Scheme For Higher Return: ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡಿದರೆ, ತಿಂಗಳಿಗೆ 50,000 ನಿಯಮಿತ ಆದಾಯ ಪಡೆಯಬಹುದು

Scheme For Highter Return: ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡಿದರೆ ತಿಂಗಳಿಗೆ ನಿಯಮಿತವಾಗಿ 50,000 ಆದಾಯ ಪಡೆಯಬಹುದು. ಈ ರೀತಿ ಒಂದು ವೇಳೆ ನೀವೂ ಯೋಚಿಸುತ್ತಿದ್ದರೆ, ಇಂದಿನಿಂದಲೇ SIP ಯೋಜನೆಯಲ್ಲಿ ಹಣ ಹೂಡಿಕೆ ಮಾಡಲು ಆರಂಭಿಸಿ.  

Written by - Nitin Tabib | Last Updated : Jun 6, 2022, 05:37 PM IST
  • ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಉತ್ತಮ ಭವಿಷ್ಯದ ಬಗ್ಗೆ ಯೋಚಿಸುತ್ತಾರೆ.
  • ಇದೆ ಕಾರಣದಿಂದ ಜನರು ತಮ್ಮ ಭವಿಷ್ಯವನ್ನು ಸುರಕ್ಷಿತವಾಗಿರಿಸಲು ಹಣ ಹೂಡಿಕೆ ಮಾಡುತ್ತಾರೆ.
  • ಸಾಮಾನ್ಯವಾಗಿ ಜನರು ತಮ್ಮ ಸೇವಾ ನಿವೃತ್ತಿಯ ಬಳಿಕ ಜೀವನವನ್ನು ಸುಧಾರಿಸಲು ಹೂಡಿಕೆಗಳನ್ನು ಮಾಡುತ್ತಾರೆ
Scheme For Higher Return: ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡಿದರೆ, ತಿಂಗಳಿಗೆ 50,000 ನಿಯಮಿತ ಆದಾಯ ಪಡೆಯಬಹುದು title=
Investment Scheme

Scheme For Highter Return: ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಉತ್ತಮ ಭವಿಷ್ಯದ ಬಗ್ಗೆ ಯೋಚಿಸುತ್ತಾರೆ. ಇದೆ ಕಾರಣದಿಂದ ಜನರು ತಮ್ಮ ಭವಿಷ್ಯವನ್ನು ಸುರಕ್ಷಿತವಾಗಿರಿಸಲು ಹಣ ಹೂಡಿಕೆ ಮಾಡುತ್ತಾರೆ. ಸಾಮಾನ್ಯವಾಗಿ ಜನರು ತಮ್ಮ ಸೇವಾ ನಿವೃತ್ತಿಯ ಬಳಿಕ ಜೀವನವನ್ನು ಸುಧಾರಿಸಲು ಹೂಡಿಕೆಗಳನ್ನು ಮಾಡುತ್ತಾರೆ.

ಇದಕ್ಕಾಗಿ ಜನರು ಗರಿಷ್ಠ ಆದಾಯವನ್ನು ನೀಡುವ ಸ್ಥಳದಲ್ಲಿ ಹೂಡಿಕೆ ಮಾಡಬೇಕು ಎಂದು ಭಾವಿಸುತ್ತಾರೆ. ನೀವು ಸಹ ಈ ರೀತಿ ಯೋಚಿಸುತ್ತಿದ್ದರೆ ನೀವು SIP ನಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಬೇಕು. ಇದರಿಂದ ದೀರ್ಘಾವಧಿಯಲ್ಲಿ ನೀವು ಸಾಕಷ್ಟು ಹಣವನ್ನು ಪಡೆಯಬಹುದು.

ಒಂದು ವೇಳೆ ನಿಮ್ಮ ವಯಸ್ಸು ಕೂಡ 30 ವರ್ಷಗಳಾಗಿದ್ದರೆ ಮತ್ತು ನೀವು ತಿಂಗಳಿಗೆ 3500 ರೂ.ಗಳ SIP ಮಾಡಲು ಆರಂಭಿಸಿದರೆ. ನೀವು 30 ವರ್ಷಗಳವರೆಗೆ ಪ್ರತಿ ತಿಂಗಳಿಗೆ 3500 ರೂಪಾಯಿಗಳನ್ನು ಠೇವಣಿ ಮಾಡುವ ಮೂಲಕ 12.60 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದಂತಾಗುತ್ತದೆ.

30 ವರ್ಷಗಳ ಬಳಿಕ ಈ ನಿಮ್ಮ ಹೂಡಿಕೆ ಏನಿಲ್ಲ ಅಂದರು ಕನಿಷ್ಠ ಸರಾಸರಿ ಶೇ.12 ರಷ್ಟು ಆದಾಯವನ್ನು ನೀಡುತ್ತದೆ. ಹೀಗಾಗಿ, 30 ವರ್ಷಗಳನ್ನು ಪೂರ್ಣಗೊಳಿಸಿದ ನಂತರ, ನಿಮ್ಮ ಬಳಿ 1.23 ಕೋಟಿಗಳ ನಿಧಿ ಸಂಗ್ರಹವಾಗುತ್ತದೆ.

1.23 ಕೋಟಿ ರೂ.ಗಳ ನಿಧಿಯ ಮೇಲೆ ನಿಯಮಿತವಾಗಿ ನೀವು ತಿಂಗಳಿಗೆ ಶೇಕಡಾ 5 ರಷ್ಟು ಬಡ್ಡಿಯನ್ನು ಹಿಂಪಡೆದರೆ, ಅದು ವಾರ್ಷಿಕ 6.15 ಲಕ್ಷ ರೂ. ಆದಾಯ ನೀಡಿದಂತಾಗುತ್ತದೆ, ಈ ರೀತಿಯಾಗಿ ನೀವು ಪ್ರತಿ ತಿಂಗಳು 50000 ರೂಪಾಯಿಗಳನ್ನು ಪಡೆಯಬಹುದು.

ಇದನ್ನೂ ಓದಿ-7th Pay Commission: ಸರ್ಕಾರಿ ನೌಕರರಿಗೆ ವೇತನದಲ್ಲಿ ಸಿಗಲಿದೆ ಹೆಚ್ಚುವರಿ 30,000 ರೂ.ಗಳ ಲಾಭ! ಈ ಷರತ್ತು ಪೂರೈಸಬೇಕು

SBI ಸ್ಮಾಲ್ ಕ್ಯಾಪ್ ಮ್ಯೂಚುಯಲ್ ಫಂಡ್ ಕಳೆದ ಕೆಲವು ವರ್ಷಗಳಲ್ಲಿ ಶೇ.20.04 ರಷ್ಟು ಆದಾಯವನ್ನು ನೀಡಿದೆ. ನಿಪ್ಪಾನ್ ಇಂಡಿಯಾ ಸ್ಮಾಲ್ ಕ್ಯಾಪ್ ಮ್ಯೂಚುಯಲ್ ಫಂಡ್ ಯೋಜನೆಯು ಶೇ. 18.14 ಮತ್ತು ಇನ್ವೆಸ್ಕೊ ಇಂಡಿಯಾ ಮಿಡ್‌ಕ್ಯಾಪ್ ಮ್ಯೂಚುಯಲ್ ಫಂಡ್ ಸ್ಕೀಮ್ ಶೇ.16.54 ಆದಾಯವನ್ನು ನೀಡಿರುವ ಕೆಲ ಉತ್ತಮ ಎಸ್ಐಪಿ ಮ್ಯೂಚವಲ್ ಫಂಡ್ ಯೋಜನೆಗಳಾಗಿವೆ ಎಂಬುದು ಇಲ್ಲಿ ಉಲ್ಲೇಖನೀಯ.

ಇದನ್ನೂ ಓದಿ-Aadhaar Security Tips: ನಿಮ್ಮ ಆಧಾರ್ ಅನ್ನು ಸೇಫ್ ಆಗಿರಿಸಲು UIDAI ಸಲಹೆಗಳಿವು

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ನಿಮಗೆ ಯಾವುದೇ ರೀತಿಯ ಹೂಡಿಕೆ ಮಾಡಲು ಸಲಹೆ ನೀಡುವುದಿಲ್ಲ. ಹೂಡಿಕೆ ಮಾಡುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ
    

Trending News