ಪಿಎಫ್ ಐ ಹೆಸರಲ್ಲಿ ಪ್ರತಿಭಟನೆ ನಡೆಸಿದರೆ ಸೂಕ್ತ ಕ್ರಮ : ಡಿಜಿ ಪ್ರವೀಣ್ ಸೂದ್

ಪಿಎಫ್ ಐ ಹೆಸರಲ್ಲಿ  ಯಾರಾದರೂ ಪ್ರತಿಭಟನೆ ನಡೆಸಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಎಚ್ಚರಿಕೆ ನೀಡಿದ್ದಾರೆ. 

Written by - VISHWANATH HARIHARA | Edited by - Ranjitha R K | Last Updated : Sep 28, 2022, 01:04 PM IST
  • ನಿಷೇಧಿತ ಸಂಘಟನೆ ಪರ ಪ್ರತಿಭಟಿಸಿದರೆ ಸೂಕ್ತ ಕ್ರಮ
  • ಪಿ.ಎಫ್.ಐ ಪರ ಪ್ರತಿಭಟಿಸಿದರೆ ಕ್ರಮದ ಎಚ್ಚರಿಕೆ ನೀಡಿದ ಪೋಲಿಸ್ ಇಲಾಖೆ
  • ರಾಜ್ಯ ಪೊಲೀಸರಿಂದ ಮುನ್ನೆಚ್ಚರಿಕಾ ಕ್ರಮ
ಪಿಎಫ್ ಐ ಹೆಸರಲ್ಲಿ ಪ್ರತಿಭಟನೆ ನಡೆಸಿದರೆ ಸೂಕ್ತ ಕ್ರಮ : ಡಿಜಿ ಪ್ರವೀಣ್ ಸೂದ್  title=
praveen sood

ಬೆಂಗಳೂರು : ಪಿಎಫ್ ಐ ಹೆಸರಲ್ಲಿ ಯಾರಾದರೂ ಪ್ರತಿಭಟನೆ ನಡೆಸಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಎಚ್ಚರಿಕೆ ನೀಡಿದ್ದಾರೆ. ಇದೇ ತಿಂಗಳು 22 ರಂದು ಎನ್.ಐ.ಎ ರಾಜ್ಯದ ಹಲವು ಕಡೆಗಳಲ್ಲಿ ದಾಳಿ ನಡೆಸಿತ್ತು. ಖಚಿತ ಮಾಹಿತಿ ಮೇರೆಗೆ ಪ್ರಿವೆಂಟಿವ್ ಡಿಟೆಂಷನ್ ಮೇಲೆ 101 ಜನರನ್ನ  ವಶಕ್ಕೆ ಪಡೆಯಲಾಗಿದೆ. ಎನ್.ಐ.ಎ  ಏಳು ಮಂದಿ ಆರೋಪಿಗಳನ್ನ ಹಾಗೂ ನಮ್ಮ ಪೊಲೀಸರು 15 ಮಂದಿಯನ್ನು ಬಂಧಿಸಿದ್ದಾರೆ ಎಂದು ಪ್ರವೀಣ್ ಸೂದ್  ತಿಳಿಸಿದ್ದಾರೆ. 

ಬಂಧಿತರ ವಿಚಾರಣೆ ವೇಳೆ ಕೆಲ ವಸ್ತುಗಳು ಸಿಕ್ಕಿವೆ. ನಿನ್ನೆ ರಾತ್ರಿ ಕೇಂದ್ರ ಸರ್ಕಾರ, ಪಿ.ಎಫ್.ಐ ಸಂಘಟನೆಯನ್ನು UAPA ಕಾಯ್ದೆ ಅಡಿ ಬ್ಯಾನ್ ಮಾಡಿ ಆದೇಶ ಹೊರಡಿಸಿದೆ. ಈಗಾಗಲೇ ವಶಕ್ಕೆ ಪಡೆದಿರುವವರನ್ನು   ತಹಶೀಲ್ದಾರ್ ಮುಂದೆ ಹಾಜರುಪಡಿಸಿದ್ದೇವೆ. ಡಿಸ್ಟಿಕ್ ಮ್ಯಾಜಿಸ್ಟ್ರೇಟ್ ಮತ್ತು ಕಮಿಷನರ್ ವ್ಯಾಪ್ತಿಯಲ್ಲಿ  ಸಂಘಟನೆ ನಿಷೇಧದ ಬಗ್ಗೆ ಕ್ರಮ ಜರುಗಿಸಲಾಗುವುದು. ಪಿ.ಎಫ್.ಐ ಬ್ಯಾನ್ ಬಗ್ಗೆ ನಮಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು  ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ತಿಳಿಸಿದ್ದಾರೆ. 

ಇದನ್ನೂ ಓದಿ : ಪಿಎಫ್ಐ ನಿಷೇಧ: ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ ಸಚಿವ ನಿರಾಣಿ

ಪಿ.ಎಫ್.ಐ ಸೇರಿ ಬ್ಯಾನ್ ಆಗಿರುವ ಸಂಘಟನೆ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಬ್ಯಾನ್ ಆಗಿರುವ  ಸಂಘಟನೆ  ಪರವಾಗಿ ಯಾರಾದರೂ ಪ್ರತಿಭಟನೆ ಮಾಡಿದರೆ  ದುಷ್ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಪ್ರವೀಣ್ ಸೂದ್ ಎಚ್ಚರಿಕೆ ನೀಡಿದ್ದಾರೆ. ನಿಷೇಧಿತ ಸಂಘಟನೆ ಪರವಾಗಿ ಪ್ರತಿಭಟನೆ ನಡೆಸಿದರೆ ಅಂಥವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ. ಸದ್ಯ ರಾಜ್ಯದಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಕಳೆದೆರಡು ದಿನಗಳಿಂದ ರಾಜ್ಯದಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದಿದ್ದಾರೆ.

ಇದನ್ನೂ ಓದಿ : ಅಪಘಾತದಲ್ಲಿ ಮೆದುಳು ನಿಷ್ಕ್ರಿಯ: ಪುತ್ರನ ಅಂಗಾಂಗ ದಾನ ಮಾಡಲು ಮುಂದಾದ ಪೋಷಕರು..

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News