ಬರೇಲಿ: ಕಳೆದ 14 ತಿಂಗಳಲ್ಲಿ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಗ್ರಾಮಾಂತರ ಪ್ರದೇಶದಲ್ಲಿ ಒಂದೇ ವಯಸ್ಸಿನ ಒಂಬತ್ತು ಮಹಿಳೆಯರನ್ನು ಒಂದೇ ರೀತಿಯಲ್ಲಿ ಹತ್ಯೆ ಮಾಡಲಾಗಿದೆ. ಮೃತ ಮಹಿಳೆಯರನ್ನೆಲ್ಲ ಅವರು ಉಟ್ಟಿದ್ದ ಸೀರೆಯನ್ನು ಕತ್ತಿಗೆ ಬಿಗದು ಕೊಂದಿರುವುದು ಪೊಲೀಸರ ತನಿಖೆ ವೇಳೆ ಬಯಲಾಗಿದೆ.


COMMERCIAL BREAK
SCROLL TO CONTINUE READING

ಇದು ಸರಣಿ ಹಂತಕನ ಕೃತ್ಯವಾಗಿರುವುದರಿಂದ ಅಪರಿಚಿತ ದುಷ್ಕರ್ಮಿಗಾಗಿ ಶೋಧ ಕಾರ್ಯ ಆರಂಭಿಸಲಾಗಿದೆ. ಬರೇಲಿ ಜಿಲ್ಲೆಯ ಶಾಹಿ, ಶೀಶ್‌ಗಢ ಮತ್ತು ಶೇರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಕೊಲೆಗಳು ನಡೆದಿವೆ. ಕಳೆದ ವರ್ಷ 40 - 65 ವರ್ಷದೊಳಗಿನ ಎಂಟು ಮಹಿಳೆಯರನ್ನು ಹತ್ಯೆ ಮಾಡಲಾಗಿತ್ತು. ಅವರ ಮೃತದೇಹಗಳು ಕಬ್ಬಿನ ಗದ್ದೆಯಲ್ಲಿ ಪತ್ತೆಯಾಗಿವೆ. ಉಟ್ಟಿದ್ದ ಸೀರೆಯಿಂದಲೇ ಕತ್ತು ಹಿಸುಕಿ ಕೊಲೆ ಮಾಡಿರುವುದು ಗಮನಾರ್ಹ. ಆದರೆ ಯಾರ ಮೇಲೆಯೂ ಅತ್ಯಾಚಾರ ನಡೆದಿರುವ ಬಗ್ಗೆ ಯಾವುದೇ ಪುರಾವೆ ಇಲ್ಲ. ಕಳೆದ ವರ್ಷ ಜೂನ್‌ನಲ್ಲಿ ಮೂರು, ಜುಲೈ, ಆಗಸ್ಟ್ ಮತ್ತು ಅಕ್ಟೋಬರ್‌ನಲ್ಲಿ ತಲಾ ಒಂದು ಮತ್ತು ನವೆಂಬರ್‌ನಲ್ಲಿ ಎರಡು ಕೊಲೆಗಳು ನಡೆದಿದ್ದವು.


ಇದನ್ನೂ ಓದಿ: ನೀಟ್-ಪಿಜಿ ಪರೀಕ್ಷೆಯನ್ನು ಮುಂದೂಡಲು ನಿರಾಕರಿಸಿದ ಸುಪ್ರೀಂಕೋರ್ಟ್


ಆಯಾ ಗ್ರಾಮಗಳ 25 ಕಿ.ಮೀ ವ್ಯಾಪ್ತಿಯಲ್ಲಿ ಈ ಕೊಲೆಗಳು ನಡೆಯುತ್ತಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಮೃತರೆಲ್ಲರೂ 45-55 ವರ್ಷ ವಯಸ್ಸಿನವರು. ಎಂಟನೇ ಕೊಲೆಯ ನಂತರ 14 ಪೊಲೀಸ್‌ ತಂಡಗಳು ಕೊಲೆಗಾರನ ಹುಡುಕಾಟವನ್ನು ಪ್ರಾರಂಭಿಸಿದವು. 


ಇವರೆಲ್ಲರೂ ಮಫ್ತಿಯಲ್ಲಿ ಗಸ್ತು ತಿರುಗುತ್ತಿದ್ದರು. ನಂತರ ನಾಲ್ಕು ವರ್ಷಗಳ ಕಾಲ ಯಾವುದೇ ಕೊಲೆಗಳು ನಡೆದಿಲ್ಲ. ಸ್ಥಳೀಯರು ಹಾಗೂ ಪೊಲೀಸರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ಈ ವರ್ಷದ ಆಗಸ್ಟ್‌ನಲ್ಲಿ ಮತ್ತೆ ಇದೇ ರೀತಿಯಲ್ಲಿ ಒಂಬತ್ತನೇ ಕೊಲೆ ನಡೆದಿದೆ. 7 ತಿಂಗಳ ಅಂತರದ ನಂತರ 45 ವರ್ಷದ ಅನಿತಾ ಎಂಬ ಮಹಿಳೆಯನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದೆ. ಜುಲೈನಲ್ಲಿ ಆಕೆಯ ಶವ ಕಬ್ಬಿನ ಗದ್ದೆಯಲ್ಲಿ ಪತ್ತೆಯಾಗಿತ್ತು.


ಶೇರ್‌ಗಢ್‌ನ ಭುಜಿಯಾ ಜಾಗೀರ್ ಗ್ರಾಮದ ಅನಿತಾ ಫತೇಗಂಜ್‌ನ ಖಿರ್ಕಾ ಗ್ರಾಮದಲ್ಲಿರುವ ತನ್ನ ತಾಯಿಯ ಮನೆಗೆ ಹೋಗಿದ್ದಳು. ಜುಲೈ 2 ರಂದು ಮನೆಯಿಂದ ಹೊರಟು ಹಣ ಡ್ರಾ ಮಾಡಲು ಬ್ಯಾಂಕ್ ಗೆ ಹೋಗಿದ್ದಳು. ಅದರ ನಂತರ ಅವಳು ನಾಪತ್ತೆಯಾಗಿದ್ದಳು. ಅನಿರೀಕ್ಷಿತವಾಗಿ ಕಬ್ಬಿನ ತೋಟದಲ್ಲಿ ಆಕೆಯ ಶವ ಪತ್ತೆಯಾಗಿದ್ದು, ಸೀರೆಯಿಂದ ಕತ್ತು ಹಿಸುಕಿ ಕೊಲೆ ಮಾಡಿರುವುದು ಮರಣೋತ್ತರ ಪರೀಕ್ಷೆಯಲ್ಲಿ ಬೆಳಕಿಗೆ ಬಂದಿದೆ. 


ಇದನ್ನೂ ಓದಿ: ಯುವತಿಯ ಸ್ಕರ್ಟ್‌ ಮೇಲೆತ್ತಿ ತೊಡೆಗೆ ಮುತ್ತಿಟ್ಟ ಮಂಗ! ಕಪಿರಾಯನ ಕುಚೇಷ್ಟೆ ವಿಡಿಯೋ


ಕಳೆದ ವರ್ಷ ನಡೆದ ಕೊಲೆಗಳ ಹಿಂದೆ ಸರಣಿ ಹಂತಕರ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ. ಜುಲೈನಲ್ಲಿ ನಡೆದ ಇತ್ತೀಚಿನ ಕೊಲೆ ಆ ಅನುಮಾನಗಳನ್ನು ಬಲಪಡಿಸುತ್ತದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅನುರಾಗ್ ಆರ್ಯ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಮನುಷ್ ಪರೀಕ್ ಹೇಳಿದ್ದಾರೆ. 


ಹತ್ಯೆ ನಡೆದ ಪ್ರದೇಶಗಳಲ್ಲಿನ 90 ಗ್ರಾಮಗಳ ಹಲವರ ಜತೆ ಮಾತನಾಡಿದ ಪೊಲೀಸರು, ಮೂವರು ಶಂಕಿತರ ಕಾಲ್ಪನಿಕ ಚಿತ್ರಗಳನ್ನು ಬಿಡುಗಡೆ ಮಾಡಿದ್ದಾರೆ. ಯಾರಾದರೂ ಅವರನ್ನು ಕಂಡರೆ, ಬರೇಲಿಯಲ್ಲಿರುವ ಪೊಲೀಸ್ ವರಿಷ್ಠಾಧಿಕಾರಿ (ದಕ್ಷಿಣ) ಕಚೇರಿಗೆ ದೂರವಾಣಿ ಸಂಖ್ಯೆ 9554402549, 9258256969 ಗೆ ಕರೆ ಮಾಡಲು ಸೂಚಿಸಲಾಗಿದೆ. ಈ ಸರಣಿ ಕೊಲೆಗಳ ಹಿಂದೆ ಸರಣಿ ಹಂತಕನ ಕೈವಾಡವಿರಬಹುದು ಎಂದು ಯುಪಿ ಡಿಜಿಪಿ ಪ್ರಶಾಂತ್ ಕುಮಾರ್ ಹೇಳಿದ್ದಾರೆ. ಪ್ರಕರಣವನ್ನು ಭೇದಿಸಲು ಎಲ್ಲ ರೀತಿಯಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.