Suspected terrorist arrested: ಬೆಂಗಳೂರಿನಲ್ಲಿ ಶಂಕಿತ ಉಗ್ರ ತಾಲಿಬ್ ಹುಸೇನ್ ಅರೆಸ್ಟ್

Suspected terrorist arrested: ನಗರದಲ್ಲಿ ಶಂಕಿತ ಉಗ್ರ ತಾಲಿಬ್ ಹುಸೇನ್​ನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕಾಶ್ಮೀರದಿಂದ ಬೆಂಗಳೂರಿಗೆ ಬಂದು ಹೆಸರು ಬದಲಾಯಿಸಿಕೊಂಡು ಓಡಾಡುತ್ತಿದ್ದ ಎಂದು ಹೇಳಲಾಗಿದೆ. 

Written by - Chetana Devarmani | Last Updated : Jun 7, 2022, 12:18 PM IST
  • ಬೆಂಗಳೂರಿನಲ್ಲಿ ಶಂಕಿತ ಉಗ್ರ ತಾಲಿಬ್ ಹುಸೇನ್ ಬಂಧನ
  • ಬೆಂಗಳೂರಿನ ಶ್ರೀರಾಂಪುರದಲ್ಲಿ ಕಾರ್ಯಾಚರಣೆ ಸೆರೆ
  • ಮೂಲತಃ ಜಮ್ಮು ಕಾಶ್ಮೀರದವನೇ ಆದ ತಾಲೀಬ್ ಹುಸೇನ್
Suspected terrorist arrested: ಬೆಂಗಳೂರಿನಲ್ಲಿ ಶಂಕಿತ ಉಗ್ರ ತಾಲಿಬ್ ಹುಸೇನ್ ಅರೆಸ್ಟ್ title=
ತಾಲಿಬ್ ಹುಸೇನ್

ಬೆಂಗಳೂರು: ನಗರದಲ್ಲಿ ಶಂಕಿತ ಉಗ್ರ ತಾಲಿಬ್ ಹುಸೇನ್​ನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕಾಶ್ಮೀರದಿಂದ ಬೆಂಗಳೂರಿಗೆ ಬಂದು ಹೆಸರು ಬದಲಾಯಿಸಿಕೊಂಡು ಓಡಾಡುತ್ತಿದ್ದ ಎಂದು ಹೇಳಲಾಗಿದೆ. ಜಮ್ಮು ಮತ್ತ ಕಾಶ್ಮೀರದ ಪೊಲೀಸರು ಬೆಂಗಳೂರಿನ ಶ್ರೀರಾಂಪುರದಲ್ಲಿ ಕಾರ್ಯಾಚರಣೆ ನಡೆಸಿ ತಾಲಿಬ್ ಹುಸೇನ್ (38) ನನ್ನು ​ಬಂಧಿಸಿದ್ದಾರೆ.  

ಇದನ್ನೂ ಓದಿ: Fatherʼs Day: ಲೈಫ್‌ನ ರಿಯಲ್‌ ಹೀರೋಗೆ ʼವಿಶ್ವ ಅಪ್ಪಂದಿರ ದಿನʼದಂದು ಈ ಗಿಫ್ಟ್‌ ನೀಡಿ

ತಾಲಿಕ್ ಎಂದು ಹೆಸರು ಬದಲಿಸಿಕೊಂಡು ಈತ ಓಡಾಡುತ್ತಿದ್ದನಂತೆ. ಉಗ್ರ ತಾಲಿಬ್, ಬಿಎನ್​ಎಲ್​ ಏರ್​ ಸರ್ವಿಸ್​ನಲ್ಲಿ ಕೆಲಸ ಮಾಡುತ್ತಿದ್ದ. ಕಾಶ್ಮೀರದಿಂದ ಬೆಂಗಳೂರಿಗೆ ಬರುವ ವೇಳೆಯಲ್ಲಿ ಪೊಲೀಸ್​ ಪತ್ನಿಯನ್ನೇ ಕರೆತಂದಿದ್ದಾನೆ. ಅದರಂತೆ ಪತ್ನಿ ಮತ್ತು ಮೂವರು ಮಕ್ಕಳ ಜೊತೆಗೆ ಬೆಂಗಳೂರಿನಲ್ಲಿ ನೆಲಸಿದ್ದನು.

ಮೂಲತಃ ಜಮ್ಮು ಕಾಶ್ಮೀರದವನೇ ಆದ ತಾಲೀಬ್ ಹುಸೇನ್, ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಆಗಿದ್ದ. ಜಮ್ಮು ಮತ್ತು ಕಾಶ್ಮೀರ್ ಪೊಲೀಸರು ಹಾಗೂ 17 ನೇ ರಾಷ್ಟ್ರೀಯ ರೈಫಲ್ಸ್ ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಈತ ಪೊಲೀಸರ ಹಿಟ್ ಲಿಸ್ಟ್‌ನಲ್ಲಿದ್ದ ಎಂದು ಮಾಹಿತಿ ದೊರೆತಿದೆ. 

ಈ ತ ಬೆಂಗಳೂರಿನಲ್ಲಿ ಬಿಎನ್ಎಲ್‌ ಏರ್ ಸರ್ವಿಸ್ ಲೋಡಿಂಗ್ ಅನ್ ಲೋಡಿಂಗ್ ಕೆಲಸ ಮಾಡಿಕೊಂಡಿದ್ದ. ನಗರದಲ್ಲಿ ಪತ್ನಿ ಮತ್ತು 3 ಜನ ಮಕ್ಕಳ ಜೊತೆಗೆ ವಾಸವಿದ್ದ. ಓಕಳಿಪುರಂ ಮಸೀದಿ ಮುಖ್ಯಸ್ಥ ಅನ್ವರ್ ಪಾಷ ಈ ತನಿಗೆ ಆಶ್ರಯ ನೀಡಿದ್ದರಂತೆ. ಮಸೀದಿಯಲ್ಲಿ ಪಾಠ ಪ್ರವಚನ ಮಾಡುತ್ತಿದ್ದ ಎಂಬ ಶಂಕೆ ಕೂಡ ವ್ಯಕ್ತವಾಗಿದೆ. ಸದ್ಯ ತಾಲಿಬ್​ನನ್ನು ಬಂಧಿಸಿರುವ ಪೊಲೀಸರು, ಕಾಶ್ಮೀರಕ್ಕೆ ಕರೆದುಕೊಂಡು ಹೋಗಿದ್ದಾರೆ.

ಇದನ್ನೂ ಓದಿ: ಪ್ರವಾದಿ ಮೊಹಮ್ಮದ್ ಬಗ್ಗೆ ಬಿಜೆಪಿ ನಾಯಕರ ಹೇಳಿಕೆ: ಭಾರತೀಯ ರಾಯಭಾರಿಗೆ ಸಮನ್ಸ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News