ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಹಿಜ್ಬುಲ್​​ ಮುಜಾಹಿದ್ದೀನ್ ಕಮಾಂಡರ್​​ ತಾಲೀಬ್​ ಹುಸೇನ್ ಬಂಧನವಾಗಿದ್ದು, ಆತನ ಕುರಿತಾದ ಸ್ಫೋಟಕ ವಿಷಯ ಬಹಿರಂಗಗೊಂಡಿವೆ ಎನ್ನಲಾಗುತ್ತಿದೆ. ಯುವಕರ ಬ್ರೈನ್​ ವಾಶ್ ಮಾಡಿ ಜಮ್ಮು-ಕಾಶ್ಮೀರದಲ್ಲಿ ಹತ್ಯೆಗೆ ಕುಮ್ಮಕ್ಕು ನೀಡುತ್ತಿದ್ದ ಎಂದು ಹೇಳಲಾಗುತ್ತಿದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಪಠ್ಯ ವಿವಾದ: ಜೂನ್ 9 ರಂದು ಕಾಂಗ್ರೆಸ್‌ನಿಂದ ಪ್ರತಿಭಟನೆ


ಕಳೆದ ಎರಡು ವರ್ಷಗಳಿಂದ ಬೆಂಗಳೂರಿನಲ್ಲೇ ವೇಷ ಬದಲಿಸಿ ಜೀವನ ನಡೆಸುತ್ತಿದ್ದ ಶಂಕಿತ ಉಗ್ರನ ಬಂಧನದವಾಗಿದ್ದು, ಪೊಲೀಸರು ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ. ​​​ಮಸೀದಿಗಳಲ್ಲಿ ಪಾಠ ಪ್ರವಚನ ಮಾಡುತ್ತಿದ್ದ ಎಂದೂ ಸಹ ಹೇಳಲಾಗುತ್ತಿದೆ. ಈತ ಆಟೋ ಓಡಿಸುತ್ತ ಜೀವನ ನಡೆಸುತ್ತಿದ್ದನಂತೆ. 


ಬಂಧಿತ ಶಂಕಿತ ಉಗ್ರನನ್ನು ತಾಲೀಬ್​ ಹುಸೇನ್​ ಎಂದು ಗುರುತಿಸಲಾಗಿದ್ದು, ಹಿಜ್ಬುಲ್​ ಮುಜಾಹಿದ್ದೀನ್ ಉಗ್ರ ಸಂಘಟನೆಯ ಪ್ರಮುಖ ಕಮಾಂಡರ್​ಗಳಲ್ಲಿ ಈತನು ಕೂಡ ಒಬ್ಬ ಎನ್ನಲಾಗಿದೆ. ಈತ ಮೂಲತಃ ಜಮ್ಮು-ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯವನು. 2016ರಲ್ಲಿ ಭಯೋತ್ಪಾದಕ ಸಂಘಟನೆಗೆ ಸೇರಿದ್ದು, ಇಬ್ಬರು ಹೆಂಡತಿ ಮತ್ತು ಐವರು ಮಕ್ಕಳನ್ನ ಹೊಂದಿದ್ದಾನಂತೆ.


ಇದನ್ನೂ ಓದಿ: ಆನೆ ಹೋಗುತ್ತಿರುತ್ತದೆ ಶ್ವಾನ ಬೊಗಳುತ್ತಿರುತ್ತವೆ : ಚಡ್ಡಿ ಟೀಕಾಕಾರರಿಗೆ ಸವದಿ ತಿರುಗೇಟು


ಯುವಕರ ಬ್ರೈನ್​ ವಾಶ್​ ಮಾಡಿ ಜಮ್ಮು-ಕಾಶ್ಮೀರದಲ್ಲಿ ಹತ್ಯೆಗೆ ಸಂಚು ರೂಪಿಸುತ್ತಿದ್ದ ಎನ್ನಲಾಗುತ್ತಿದೆ. ಕಣಿವೆ ನಾಡಿನಲ್ಲಿ ನಡೆದ ಅನೇಕ ಬಾಂಬ್​ ಸ್ಫೋಟ ಪ್ರಕರಣಗಳಲ್ಲಿ ಈತ ಭಾಗಿಯಾಗಿರುವ ಮಾಹಿತಿ ಲಭ್ಯವಾಗಿದೆಯಂತೆ. ಸಶಸ್ತ್ರ ಪಡೆ ಈತನ ಬಂಧನಕ್ಕಾಗಿ ಶೋಧ ನಡೆಸುತ್ತಿದ್ದಾಗ ಹೆಂಡತಿ, ಮಕ್ಕಳೊಂದಿಗೆ ಬೆಂಗಳೂರಿಗೆ ಬಂದು 2 ವರ್ಷಗಳಿಂದ ನೆಲೆಸಿದ್ದನಂತೆ. 


ಆಟೋ ಓಡಿಸಿಕೊಂಡು ಸಾಮಾನ್ಯ ಜನರಂತೆ ಜೀವನ ನಡೆಸುತ್ತಿದ್ದ. ಸದ್ಯ ಈತನ ಬಂಧನದಿಂದ ಸಿಲಿಕಾನ್ ಸಿಟಿಯ ಜನ ಬೆಚ್ಚಿ ಬಿದ್ದಿದ್ದಾರೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.