ಒಂದು ಇನ್‌ಸ್ಟಾಗ್ರಾಮ್ ಪೋಸ್ಟ್‌ಗೆ ಕೋಟಿ ಕೋಟಿ ಶುಲ್ಕ ಪಡೆಯುವ ಬಾಲಿವುಡ್‌ ಬೆಡಗಿಯರು!

ಬಾಲಿವುಡ್‌ನ ಖ್ಯಾತ ನಟಿಯರಾದ ದೀಪಿಕಾ ಪಡುಕೋಣೆ, ಅನುಷ್ಕಾ ಶರ್ಮಾ, ಆಲಿಯಾ ಭಟ್‌ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಪ್ರಚಾರ ಪೋಸ್ಟ್‌ಗೆ ಎಷ್ಟು ಶುಲ್ಕ ವಿಧಿಸುತ್ತಾರೆ ಎಂದು ನಿಮಗೆ ತಿಳಿದಿದೆಯೇ?

Written by - Chetana Devarmani | Last Updated : Jun 15, 2022, 12:58 PM IST
  • ಬಾಲಿವುಡ್ ಸೆಲೆಬ್ರಿಟಿಗಳು ಸಾಮಾನ್ಯವಾಗಿ ಹಲವಾರು ಬ್ರ್ಯಾಂಡ್‌ಗಳ ಜಾಹೀರಾತನ್ನು ನೀಡುತ್ತಿರುತ್ತಾರೆ
  • ಒಂದು ಇನ್‌ಸ್ಟಾಗ್ರಾಮ್ ಪೋಸ್ಟ್‌ಗೆ ಕೋಟಿ ಕೋಟಿ ಶುಲ್ಕ ಪಡೆಯುವ ಬಾಲಿವುಡ್‌ ಬೆಡಗಿಯರು
  • 67.4 ಮಿಲಿಯನ್ ಅನುಯಾಯಿಗಳನ್ನು ಹೊಂದಿರುವ ಡಿಂಪಲ್‌ ಕ್ವೀನ್‌ ದೀಪಿಕಾ ಪಡುಕೋಣೆ
ಒಂದು ಇನ್‌ಸ್ಟಾಗ್ರಾಮ್ ಪೋಸ್ಟ್‌ಗೆ ಕೋಟಿ ಕೋಟಿ ಶುಲ್ಕ ಪಡೆಯುವ ಬಾಲಿವುಡ್‌ ಬೆಡಗಿಯರು!  title=
ಬಾಲಿವುಡ್ ಸೆಲೆಬ್ರಿಟಿಗಳು

ಬಾಲಿವುಡ್ ಸೆಲೆಬ್ರಿಟಿಗಳು ಸಾಮಾನ್ಯವಾಗಿ ಹಲವಾರು ಬ್ರ್ಯಾಂಡ್‌ಗಳ ಜಾಹೀರಾತನ್ನು ನೀಡುತ್ತಿರುತ್ತಾರೆ. ಅವರು ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ತಮ್ಮ ಬ್ರ್ಯಾಂಡ್‌ಗಳನ್ನು ಪ್ರಚಾರ ಮಾಡುತ್ತಾರೆ. ದೀಪಿಕಾ ಪಡುಕೋಣೆಯಿಂದ ಕತ್ರಿನಾ ಕೈಫ್ ವರೆಗೆ ಬಾಲಿವುಡ್‌ನ ಪ್ರಮುಖ ನಟಿಯರು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಗಳಲ್ಲಿ ಒಂದೇ ಒಂದು ಪ್ರಚಾರದ ಪೋಸ್ಟ್‌ಗೆ ಎಷ್ಟು ಶುಲ್ಕ ವಿಧಿಸುತ್ತಾರೆ ಎಂಬುದು ಇಲ್ಲಿದೆ.

ಇದನ್ನೂ ಓದಿ: Anushka Sharma Pregnant: ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರಾ ವಿರುಷ್ಕಾ!?

ಬಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾ ಇನ್‌ಸ್ಟಾಗ್ರಾಮ್‌ನಲ್ಲಿ 79.4 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ. ಅವರು ಒಂದೇ ಬ್ರಾಂಡ್ ಪೋಸ್ಟ್‌ಗೆ 1.80 ಕೋಟಿ ರೂಪಾಯಿಗಳನ್ನು ವಿಧಿಸುತ್ತಾರೆ ಎಂದು ವರದಿಯಾಗಿದೆ.

67.4 ಮಿಲಿಯನ್ ಅನುಯಾಯಿಗಳನ್ನು ಹೊಂದಿರುವ ಡಿಂಪಲ್‌ ಕ್ವೀನ್‌ ದೀಪಿಕಾ ಪಡುಕೋಣೆ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಒಂದು ಬ್ರಾಂಡ್ ಅನ್ನು ಪ್ರಮೋಷನಲ್‌ ಪೋಸ್ಟ್‌ಗೆ 1.5 ಕೋಟಿ ರೂ. ಶುಲ್ಕ ಪಡೆಯುತ್ತಾರೆ. ಆಲಿಯಾ ಭಟ್ ಇನ್‌ಸ್ಟಾಗ್ರಾಮ್‌ನಲ್ಲಿ 66.4 ಮಿಲಿಯನ್ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ಇವರು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಪ್ರತಿ ಪ್ರಚಾರ ಪೋಸ್ಟ್‌ಗೆ 1 ಕೋಟಿ ರೂಪಾಯಿಗಳನ್ನು ವಿಧಿಸುತ್ತಾರೆ ಎಂದು ವರದಿಯಾಗಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ 65.2 ಮಿಲಿಯನ್ ಅನುಯಾಯಿಗಳನ್ನು ಹೊಂದಿರುವ ನಟಿ ಕತ್ರಿನಾ ಕೈಫ್, ಒಂದು ಪ್ರಚಾರದ ಪೋಸ್ಟ್‌ಗೆ 97 ಲಕ್ಷ ರೂಪಾಯಿಗಳನ್ನು ವಿಧಿಸುತ್ತಾರೆ. ಇನ್‌ಸ್ಟಾಗ್ರಾಮ್‌ನಲ್ಲಿ 59 ಮಿಲಿಯನ್ ಅಭಿಮಾನಿಗಳನ್ನು ಹೊಂದಿರುವ ಅನುಷ್ಕಾ ಶರ್ಮಾ, ಪ್ರತಿ ಪೋಸ್ಟ್‌ಗೆ 95 ಲಕ್ಷ ರೂ. ಪಡೆಯುತ್ತಾರೆ. 9.2 ಮಿಲಿಯನ್ ಅನುಯಾಯಿಗಳನ್ನು ಹೊಂದಿರುವ ನಟಿ ಕರೀನಾ ಕಪೂರ್, ಬ್ರ್ಯಾಂಡ್ ಅನ್ನು ಪ್ರಮೋಷನ್‌ ಮಾಡಲು ಪ್ರತಿ ಪೋಸ್ಟ್‌ಗೆ 1 ಕೋಟಿ ರೂ. ಪಡೆಯುತ್ತಾರೆ. 

ಇದನ್ನೂ ಓದಿ: ಪುನೀತ್‌ಗೆ ‘ಭಾರತ ರತ್ನ’ ನೀಡಬೇಕೆಂದು 2100 ಕಿ.ಮೀ ಕಿ.ಮೀ ನಡೆದ ಅಭಿಮಾನಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

Trending News