ಪಿಎಸ್ಐ ನೇಮಕಾತಿ ಅಕ್ರಮ.. ಸಬ್ಇನ್ಸ್ಪೆಕ್ಟರ್ ಅರೆಸ್ಟ್
ಪಿಎಸ್ಐ ಪೊಲೀಸ್ ಪರೀಕ್ಷಾ ನೇಮಕಾತಿಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಡರಹಳ್ಳಿ ಪೊಲೀಸ್ ಠಾಣೆ ಸಬ್ ಇನ್‌ಸ್ಪೆಕ್ಟರ್ ಲಾಕ್ ಆಗಿದ್ದಾರೆ. ಸಿಐಡಿ ಪೊಲೀಸರು ಪಿಎಸ್ಐ ಹರೀಶ ಎಂಬುವವರನ್ನು ಬಂಧಿಸಿದ್ದಾರೆ.
ಬೆಂಗಳೂರು: ಪಿಎಸ್ಐ ಪೊಲೀಸ್ ಪರೀಕ್ಷಾ ನೇಮಕಾತಿಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಡರಹಳ್ಳಿ ಪೊಲೀಸ್ ಠಾಣೆ ಸಬ್ ಇನ್‌ಸ್ಪೆಕ್ಟರ್ ಲಾಕ್ ಆಗಿದ್ದಾರೆ. ಸಿಐಡಿ ಪೊಲೀಸರು ಪಿಎಸ್ಐ ಹರೀಶ ಎಂಬುವವರನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: Weight Loss Mistakes: ತೂಕ ಇಳಿಸಲು ಎಂದಿಗೂ ಈ ತಪ್ಪುಗಳನ್ನು ಮಾಡಲೇಬೇಡಿ
ಸಚಿವ ಅಶ್ವತ್ಥ ನಾರಾಯಣ ಸ್ವಗ್ರಾಮವಾಗಿರುವ ಮಾಗಡಿಯ ಚಿಕ್ಕಕಲ್ಯ ಗ್ರಾಮದ ಹರೀಶ್ 2019ನೇ ಬ್ಯಾಚ್ ಪಿಎಸ್ಐ ಆಗಿದ್ದು ಕಳೆದ ಮೂರು ವರ್ಷಗಳಿಂದ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಪ್ರಕರಣ ಸಂಬಂಧ ಸಿಐಡಿ ಪೊಲೀಸರು ನೀಡಿದ ದೂರಿನ ಮೇರೆಗೆ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ 14 ಮಂದಿ ಅಭ್ಯರ್ಥಿಗಳ ಪೈಕಿ ದಿಲೀಪ್ ಬಂಧನವಾಗಿತ್ತು. ಈತ ನೀಡಿದ ಸುಳಿವಿನ ಮೇರೆಗೆ ಪಿಎಸ್ಐ ಹರೀಶ್ ಅವರನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.
ದೀಲಿಪ್ ಚಿಕ್ಕಕಲ್ಯ ಗ್ರಾಮದವರಾಗಿದ್ದು ಹಲವು ವರ್ಷಗಳ ಹಿಂದೆ ಪಿಎಸ್ಐ ಹರೀಶ್ ಪರಿಚಿತರಾಗಿದ್ದರು. ಪಿಎಸ್ ಐ ಆಗುವ ಸಲುವಾಗಿ ಲಕ್ಷಾಂತರ ರೂಪಾಯಿ ಹಣವನ್ನು ಹರೀಶ್ ನೀಡಿರುವುದಾಗಿ ಸಿಐಡಿ ಮುಂದೆ ಹೇಳಿಕೆ ನೀಡಿದ್ದರು. ಹರೀಶ್ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದ್ದು ಸದ್ಯ ಸಿಐಡಿ ವಿಚಾರಣೆ ಚುರುಕುಗೊಳಿಸಿದೆ.
ಇದನ್ನೂ ಓದಿ: ಒಂದು ಇನ್‌ಸ್ಟಾಗ್ರಾಮ್ ಪೋಸ್ಟ್‌ಗೆ ಕೋಟಿ ಕೋಟಿ ಶುಲ್ಕ ಪಡೆಯುವ ಬಾಲಿವುಡ್ ಬೆಡಗಿಯರು!
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.