊಡೆತ: ಆಟೋ ಮಾರಾಟಕ್ಕೆ ನಿಂತ ಆಟೋ ಚಾಲಕರು

ಮೂರು ಪಟ್ಟು ಹೆಚ್ಚಾಗಲಿರೋ ಪ್ರಯಾಣಿಕರ ಸಂಖ್ಯೆ
ಬೈಯಪ್ಪನಹಳ್ಳಿ ಮೆಟ್ರೋ ಕನೆಕ್ಟಿವಿಟಿ ಇಲ್ಲದಿರೋದ್ರಿಂದ ಬಿಎಂಆರ್‌ಸಿಎಲ್, ಬಿಎಂಟಿಸಿ ಸಹಯೋಗದೊಂದಿಗೆ ಫೀಡರ್ ಬಸ್ ಸೌಲಭ್ಯ ನೀಡ್ತಿತ್ತು. ಹೀಗಿರೋವಾಗಲೇ ವೈಟ್‌ಫೀಲ್ಡ್‌ - ಕೆಆರ್‌ಪುರಂ ಮಾರ್ಗದಲ್ಲಿ ಪ್ರತಿನಿತ್ಯ 30ರಿಂದ 33 ಸಾವಿರ ಪ್ರಯಾಣಿಕರು ಪ್ರತಿನಿತ್ಯ ಮೆಟ್ರೋದಲ್ಲಿ ಸಂಚರಿಸ್ತಿದ್ದಾರೆ. ಈ ಸಣ್ಣ ಪ್ಯಾಚ್‌ಅಲ್ಲಿ ಕನೆಕ್ಟಿವಿಟಿ ಆರಂಭವಾದ ನಂತರ ಪ್ರತಿನಿತ್ಯ 1 ಲಕ್ಷ ಪ್ರಯಾಣಿಕರು ಈ ಸೌಲಭ್ಯ ಬಳಸೋ ಮುನ್ಸೂಚನೆ ಈಗಾಗಲೇ ಕಂಡುಬರ್ತಿದೆ. ಅಲ್ಲಿಗೆ ಪ್ರಯಾಣಿಕರ ಸಂಖ್ಯೆ ಈಗಿರೋದಕ್ಕಿಂತ 3 ಪಟ್ಟು ಹೆಚ್ಚಳವಾಗೋ ಸುಲಭ ನಿರೀಕ್ಷೆ ಕಂಡುಬರ್ತಿದೆ.

9 ಲಕ್ಷದಿಂದ 30 ಲಕ್ಷಕ್ಕೆ ಏರಿಕೆಯಾಗೋ ಲಕ್ಷಣಗಳು ಗೋಚರ..!
ಈ ಮಾರ್ಗದಲ್ಲಿನ ಮೆಟ್ರೋ ಪ್ರಯಾಣಿಕರ ಆ್ಯವರೇಜ್ ಟಿಕೆಟ್ ದರ ಸುಮಾರು 30 ರೂಪಾಯಿ ಇದೆ. ಸದ್ಯ ಕೆಆರ್‌ಪುರಂ ಹಾಗು ವೈಟ್‌ಫೀಲ್ಡ್‌ ಮಾರ್ಗದಲ್ಲಿ 30 ಸಾವಿರ ಪ್ರಯಾಣಿಕರಿಂದ ಸುಮಾರು 9 ಲಕ್ಷ ರೂಪಾಯಿ ಕಲೆಕ್ಷನ್ ಆಗುತ್ತಿದೆ. ಅಂದು ಕೊಂಡಂತೆ 1 ಲಕ್ಷ ಪ್ರಯಾಣಿಕರು ಈ ಸೇವೆಯನ್ನು ಆಗಸ್ಟ್‌ನಿಂದ ಪಡೆಯಲು ಮುಂದಾದ್ರೆ ನಮ್ಮ ಮೆಟ್ರೋ ಪ್ರತಿನಿತ್ಯ ಇದೊಂದೇ ಮಾರ್ಗದಿಂದ ಸುಮಾರು 20 ಲಕ್ಷ ರೂಪಾಯಿ ಆದಾಯ ಹೆಚ್ಚಿಸಿಕೊಳ್ಳಲಿದೆ. ಅದೇನೇ ಇರಲಿ, ಕಮಿಷನರ್ ಫಾರ್ ಮೆಟ್ರೋ ರೈಲ್ವೇ ಸೇಫ್ಟಿ ವತಿಯಿಂದ ಆದಷ್ಟು ಬೇಗ ಈ ಮಾರ್ಗದ ಪರಿಶೀಲನೆ ನಡೆದು, ಜನರಿಗೆ ಮತ್ತಷ್ಟು ವೇಗದಲ್ಲಿ ಈ ಸೌಲಭ್ಯ ಸಿಗುವಂತಾಗಲಿ.

ಇದನ್ನೂ ಓದಿ-ಶೀಲ ಶಂಕಿಸಿ ಹೆಂಡತಿಯ ಗುಪ್ತಾಂಗಕ್ಕೆ ಇರಿದ ಪಾಪಿ ಗಂಡ..!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News