ಬಿಟ್ ಕಾಯಿನ್ ಹಗರಣದಲ್ಲಿ ಸಾಕ್ಷ್ಯನಾಶ ಶಂಕೆ: ಸಿಸಿಬಿ ಮೇಲೆ ಎಸ್ಐಟಿಯಿಂದ ದೂರು
Bitcoin scam: ಎಸ್ಐಟಿ ತನಿಖೆಯನ್ನ ಚುರುಕುಗೊಳಿಸದ ಬೆನ್ನಲ್ಲೇ ಸಿಸಿಬಿಯಲ್ಲಿ ಕೆಲ ಅಧಿಕಾರಿಗಳು ಸಾಕ್ಷ್ಯ ನಾಶ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸೀಜ್ ಮಾಡಿದ್ದ ಎಲೆಕ್ಟ್ರಾನಿಕ್ ಡಿವೈಸ್ ನಲ್ಲಿ ಹೆಚ್ಚುವರಿ ಫೈಲ್ ಓಪನ್ ಆಗಿರೋದು ಪತ್ತೆಯಾಗಿದೆ.
ಬೆಂಗಳೂರು: ಬಿಟ್ ಕಾಯಿನ್ ಹಗರಣದ ತನಿಖೆ ನಡೆಸಿದ್ದ ಸಿಸಿಬಿ ಬಿರಿಪೋರ್ಟ್ ಸಲ್ಲಿಕೆ ಮಾಡಿತ್ತು. ಆದರೆ ಎಸ್ಐಟಿ ತನಿಖೆಯನ್ನ ಚುರುಕುಗೊಳಿಸದ ಬೆನ್ನಲ್ಲೇ ಸಿಸಿಬಿಯಲ್ಲಿ ಕೆಲ ಅಧಿಕಾರಿಗಳು ಸಾಕ್ಷ್ಯ ನಾಶ ಮಾಡಿರುಬ ಶಂಕೆ ವ್ಯಕ್ತವಾಗಿದೆ. ಸೀಜ್ ಮಾಡಿದ್ದ ಎಲೆಕ್ಟ್ರಾನಿಕ್ ಡಿವೈಸ್ ನಲ್ಲಿ ಹೆಚ್ಚುವರಿ ಫೈಲ್ ಓಪನ್ ಆಗಿರೋದು ಪತ್ತೆಯಾಗಿದೆ. ಈ ಹಿನ್ನೆಲೆ ಎಸ್ ಐಟಿ ಡಿವೈಎಸ್ಪಿ ರವಿಶಂಕರ್ ಕಾಟನ್ ಪೇಟೆ ಠಾಣೆಯಲ್ಲಿ ಸಿಸಿಬಿಯ ಕೆಲ ಅಧಿಕಾರಿಗಳ ವಿರುದ್ಧ ಎಫ್ ಐ ಆರ್ ದಾಖಲಿಸಿದ್ದಾರೆ. 2 ಪೆನ್ ಡ್ರೈವ್, ಹಾರ್ಡ್ ಡಿಸ್ಕ್ , ಹಾಗೂ ಆ್ಯಪಲ್ ಮ್ಯಾಕ್ ಬುಕ್ ನಲ್ಲಿ ಮೂಲ ಫೈಲ್ ಅಲ್ಲದೇ ಇಲ್ಲದೇ ಇರುವ ಫೈಲ್ ಸೃಷ್ಟಿಸಿರೋದು ಎಸ್ಐಟಿ ತನಿಖೆಯಲ್ಲಿ ಗೊತ್ತಾಗಿದೆ.
ಇದನ್ನೂ ಓದಿ: ಗೋವಾ ಕ್ಯಾಸಿನೋದಲ್ಲಿ 25 ಲಕ್ಷ ಗೆದ್ದ ಟೀ ಮಾರುವ ವ್ಯಕ್ತಿ, ನಂತರ ಆಗಿದ್ದೆ ಬೇರೆ..!
ಪ್ರಕರಣದ ತನಿಖೆಯನ್ನ ಸಿಸಿಬಿ ಕೈಗೆತ್ತಿಕೊಂಡ ಬಳಿಕವೇ ಸಾಕ್ಷ್ಯಗಳನ್ನ ತಿರುಚಿ ಟ್ಯಾಂಪರಿಂಗ್ ಮಾಡಿರೋದು ತನಿಖೆ ವೇಳೆ ಬಯಲಾಗಿದೆ. ಸೆಪ್ಟಂಬರ್ 9, 2020 ರಿಂದ ಡಿಸೆಂಬರ್ 16, 2020 ರ ಅವಧಿಯಲ್ಲಿ ಸಿಸಿಬಿ ಕಚೇರಿ ಹಾಗೂ ಇತರೆಡೆ ಅಕ್ರಮ ನಡೆದಿದ್ದು, ಸಿಸಿಬಿ ತನಿಖಾಧಿಕಾರಿಗಳು ಹಾಗೂ ಇತರೆ ಅಧಿಕಾರಿಗಳು ಒಳಸಂಚು ರೂಪಿಸಿ ಅಧಿಕಾರ ದುರುಪಯೋಗ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಎಫ್ಎಸ್ಎಲ್ ರಿಪೋರ್ಟ್ ನಲ್ಲಿ ಹೊಸ ಫೈಲ್ ಸೃಷ್ಟಿ ಬಗ್ಗೆ ಎಸ್ಐಟಿಗೆ ವರದಿ ನೀಡಿದೆ.
ಇನ್ನೂ ಅಂದು ತನಿಖೆ ನಡೆಸಿದ್ದ ಹಿರಿಯ ಅಧಿಕಾರಿಗಳಿಂದ ಹಿಡಿದು ಕಿರಿಯ ಅಧಿಕಾರಿಗಳ ಎದೆಯಲ್ಲಿ ನಡುಕ ಶುರುವಾಗಿದೆ. ಯಾವುದೇ ಕ್ಷಣದಲ್ಲಾದ್ರು ಎಸ್ಐಟಿ ಅಧಿಕಾರಿಗಳು ಸಿಸಿಬಿ ಅಧಿಕಾರಿಗಳಿಗೆ ನೋಟಿಸ್ ನೀಡಿ ವಿಚಾರಣೆಗೆ ಕರೆಸುವ ಸಾಧ್ಯತೆ ಇದೆ. ಸದ್ಯ ಬಿರಿಪೋರ್ಟ್ ಸಲ್ಲಿಕೆ ಮಾಡಿದ್ದ ಸಿಸಿಬಿ ಅಧಿಕಾರಿಗಳಿಗೆ ನಡುಕ ಶುರುವಾಗಿದ್ದು, ಪ್ರಕರಣ ಯಾವ ಹಂತಕ್ಕೆ ತಲುಪುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: ಗುತ್ತಿಗೆದಾರರ 40% ಆರೋಪ ಸತ್ಯ, 15% ಆರೋಪ ಸುಳ್ಳು : ಸಚಿವ ರಾಮಲಿಂಗಾ ರೆಡ್ಡಿ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ