ಹೈದರಾಬಾದ್: ತೆಲಂಗಾಣ ಶಾಸಕಿ ಲಾಸ್ಯ ನಂದಿತಾ ಅವರು ಪ್ರಯಾಣಿಸುತ್ತಿದ್ದ SUV ಶುಕ್ರವಾರ ಹೈದರಾಬಾದ್‌ನಲ್ಲಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾರೆ. 10 ದಿನಗಳ ಹಿಂದಷ್ಟೇ ನರ್ಕಟ್‌ಪಲ್ಲಿಯಲ್ಲಿ ನಡೆದ ಅಪಘಾತದಲ್ಲಿ 37ರ ಹರೆಯದ ಭಾರತ್ ರಾಷ್ಟ್ರ ಸಮಿತಿ (BRS) ನಾಯಕಿ ಪ್ರಾಣಾಪಾಯದಿಂದ ಪಾರಾಗಿದ್ದರು.


COMMERCIAL BREAK
SCROLL TO CONTINUE READING

ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಭಾಷಣ ಮಾಡುತ್ತಿದ್ದ ರ‍್ಯಾಲಿಗೆ ತೆರಳುತ್ತಿದ್ದ ವೇಳೆ ಪಾನಮತ್ತ ಚಾಲಕನೊಬ್ಬ ಆಕೆಯ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ. ಈ ಅಪಘಾತದಲ್ಲಿ ಆಕೆಯ ಹೋಮ್ ಗಾರ್ಡ್ ಸಾವಿಗೀಡಾಗಿದ್ದು, ಆಕೆಗೆ ಸಣ್ಣಪುಟ್ಟ ಗಾಯಗಳಾಗಿತ್ತು.


ಇದನ್ನೂ ಓದಿ: ವನ್ಯಜೀವಿ ಸಂರಕ್ಷಣಾ ಕಾಯ್ದೆಯಲ್ಲಿ ತಿದ್ದುಪಡಿ ತರುವ ಅಗತ್ಯವಿಲ್ಲ : ಸಚಿವ ಭೂಪೇಂದ್ರ ಯಾದವ್ ಹೇಳಿಕೆ


ಹೈದರಾಬಾದ್‌ನ ಹೊರ ವರ್ತುಲ ರಸ್ತೆಯಲ್ಲಿ ಆಕೆಯ ವಾಹನ ಮಾರುತಿ XL 6 ಚಾಲಕನ ನಿಯಂತ್ರಣ ತಪ್ಪಿ ಲೋಹದ ಡಿವೈಡರ್‌ಗೆ ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿದೆ. ಲಾಸ್ಯ ನಂದಿತಾ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶುಕ್ರವಾರ ಮುಂಜಾನೆ 5.30ಕ್ಕೆ ಈ ಘಟನೆ ನಡೆದಿದೆ. ಎರಡೂ ಅಪಘಾತಗಳ ಕುರಿತು ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


ಸಿಕಂದರಾಬಾದ್ ಕಂಟೋನ್ಮೆಂಟ್ (SC) ಶಾಸಕರಾಗಿದ್ದ ಲಾಸ್ಯ ಅವರನ್ನು ಅಪಘಾತ ಸ್ಥಳದಿಂದ ಆಸ್ಪತ್ರೆಗೆ ಸಾಗಿಸಲಾಗಿತ್ತು. ಅಲ್ಲಿಗೆ ಬರುವಾಗಲೇ ಶಾಸಕಿ ಕೊನೆಯುಸಿರೆಳೆದಿರುವುದಾಗಿ ವೈದ್ಯರು ಘೋಷಿಸಿದ್ದಾರೆ. 1986ರಲ್ಲಿ ಹೈದರಾಬಾದ್‌ನಲ್ಲಿ ಜನಿಸಿದ ಲಾಸ್ಯ ನಂದಿತಾ ಸುಮಾರು ದಶಕದ ಹಿಂದೆ ರಾಜಕೀಯಕ್ಕೆ ಕಾಲಿಟ್ಟಿದ್ದರು. 2023ರ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಸಿಕಂದರಾಬಾದ್ ಕಂಟೋನ್ಮೆಂಟ್‌ನಿಂದ ಶಾಸಕರಾಗಿ ಆಯ್ಕೆಯಾಗುವ ಮೊದಲು ಅವರು ಕವಾಡಿಗುಡ ವಾರ್ಡ್‌ನಲ್ಲಿ ಕಾರ್ಪೊರೇಟರ್ ಆಗಿ ಸಹ ಸೇವೆ ಸಲ್ಲಿಸಿದ್ದರು.


ಇದನ್ನೂ ಓದಿ: 9 ರಿಂದ 12ನೇ ತರಗತಿಗಳ ಆಯ್ದ ಶಾಲೆಗಳಲ್ಲಿ ಪ್ರಾಯೋಗಿಕವಾಗಿ ತೆರೆದ ಪುಸ್ತಕ ಪರೀಕ್ಷೆ ಚಾಲನೆಗೆ ಯೋಜನೆ : ಸಿಬಿಎಸ್ಇ


ತೆಲಂಗಾಣ ಮುಖ್ಯಮಂತ್ರಿ, BRS ಮುಖ್ಯಸ್ಥ ಕೆ.ಚಂದ್ರಶೇಖರ್ ರಾವ್, ರಾಜ್ಯ ಬಿಜೆಪಿ ಅಧ್ಯಕ್ಷ ಜಿ.ಕಿಶನ್ ರೆಡ್ಡಿ ಮತ್ತು ತೆಲಂಗಾಣದ ಹಲವಾರು ಸಚಿವರು ಮತ್ತು ಮುಖಂಡರು ಲಾಸ್ಯ ನಂದಿತಾರದ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ. ಲಾಸ್ಯ ನಂದಿತಾರ ಸಾವಿನ ಬಗ್ಗೆ ದುಃಖ ವ್ಯಕ್ತಪಡಿಸಿರುವ ಸಿಎಂ ರೇವಂತ್ ರೆಡ್ಡಿಯವರು, ಆಕೆಯ ತಂದೆ ಜಿ.ಸಾಯಣ್ಣರೊಂದಿಗಿನ ನಿಕಟ ಒಡನಾಟವನ್ನು ಸ್ಮರಿಸಿದ್ದಾರೆ. ಕಳೆದ ವರ್ಷ ಫೆಬ್ರವರಿಯಲ್ಲಿ ಸಾಯಣ್ಣ ಮೃತಪಟ್ಟಿದ್ದು, ಅದೇ ತಿಂಗಳಲ್ಲಿ (ಒಂದು ವರ್ಷದ ಅವಧಿಯಲ್ಲಿ) ಲಾಸ್ಯ ನಂದಿತಾ ಕೂಡ ಸಾವಿಗೀಡಾಗಿದ್ದು, ಅನೇಕರಿಗೆ ಆಘಾತವುಂಟು ಮಾಡಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.