Sucide Case: ಹೆಂಡತಿಯ ಮೇಕಪ್ ಕಾಟಕ್ಕೆ ಮನನೊಂದು ಗಂಡ ಸೂಸೈಡ್..!
Sucide Case: ಹೆಂಡತಿಯ ಮೇಕಪ್ ಆಸೆ ಹಾಗೂ ಅತಿಯಾದ ಫೋನ್ ಬಳಕೆಯಿಂದ ಗುಲ್ಜಾರ್ ಹುಸೈನ್ ಬೇಸತ್ತು ಹೋಗಿದ್ದನಂತೆ. ಈ ಬಗ್ಗೆ ಸಾಕಷ್ಟು ಬಾರಿ ಎಚ್ಚರಿಕೆ ನೀಡಿದರೂ ಸಹ ಹೆಂಡತಿ ಮಾತ್ರ ಆತನ ಮಾತಿಗೆ ಸೊಪ್ಪು ಹಾಕಿರಲಿಲ್ಲವಂತೆ.
Sucide Case: ಹೆಂಡತಿಯ ಕಾಟವನ್ನು ತಾಳಲಾರದೆ ಪತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ನೆಲಮಂಗಲ ತಾಲೂಕಿನ ತೊಣಚಿನಕುಪ್ಪೆ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಅಸ್ಸಾಂ ಮೂಲದ ಲಾರಿ ಚಾಲಕ ಗುಲ್ಜಾರ್ ಹುಸೈನ್ ಚೌಧರಿ ಮದುವೆ ನಂತರ ತೊಣಚಿನಕುಪ್ಪೆ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಆದರೆ ಪತ್ನಿಯ ಕಾಟದಿಂದ ಬೇಸತ್ತು ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇದನ್ನೂ ಓದಿ: ಸರ್ಕಾರಿ ಸ್ವಾಮ್ಯದ ಸಕ್ಕರೆ ಕಾರ್ಖಾನೆಯಿಂದಲೇ ಬಿಲ್ ಬಾಕಿ
ಹೆಂಡತಿಯ ಮೇಕಪ್ ಆಸೆ ಹಾಗೂ ಅತಿಯಾದ ಫೋನ್ ಬಳಕೆಯಿಂದ ಗುಲ್ಜಾರ್ ಹುಸೈನ್ ಬೇಸತ್ತು ಹೋಗಿದ್ದನಂತೆ. ಈ ಬಗ್ಗೆ ಸಾಕಷ್ಟು ಬಾರಿ ಎಚ್ಚರಿಕೆ ನೀಡಿದರೂ ಸಹ ಹೆಂಡತಿ ಮಾತ್ರ ಆತನ ಮಾತಿಗೆ ಸೊಪ್ಪು ಹಾಕಿರಲಿಲ್ಲ.
ಅತಿಯಾದ ಮೊಬೈಲ್ ಬಳಕೆ ಹಾಗೂ ಮೇಕಪ್ ಮಾಡಿಕೊಂಡು ಶೋಕಿ ಮಾಡುತ್ತಿದ್ದ ಹೆಂಡತಿಯಿಂದ ಗುಲ್ಜಾರ್ ಹುಸೈನ್ ಬೇಸತ್ತು ಹೋಗಿದ್ದ. ಇದೇ ವಿಚಾರವಾಗಿ ಗಂಡ-ಹೆಂಡತಿ ನಡುವೆ ಸಾಕಷ್ಟು ಬಾರಿ ಗಲಾಟೆ ಸಹ ನಡೆದಿತ್ತು.
ಇದನ್ನೂ ಓದಿ: ಕರಾವಳಿ ಜಿಲ್ಲೆಗಳಲ್ಲಿ ಎರಡು ದಿನ ರೆಡ್ ಅಲರ್ಟ್ ಘೋಷಣೆ
ಎಷ್ಟೇ ಬುದ್ಧಿ ಹೇಳಿದರೂ ಪತಿಯ ಮಾತುಗಳನ್ನು ಪತ್ನಿ ಕೇಳುತ್ತಿರಲಿಲ್ಲವಂತೆ. ಹೀಗಾಗಿ ಮನನೊಂದ ಪತಿ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಬಗ್ಗೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.