ತೀವ್ರ ಹೃದಯಾಘಾತದಿಂದ ವಾಕಿಂಗ್ ಮಾಡುವಾಗಲೇ ಯುವ ಕುಸ್ತಿಪಟು ಸಾವು!
ತೀವ್ರ ಹೃದಯಾಘಾತದಿಂದ ಯುವ ಕುಸ್ತಿಪಟುವೊಬ್ಬರು ಸಾವನ್ನಪ್ಪಿರುವ ಘಟನೆ ಧಾರವಾಡದಲ್ಲಿ ನಡೆದಿದೆ.
ಧಾರವಾಡ: ತೀವ್ರ ಹೃದಯಾಘಾತದಿಂದ ಯುವ ಕುಸ್ತಿಪಟುವೊಬ್ಬರು ಸಾವನ್ನಪ್ಪಿರುವ ಘಟನೆ ಧಾರವಾಡದಲ್ಲಿ ನಡೆದಿದೆ. ಧಾರವಾಡ ತಾಲೂಕಿನ ದೊಡವಾಡ ಗ್ರಾಮದ ಪೈಲ್ವಾನ್ ಸಂಗಪ್ಪ ಬಳಿಗೇರ್(28) ಮೃತ ವ್ಯಕ್ತಿ.
ಬುಧವಾರ ಬೆಳಗ್ಗೆ ವಾಕಿಂಗ್‍ಗೆ ತೆರಳಿ ಮನೆಗೆ ಹೋಗುವಾಗ ಈ ಘಟನೆ ನಡೆದಿದೆ. ಧಾರವಾಡದ ಮದಿಹಾಳದ ಬಳಿ ತನ್ನ ಗೆಳೆಯನ ಜೊತೆಗೆ ಸಂಗಪ್ಪ ನಡೆದುಕೊಂಡು ಹೋಗುತ್ತಿದ್ದ. ಈ ವೇಳೆ ಹಠಾತ್ ಹೃದಯಾಘಾತವಾಗಿದ್ದು, ಕುಸಿದುಬಿದ್ದು ಅವರು ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ಬಾಲ್ಯ ವಿವಾಹ: ಮದುವೆ ಮಾಡಿಕೊಂಡ ಕಂಡಕ್ಟರ್, ಮಾಡಿಸಿದ ಅರ್ಚಕರಿಗೆ ಕಠಿಣ ಶಿಕ್ಷೆ
ಗೆಳೆಯನ ಜೊತೆ ವಾಕಿಂಗ್ ಮಾಡುವಾಗಲೇ ಸಂಗಪ್ಪನ ಪ್ರಾಣ ಪಕ್ಷಿ ಹಾರಿ ಹೋಗಿದೆ. ಇದ್ದಕ್ಕಿದ್ದಂತೆಯೇ ಹೃದಯಾಘಾತ ಆಗಿದ್ದರಿಂದ ಸಂಗಪ್ಪ ನೆಲಕ್ಕೆ ಕುಸಿದು ಬಿದ್ದಿದ್ದಾನೆ. ಕೂಡಲೇ ಜೊತೆಗಿದ್ದ ಗೆಳೆಯ ಆತನನ್ನು ಮೇಲಕ್ಕೆತ್ತಲು ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ.
ವಾಕಿಂಗ್ ಮಾಡಿ ಮನೆಗೆ ವಾಪಸ್ ಬರುತ್ತಿದ್ದಾಗಲೇ ಕುಸ್ತಿಪಟು ಸಂಗಪ್ಪನಿಗೆ ಹೃದಯಾಘಾತವಾಗಿದ್ದು, ಈ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮೃತನ ಅಂತ್ಯಕ್ರಿಯೆ ದೊಡವಾಡ ಗ್ರಾಮದಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಪಿಎಫ್ ಐ ಹೆಸರಲ್ಲಿ ಪ್ರತಿಭಟನೆ ನಡೆಸಿದರೆ ಸೂಕ್ತ ಕ್ರಮ : ಡಿಜಿ ಪ್ರವೀಣ್ ಸೂದ್
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.