ಬೆಂಗಳೂರು: ಕುಟುಂಬ ಸಮೇತ ನೀವೇನಾದರೂ ಮದುವೆ ಕಲ್ಯಾಣ ಮಂಟಪಕ್ಕೆ‌ ಹೋಗ್ತೀರಾ..‌ಅದರಲ್ಲೂ ನಿಮ್ಮ‌ ಮಕ್ಕಳನ್ನು ಕರೆದುಕೊಂಡು ಹೋಗ್ತಿದ್ದೀರಾ .. ಹಾಗಾದರೆ ಈ ಸ್ಟೋರಿ ಓದಲೇಬೇಕು. ಮದುವೆ ಸಮಾರಂಭದಲ್ಲಿ ಚಿನ್ನಾಭರಣ ಧರಿಸಿದ್ದ ಮಕ್ಕಳನ್ನೇ ಟಾರ್ಗೆಟ್ ಮಾಡಿಕೊಂಡು ಮೈ‌ ಮೇಲಿದ್ದ ಒಡವೆಗಳನ್ನ ಕಳ್ಳತನ ಮಾಡಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.  


COMMERCIAL BREAK
SCROLL TO CONTINUE READING

ಹೌದು, ಮದುವೆ ಮನೆಯಲ್ಲಿ ಮಗುವನ್ನು ಕಣ್ಣಾಮುಚ್ಚಾಲೆ ಆಡೋಣ ಎಂದು ಕರೆದು ಮಗು ಧರಿಸಿದ್ದ ಒಡವೆಗಳನ್ನು ಕಳ್ಳತನ ಮಾಡಲಾಗಿದೆ. ಈ ಸಂಬಂಧ ಉದ್ಯಮಿ ರಾಘವೇಂದ್ರ ಎಂಬುವರು ನೀಡಿದ‌ ದೂರಿನ ಮೇರೆಗೆ ಅಪರಿಚಿತ ಖದೀಮರ ವಿರುದ್ಧ ಗೋವಿಂದರಾಜನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 


ಇದನ್ನೂ ಓದಿ- ಖಾಲಿ ಬಿಟ್ಟ ಸೈಟ್ಗಳೇ ಟಾರ್ಗೆಟ್: ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡುತ್ತಿದ್ದ ಗ್ಯಾಂಗ್ ಅರೆಸ್ಟ್


ದಾಸನಪುರ‌ ಹೋಬಳಿಯ ಚಿಕ್ಕವೀರಯ್ಯಪಾಳ್ಯ ನಿವಾಸಿಯಾಗಿರುವ ರಾಘವೇಂದ್ರ ಸಂಬಂಧಿಕರ ಮದುವೆ ಹಿನ್ನೆಲೆ ಮೇ 20 ರಂದು ಮಾಗಡಿ ರಸ್ತೆಯ ಸರಸ್ವತಿ‌ ಕನ್ವೆನ್ಷನ್ ಹಾಲ್‌ಗೆ ಹೆಂಡತಿ-ಮಕ್ಕಳ ಸಮೇತ ಬಂದಿದ್ದರು.‌ ಅಂದು ಬೆಳಗ್ಗೆ ಹುಡುಗರೊಂದಿಗೆ ಆರು ವರ್ಷದ ಮಗ ಶೌರ್ಯ ಆಟವಾಡುತ್ತಿದ್ದ. ಈ ವೇಳೆ‌ ಇಬ್ಬರು ಖದೀಮರು ಬಂದು ಕಣ್ಣಾಮುಚ್ಚಾಲೆ ಆಟ ಆಡೋಣ ಬಾ ಎಂದು ಕರೆದಿದ್ದಾರೆ.‌ ಗಮನ ಬೇರೆಡೆ ಸೆಳೆದು ಬಾಲಕನ ಮೈಮೇಲಿದ್ದ 79 ಗ್ರಾಂ ಎಗರಿಸಿದ್ದಾರೆ ಎನ್ನಲಾಗಿದೆ.


ಇದನ್ನೂ ಓದಿ- ಹುಡುಗಿ ಮನೆಯವರು ಒಪ್ಪಿದ್ರೆ ಮದುವೆ ಆಗ್ತಿನಿ: ಆ್ಯಸಿಡ್ ನಾಗ


ಮಗುವಿನ ಮೈ ಮೇಲಿದ್ದ ಚಿನ್ನ ಕದ್ದು ಕಲ್ಯಾಣ ಮಂಟಪದಿಂದ ಬೈಕಿನಲ್ಲಿ ಎಸ್ಕೇಪ್‌ ಆಗುತ್ತಿರುವ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದ್ದು‌ ಇದರ ಆಧಾರದ ಮೇಲೆ ಖದೀಮರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ‌‌.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.