ಬೆಂಗಳೂರು: ಕೆಲ ದಿನಗಳ ಹಿಂದೆ ಸಿಸಿಬಿ ಪೊಲೀಸರು ಐವರು ಶಂಕಿತ ಉಗ್ರರನ್ನ ಅರೆಸ್ಟ್ ಮಾಡಿದ್ರು.ತನಿಖೆ ವೇಳೆ ಅವರ ಬಳಿ ಗ್ರೆನೇಡ್ ಇರೋದು ಕೂಡ ಪತ್ತೆಯಾಗಿತ್ತು.ಅದರ ಮೂಲಕ ಹುಡುಕುತ್ತಾ ಹೊರಟ ಪೊಲೀಸರಿಗೆ ಗ್ರೆನೇಡ್ ತಂದುಕೊಟ್ಟಿದ್ದು ಶಂಕಿತ ಉಗ್ರ ಜುನೈದ್ ಅನ್ನೋದು ಗೊತ್ತಾಗಿತ್ತು.ಸದ್ಯ ಜುನೈದ್ ತಲೆ ಮರೆಸಿಕೊಂಡಿದ್ದು.


COMMERCIAL BREAK
SCROLL TO CONTINUE READING

2017 ರಲ್ಲಿ ಆತನ ಜೊತೆಗಿದ್ದ ಸಹಚರ ಮೊಹಮ್ಮದ್ ಹರ್ಷದ್ ಈಗ ಅರೆಸ್ಟ್ ಆಗಿದ್ದಾನೆ.. ಆರ್.ಟಿ.ನಗರ ಪೊಲೀಸ್ ಠಾಣೆಯ ರೌಡಿ ಶೀಟರ್.ಕೊಲೆ ,ಕೊಲೆ ಯತ್ನ,ರಾಬರಿ,ಕಳ್ಳತನ ಸೇರಿದಂತೆ 17 ಕೇಸ್ ಗಳು ಈತನ ಮೇಲಿದೆ. ಅಷ್ಟೇ ಅಲ್ಲಾ ದುಬೈಗೆ ಪರಾರಿ ಆಗಿರುವ ಶಂಕಿತ ಉಗ್ರ ಜುನೈದ್ ಸಹಚರ. 2017 ರಲ್ಲಿ ನಡೆದ ನೂರ್ ಅಹಮ್ಮದ್ ಎಂಬಾತನ ಕಿಡ್ನಾಪ್ ಮತ್ತು ಕೊಲೆ ಕೇಸ್ ನಲ್ಲಿ ಜುನೈದ್ ಸೇರಿದಂತೆ 21 ಜನ ಆರೋಪಿಗಳ ಪೈಕಿ ಈತನು ಒಬ್ಬ.


ಅಂದು ಜೈಲಿಗೆ ಹೋಗಿ ಬಂದವನು ಕ್ರಿಮಿನಲ್ ಆಗಿ ಬೆಳೆದುಬಿಟ್ಟಿದ್ದ.ಅಟ್ಟಹಾಸ ಮೆರೆಯುತ್ತಾ. ತಲೆಮರೆಸಿಕೊಂಡಿದ್ದ ಆಸಾಮಿಗಾಗಿ ವಿವಿಧ ಠಾಣೆಯ ಪೊಲೀಸರು ಹುಡುಕಾಟ ನಡೆಸ್ತಿದ್ರು.ಆದ್ರೆ ಇದೇ ತಿಂಗಳ 26 ರ ರಾತ್ರಿ ಹರ್ಷದ್ ಆರ್.ಟಿ.ನಗರ ಫ್ಲವರ್ ಮಾರ್ಕೆಟ್ ಹತ್ತಿರ ಇರೊ ಮಾಹಿತಿ ಆರ್‌.ಟಿ.ನಗರ ಪೊಲೀಸರಿಗೆ ಸಿಕ್ಕಿತ್ತು. ಹಾಗಾಗಿ ರಾತ್ರೋ ರಾತ್ರಿ ತಂಡ ಮಾಡಿಕೊಂಡ ಖಾಕಿ ಪಡೆ 27 ಮುಂಜಾನೆ ಐದು ಗಂಟೆ ಸುಮಾರಿಗೆ ಬೇಟೆಗೆ ಇಳಿದಿತ್ತು.


ಇದನ್ನೂ ಓದಿ: ಗ್ರಾಮಗಳಲ್ಲಿ ಸಿಗುತ್ತವಂತೆ ವಜ್ರಗಳು..! 


ಮನೆಯಲ್ಲಿರೋದನ್ನ ಸಿಸಿಟಿವಿ ಪರಿಶೀಲನೆ ಮೂಲಕ ಖಾತ್ರಿ ಪಡೆಸಿಕೊಂಡು ಬಾಗಿಲು ಒಡೆದು ಮನೆಯೊಳಗೆ ಪ್ರವೇಶ ಮಾಡಿದ್ರು.ಮನೆಯಲ್ಲಿದ್ದ ಆಸಾಮಿಯನ್ನ ಲಾಕ್ ಮಾಡಿ ಕರೆತಂದಿದ್ದಾರೆ.ಮೊಹಮ್ಮದ್ ಹರ್ಷದ್ ಬಂಧನಕ್ಕೆ ತೆರಳಿದ್ದ ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾಗಿದ್ದ ಅಷ್ಟೇ ಅಲ್ಲ ಸ್ವತಃ ತಾನೆ ಬ್ಲೇಡ್ ನಿಂದ ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಳ್ಳೋಕೆ ಮುಂದಾಗಿದ್ದ..ಅಲ್ಲದೇ ಎರಡನೇ ಮಹಡಿಯಿಂದ ಜಿಗಿಯಲು ರೆಡಿಯಾಗಿದ್ದ.ಅಷ್ಟರಲ್ಲೇ ಲಾಕ್ ಮಾಡಿ ಎತ್ತಾಕ್ಕೊಂಡು ಬಂದಿದ್ದಾರೆ.


ಸದ್ಯ ಆರೋಪಿಯನ್ನ ವಶಕ್ಕೆ ಪಡೆದುಕೊಂಡಿರೊ ಪೊಲೀಸರಿಗೆ ಉಗ್ರ ಚಟುವಟಿಕೆಯ ಯಾವುದೇ ಹಿಂಟ್ ಕೂಡ ಸಿಕ್ಕಿಲ್ಲ ಅದಾಗಿಯೂ ಜುನೈದ್ ಜೊತೆಗೆ ಆರೋಪಿಯಾಗಿದ್ದರಿಂದ.. ಜುನೈದ್ ಜೊತೆಗೆ ಈಗಲು ಸಂಪರ್ಕದಲ್ಲಿದ್ದಾನಾ? ಉಗ್ರ ಚಟುವಟಿಕೆಯಲ್ಲಿ ಏನಾದ್ರು ಭಾಗಿಯಾಗಿದ್ದಾನಾ ಎನ್ನೋದರ ಬಗ್ಗೆ  ಸಮಗ್ರ ಮಾಹಿತಿ ಕಲೆ ಹಾಕ್ತಿದ್ದಾರೆ.ಸದ್ಯ ಆರೋಪಿ ಬಗ್ಗೆ ಸಿಸಿಬಿ ಪೊಲೀಸರು ಕೂಡ ಮಾಹಿತಿ ಪಡೆದುಕೊಂಡಿದ್ದು,ವಿಚಾರಣೆ ನಡೆಸ್ತಿದೆ.ವಿಚಾರಣೆ ಬಳಿಕ ಅಷ್ಟೇ ಆತನ ಇಡೀ ಹಿಸ್ಟರಿ ಗೊತ್ತಾಗಲಿದೆ.


ಇದನ್ನೂ ಓದಿ: ಉಡುಪಿ ಘಟನೆ ವಿಚಾರದಲ್ಲಿ ರಾಜಕೀಯ ಬೇಡ, ಮಕ್ಕಳ ಹಿತಾಸಕ್ತಿ ಮುಖ್ಯ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.