Shooting in South Africa: ದಕ್ಷಿಣ ಆಫ್ರಿಕಾದ ಸೊವೆಟೊ ಟೌನ್‌ಶಿಪ್‌ನ ಜೋಹಾನ್ಸ್‌ಬರ್ಗ್ ಬಳಿಯ ಬಾರ್‌ನಲ್ಲಿ ಗುಂಡಿನ ದಾಳಿ ನಡೆದಿದೆ. ಈ ಗುಂಡಿನ ದಾಳಿಯಲ್ಲಿ 14 ಮಂದಿ ಸಾವನ್ನಪ್ಪಿರುವ ಸುದ್ದಿ ಮುನ್ನೆಲೆಗೆ ಬಂದಿದೆ. ನಿನ್ನೆ ರಾತ್ರಿ 12.30ರ ಸುಮಾರಿಗೆ ಗುಂಡಿನ ದಾಳಿ ನಡೆದಿದೆ ಎಂದು ಪೊಲೀಸ್ ಲೆಫ್ಟಿನೆಂಟ್ ಇಲ್ಯಾಸ್ ಮಾವೆಲಾ ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

12 ಮಂದಿ ಸ್ಥಳದಲ್ಲೇ ಸಾವು:


ನಾವು ಸ್ಥಳಕ್ಕೆ ಬರುವಷ್ಟರಲ್ಲಿ 12 ಮಂದಿ ಸಾವನ್ನಪ್ಪಿದ್ದರು ಎಂದು ಪೊಲೀಸ್ ಲೆಫ್ಟಿನೆಂಟ್ ತಿಳಿಸಿದ್ದಾರೆ. ಇತರ 11 ಮಂದಿ ಗಾಯಗೊಂಡವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ಇಬ್ಬರು ನಂತರ ಸಾವನ್ನಪ್ಪಿದರು, ಸಾವಿನ ಸಂಖ್ಯೆ 14 ಕ್ಕೆ ಏರಿದೆ ಎಂದು ಮಾವೆಲಾ ಹೇಳಿದರು.


ಇದನ್ನೂ ಓದಿ: ವೈದ್ಯಲೋಕಕ್ಕೆ ಅಚ್ಚರಿ: ಅರಿವಿಲ್ಲದೇ 20 ವರ್ಷ ಮುಟ್ಟಿನ ನೋವು ಅನುಭವಿಸಿದ ಪುರುಷ!


ಗುಂಡು ಹಾರಿಸಿ ಪರಾರಿಯಾದ ದಾಳಿಕೋರರು: 


ಮಾಹಿತಿಯ ಪ್ರಕಾರ, ದಾಳಿ ನಡೆದ ಬಾರ್ ವಾಟೊದ ಒರ್ಲಾಂಡೋ ಜಿಲ್ಲೆಯಲ್ಲಿದೆ. ಇದು ಜೋಹಾನ್ಸ್‌ಬರ್ಗ್‌ನ ಅತಿದೊಡ್ಡ ವಸಾಹತು. ದಾಳಿಕೋರ ಮಧ್ಯರಾತ್ರಿ ಬಾರ್‌ಗೆ ನುಗ್ಗಿ ಮನಬಂದಂತೆ ಗುಂಡು ಹಾರಿಸಲು ಆರಂಭಿಸಿದ್ದಾನೆ. ಗುಂಡು ಹಾರಿಸಿದ ನಂತರ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಹೇಳಲಾಗುತ್ತಿದೆ. ದಾಳಿಯಲ್ಲಿ ಗಾಯಗೊಂಡ 9 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.


ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ:


ಪೊಲೀಸ್ ಲೆಫ್ಟಿನೆಂಟ್ ಇಲ್ಯಾಸ್ ಮಾವೆಲಾ ಮಾತನಾಡಿ, ''ಪ್ರಾಥಮಿಕ ತನಿಖೆಯಿಂದ ಬಾರ್‌ನಲ್ಲಿ ಜನರು ಮೋಜು ಮಾಡುತ್ತಿದ್ದರು. ಈ ವೇಳೆ ದಾಳಿಕೋರ ಅಲ್ಲಿಗೆ ಬಂದು ಗುಂಡು ಹಾರಿಸಲು ಆರಂಭಿಸಿದ್ದಾನೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ" ಎಂದಿದ್ದಾರೆ. 


ಇದನ್ನೂ ಓದಿ: Explainer: ಶ್ರೀಲಂಕಾದ ಅಧ್ಯಕ್ಷ ರಾಜೀನಾಮೆ ನೀಡಿದರೆ ಮುಂದಿನ ನಡೆ ಏನು?


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.