ಕಲಬುರಗಿ: ಊಟ ಬೇಡಿದ ಮುಗ್ದ ಮಗುವಿನ ಕೈಗೆ ಮಲತಾಯಿ ಬರೆ ಹಾಕಿರುವ ಘಟನೆ ನಡೆದಿದೆ. ಈ ಕೃತ್ಯ ನಾಲವಾರ ಗ್ರಾಮದಲ್ಲಿ ನಡೆದಿದ್ದು, ನಾಲ್ಕು ವರ್ಷದ ಮಗುವಿಗೆ ಮಲತಾಯಿ ಚಿತ್ರಹಿಂಸೆ ನೀಡಿದ್ದಾಳೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ:Ind vs SA : ಟೀಂ ಇಂಡಿಯಾಗೆ ಎಂಟ್ರಿ ನೀಡಿದ್ದಾರೆ ಈ 5 ವೇಗದ ಬೌಲರ್‌ಗಳು!


ನಾಲ್ಕು ವರ್ಷದ ಮಗುವನ್ನು ಹಗ್ಗದಿಂದ ಮಂಚಕ್ಕೆ ಕಟ್ಟಿ ಹಾಕಿ, ಕೆಂಡದಿಂದ ಕೈಯನ್ನು ಸುಟ್ಟು ಕ್ರೂರತೆ ಮೆರೆದಿದ್ದಾಳೆ. ಇನ್ನು ಎರಡು ದಿನಗಳಿಂದ ಮಗು ಹೊರಗಡೆ ಬಾರದನ್ನು ಗಮನಿಸಿದ ಸ್ಥಳೀಯರು ಮಲತಾಯಿಯನ್ನು ವಿಚಾರಣೆ ಮಾಡಿದ್ದಾಳೆ. ಈ ಸಂದರ್ಭದಲ್ಲಿ ವಿಚಾರ ತಿಳಿದು, ಗ್ರಾಮಸ್ಥರು ಮಗುವನ್ನು ಆಕೆಯ ಕಪಿಮುಷ್ಟಿಯಿಂದ ಬಿಡಿಸಿಕೊಂಡು ಬಂದಿದ್ದಾರೆ. 


ಈ ವೇಳೆ ಸ್ಥಳೀಯರ ಜೊತೆ ವಾದಕ್ಕಿಳಿದ ಮಹಿಳೆ, ನಾನು ಸುಡುವುದು ಹೀಗೇ. ನೀವ್ಯಾರು ಕೇಳೋಕೆ ಅಂತ ವಾಗ್ವಾದ ನಡೆಸಿದ್ದಾಳೆ. ಇನ್ನು ಮಗುವಿನ ರೋಧನೆ ಕಂಡು ವಾಡಿ ಪೊಲೀಸ್ ಠಾಣೆಗೆ ಗ್ರಾಮಸ್ಥರು ದೂರು ನೀಡಿದ್ದಾರೆ. 


ಇದನ್ನೂ ಓದಿ: Garuda Purana: ಮಹಿಳೆಯರು ಈ ಎರಡು ಕೆಲಸ ಮಾಡುವಾಗ ಅಪ್ಪಿ-ತಪ್ಪಿಯೂ ಪುರುಷರು ನೋಡಬಾರದು


ಮೊದಲ ಹೆಂಡತಿ ತೀರಿಕೊಂಡಿದ್ದ ಹಿನ್ನೆಲೆಯಲ್ಲಿ ಮಗುವಿಗೆ ಯಾವುದೇ ಸಮಸ್ಯೆಯಾಗಬಾರದು ಎಂದು ಪುಟ್ಟ ಕಂದಮ್ಮನ ತಂದೆ ತಿಪ್ಪಣ್ಣ ಎರಡನೇ ಮದುವೆಯಾಗಿದ್ದ. ಆದರೆ ಕೆಲಸದ ನಿಮಿತ್ತ ಮಗುವನ್ನು ಈಕೆಯ ಬಳಿ ಬಿಟ್ಟು ಕಳೆದ ಕೆಲ ದಿನಗಳ ಹಿಂದೆ ಪುಣೆಗೆ ತೆರಳಿದ್ದ. ಈ ಬಳಿಕ ಪ್ರತೀ ದಿನ ಮಗುವಿಗೆ ಚಿತ್ರಹಿಂಸೆ ನೀಡಲು ಪ್ರಾರಂಭಿಸಿದ ಈಕೆ, ಮಲತಾಯಿ ಧೋರಣೆಯನ್ನು ಮಗುವಿನ ಮೇಲೆ ತೋರಿಸಿದ್ದಾಳೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ