ಬೆಳಗಾವಿ: ಅವರಿಬ್ಬರದ್ದು ೧೧ ವರ್ಷಗಳ ದಾಂಪತ್ಯ ಮೊದ ಮೊದಲು ಹೆಂಡತಿಯನ್ನ ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದ ಗಂಡ ಏಕಾಏಕಿ ಕುಡಿತದ ದಾಸನಾಗಿಬಿಟ್ಟಿದ್ದ ಇದರಿಂದ ನಿತ್ಯ ಆ ಸಂಸಾರದಲ್ಲಿ ಕಲಹ ಶುರುವಿತ್ತು ಗಂಡ ಹೆಂಡತಿಯ ಜಗಳ ಉಂಡು ಮಲಗೋತನಕ ಎನ್ನುವ ಮಾತನ್ನೂ ಮೀರಿ ಆ ಕುಟುಂಬದಲ್ಲಿ ಘೋರ ಘಟನೆಯೊಂದು ನಡೆದು ಹೋಗಿದೆ.ಚೆನ್ನಾಗಿದ್ದ ಸಂಸಾರದಲ್ಲಿ ಬಿರುಗಾಳಿ ಎದ್ದಿದ್ದೆ ಅಷ್ಟಕ್ಕೂ ಆಗಿದ್ದೇನು ಅಂತೀರಾ? ಈ ಸ್ಟೋರಿ ನೋಡಿ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ವಿಶ್ವ ಟೆಸ್ಟ್ ಚಾಂಪಿಯನ್​ ಶಿಪ್‌ ಫೈನಲ್ ಪಂದ್ಯ


ರಕ್ತ ಸಿಕ್ತವಾಗಿರೋ ಹಾಸಿಗೆಗಳು ಮನೆಯ ಒಳಗೆ ಶವವಾಗಿರೋ ಸತಿ ಪತಿಗಳು..ಹೊರಗೆ‌ ಕುಟುಂಬಸ್ಥರ ಆಕ್ರಂದಣ..ಈ ದೃಶ್ಯಗಳು ಕಂಡು ಬಂದಿದ್ದು ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಚಿಂಚಲಿಯ ಉಪ್ಪರವಾಡಿಯಲ್ಲಿ..ಹೀಗೆ ಹೆಣವಾಗಿರೋದು ಧರೆಪ್ಪ ಖೋತ ಹಾಗೂ ಆತನ ಪತ್ನಿ ಉಷಾ ಖೋತ. ಮದುವೆಯಾಗಿ ೧೧ ವರ್ಷವಾಗಿತ್ತು, ಈ ಇಬ್ಬರು ದಂಪತಿಗಳ ಸುಂದರ ಸಂಸಾರಕ್ಕೆ ಸಾಕ್ಷಿ ಎಂಬಂತೆ ಆರಾಧ್ಯ ಹಾಗೂ ಆರೋಷಿ ಎಂಬ ಇಬ್ಬರು ಮಕ್ಕಳೂ ಸಹ ಇದ್ದರು. ಮೊದ ಮೊದಲು ಎಲ್ಲವೂ ಚೆನ್ನಾಗಿಯೇ ಇದ್ದ ಕುಟುಂಬದಲ್ಲಿ ಧರೆಪ್ಪನ ಕುಡಿತದ ಚಟ ಬಿರುಗಾಳಿ ಎಬ್ಬಸಿತ್ತು‌‌.ಈತನ ಕುಡಿತದ ಚಟದಿಂದ ಬೇಸತ್ತು ಹೋಗಿದ್ದ ಪತ್ನಿ ಉಷಾ ಸಾಕಷ್ಟು ಬಾರಿ ಇದೆ ವಿಚಾರವಾಗಿ ಧರೆಪ್ಪ ಜತೆಗೆ ಜಗಳ ಮಾಡಿದ್ದಳು.ಆದರೆ ನಿನ್ನೆ ಆ ಜಗಳ ತಾರಕ್ಕೇರಿ ಹೆಂಡತಿಯನ್ನು ಕೊಲೆ ಮಾಡುವ ಹಂತ ತಲುಪಿದೆ.


ಇದನ್ನೂ ಓದಿ: Loksabha Election 2024: ಬಿಜೆಪಿ ಹಾಲಿ ಸಂಸದರಿಗೆ ಟಿಕೆಟ್ ತಪ್ಪಿದರೆ "ಕೈ" ಗಾಳ


ನಿನ್ನೆ ಕಂಠಪೂರ್ತಿ ಕುಡಿದು ಬಂದಿದ್ದ ಧರೆಪ್ಪ ‌ಜತೆಗೆ ಎಂದಿನಂತೆಯೇ ಪತ್ನಿ ಉಷಾ ಜಗಳ ಪ್ರಾರಂಭ ಮಾಡಿದ್ದಾಳೆ.ಮನೆಯಲ್ಲಿ 8 ವರ್ಷದ ಬಾಲಕಿ ಆರಾಧ್ಯಾ ಇದಕ್ಕೆ ಸಾಕ್ಷಿಯಾಗಿದ್ದಾಳೆ.ಜಗಳ ಮುಗಿಸಿ ಮಗುವನ್ನು ಕರೆದುಕೊಂಡು ಮಲಗಿದ್ದ ಉಷಾಳ ಕುತ್ತಿಗೆಗೆ ಚಾಕುವಿನಿಂದ ಇರಿದು ಕೊಲೆ‌ ಮಾಡಿದ ಧರೆಪ್ಪ ಕೊಲೆ ಮಾಡಿದ ಪಾಪಪ್ರಜ್ಞೆಯಿಂದ ತಾನೂ ಸಹ ಅದೇ ಮನೆಯಲ್ಲಿಯೇ ನೇಣಿಗೆ ಶರಣಾಗಿದ್ದಾನೆ.ಏನೂ ಅರಿಯದ ಬಾಲಕಿ ಮನೆಯಲ್ಲಿ ಅಪ್ಪ ಅಮ್ಮನ ಜತೆಗೆ ಮಲಗಿದ್ದಾಗಲೇ ಈ ಘಟನೆ ನಡೆದಿದ್ದು ಎಂಥವರ ಕರುಳು ಕೂಡ ಚುರುಕ್ ಎನಿಸುವಂತೆ ಮಾಡಿದೆ.


ಒಟ್ಟಿನಲ್ಲಿ ಸುಂದರ ಸಂಸಾರ ಚೆನ್ನಾಗಿಯೇ ನಡೆದಿತ್ತು.‌ಒಂದು ಎಕರೆ ಪ್ರದೇಶದಲ್ಲಿ ಧರೆಪ್ಪ ರೇಷ್ಮೆ‌ ಬೇಸಾಯ ಮಾಡಿಕೊಂಡು ಚೆನ್ನಾಗಿಯೇ ಇದ್ದ ಆದರೆ ಕುಡಿತದ ಚಟಕ್ಕೆ ಬಿದ್ದ ಧರೆಪ್ಪ ಮಾಡಬಾರದ ಕೆಲಸ ಮಾಡಿ ತಾನೂ ಸಹ ಮರಳಿ ಬಾರದೂರಿಗೆ ತೆರಳಿ ಹೆಂಡತಿಯನ್ನೂ ಸಹ ಅದೇ ಲೋಕಕ್ಕೆ ಕಳಿಸಿದ್ದಾನೆ‌. ಆದರೆ ಈ ಗಂಡ ಹೆಂಡತಿಯ ಜಗಳದ‌ ಮಧ್ಯೆ  ಆ ಇಬ್ಬರು ಮಕ್ಕಳು ತಬ್ಬಲಿಯಾಗಿದ್ದು ಮಾತ್ರ ನಿಜಕ್ಕೂ ದುರಂತವೇ ಸರಿ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.