ತಂಗಿಯ ಪರೀಕ್ಷೆಗೆ ಸಹಾಯ ಮಾಡಲು ನಕಲಿ ಪೊಲೀಸ್‌ ಆಗಿ ಪರೀಕ್ಷಾ ಕೇಂದ್ರಕ್ಕೆ ಎಂಟ್ರಿ ಕೊಟ್ಟ ಅಣ್ಣ!

ಅನುಪಮ್‌ ಮದನ್ ಎಂಬಾತ ತನ್ನ ತಂಗಿಗೆ ಪರೀಕ್ಷೆಯಲ್ಲಿ ಕಾಪಿ ಮಾಡಲು ನೆರವಾಗಲು ಪೊಲೀಸ್‌ ಧಿರಿಸಿನಲ್ಲಿ ಶಾಲೆಗೆ ಬಂದಿದ್ದ. ಪರೀಕ್ಷಾ ಕೇಂದ್ರದ ಭದ್ರತೆಗೆ ನಿಂತು ಅಲ್ಲಿಂದ ಉತ್ತರ ಪತ್ರಿಕೆಯನ್ನು ತೆಗೆದುಕೊಂಡು ಹೋಗಲು ಆತ ಪ್ಲ್ಯಾನ್‌ ಮಾಡಿಕೊಂಡಿದ್ದನಂತೆ.

Written by - Puttaraj K Alur | Last Updated : Feb 23, 2024, 06:34 PM IST
  • ತಂಗಿ ಪರೀಕ್ಷೆಯಲ್ಲಿ ಕಾಪಿ ಮಾಡಲೆಂದು ನಕಲಿ ಪೊಲೀಸ್‌ ಆಗಿ ಪರೀಕ್ಷಾ ಕೇಂದ್ರಕ್ಕೆ ಹೋದ ಅಣ್ಣ
  • ಪರೀಕ್ಷಾ ಭದ್ರತೆ ಪರಿಶೀಲಿಸಲು ಆಗಮಿಸಿದ ಪೊಲೀಸ್‌ ಅಧಿಕಾರಿಗಳಿಗೆ ಸೆಲ್ಯೂಟ್‌ ಹೊಡದ ವ್ಯಕ್ತಿ
  • ನಕಲಿ ಸೆಲ್ಯೂಟ್‌ ಬಗ್ಗೆ ಅನುಮಾನಗೊಂಡು ವ್ಯಕ್ತಿಯನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸರು
ತಂಗಿಯ ಪರೀಕ್ಷೆಗೆ ಸಹಾಯ ಮಾಡಲು ನಕಲಿ ಪೊಲೀಸ್‌ ಆಗಿ ಪರೀಕ್ಷಾ ಕೇಂದ್ರಕ್ಕೆ ಎಂಟ್ರಿ ಕೊಟ್ಟ ಅಣ್ಣ! title=
ʼಸೆಲ್ಯೂಟ್‌ʼ ಹೊಡೆದವನ ಬಂಧನ!

ನವದೆಹಲಿ: ತನ್ನ ಸಹೋದರಿಗೆ 2nd PUC ತರಗತಿ ಪರೀಕ್ಷೆಯಲ್ಲಿ ನಕಲು ಮಾಡಲು ಸಹಾಯ ಮಾಡಲು ಯುವಕನೊಬ್ಬ ಪೊಲೀಸ್‌ ಸಮವಸ್ತ್ರ‌ ಧರಿಸಿ ಪರೀಕ್ಷಾ ಕೇಂದ್ರಕ್ಕೆ ಹೋಗಿ ಸಿಕ್ಕಿಬಿದ್ದಿರುವ ಘಟನೆ ನಡೆದಿದೆ. ಪೊಲೀಸ್‌ ಭದ್ರತಾ ಕಾರ್ಯ ನಿರ್ವಹಿಸುವಂತೆ ನಟಿಸಿ ಅನುಪಮ್ ಮದನ್ ಖಂಡಾರೆ (24) ಎಂಬಾತ ಪೊಲೀಸರ ಕೈಗೆ ಸಿಕ್ಕಿಬಿದಿದ್ದಾನೆ. ಮಹಾರಾಷ್ಟ್ರದ ಅಕೋಲಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

ಪಾತೂರು ಪಟ್ಟಣದ ಶಹಬಾಬು ಉರ್ದು ಪ್ರೌಢಶಾಲೆಯಲ್ಲಿ 12ನೇ ತರಗತಿಯ ಮೊದಲ ಪರೀಕ್ಷೆಯ ವೇಳೆ ಈ ಘಟನೆ ನಡೆದಿದೆ. ಪಾಂಗ್ರಾ ಬಂಡಿಯಿಂದ ಬಂದ ಅನುಪಮ್‌ ಮದನ್, ತನ್ನ ತಂಗಿಗೆ ಪರೀಕ್ಷೆಯಲ್ಲಿ ಕಾಪಿ ಮಾಡಲು ನೆರವಾಗಲು ಪೊಲೀಸ್‌ ಧಿರಿಸಿನಲ್ಲಿ ಶಾಲೆಗೆ ಬಂದಿದ್ದ. ಪರೀಕ್ಷಾ ಕೇಂದ್ರದ ಭದ್ರತೆಗೆ ನಿಂತು ಅಲ್ಲಿಂದ ಉತ್ತರ ಪತ್ರಿಕೆಯನ್ನು ತೆಗೆದುಕೊಂಡು ಹೋಗಲು ಆತ ಪ್ಲ್ಯಾನ್‌ ಮಾಡಿಕೊಂಡಿದ್ದನಂತೆ.

ಇದನ್ನೂ ಓದಿ: NPS New Rule:ಏಪ್ರಿಲ್ 1 ರಿಂದ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಲ್ಲಿ ಹೊಸ ನಿಯಮಗಳು ಜಾರಿ..!

ಈ ವೇಳೆ ಪರೀಕ್ಷಾ ಕೇಂದ್ರಕ್ಕೆ ಪೊಲೀಸ್ ಇನ್ಸ್‌ಪೆಕ್ಟರ್ ಕಿಶೋರ್ ಶೆಲ್ಕೆ ಮತ್ತು ಅವರ ತಂಡವು ಆಗಮಿಸಿ ಭದ್ರತೆಯನ್ನು ಪರಿಶೀಲನೆ ನಡೆಸಿತ್ತು. ನಿಜವಾದ ಪೊಲೀಸರನ್ನು ಕಂಡು ಅನುಪಮ್‌ ಮದನ್‌ ಸೆಲ್ಯೂಟ್‌ ಹೊಡೆದಿದ್ದಾನೆ. ಆದರೆ ಆತ ನೀಡಿದ ಸೆಲ್ಯೂಟ್‌ನಿಂದಲೇ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಅನುಪಮ್‌ ಮದನ್‌ ಮಾಡಿದ ಸೆಲ್ಯೂಟ್ ಪ್ರೋಟೋಕಾಲ್‌ಗೆ ಅನುಗುಣವಾಗಿರಲಿಲ್ಲ. ಆತನ ಸಮವಸ್ತ್ರದ ಮೇಲಿನ ನಾಮಫಲಕ ಸಹ ತಪ್ಪಾಗಿತ್ತು. ಈ ಕಾರಣದಿಂದ ಅಧಿಕಾರಿಗಳಿಗೆ ಆತನ ಮೇಲೆ ಅನುಮಾನ ಮೂಡಿತ್ತು. ಈ ಬಗ್ಗೆ ಪೊಲೀಸರು ಕೂಲಂಕಷವಾಗಿ ತನಿಖೆ ನಡೆಸಿದ್ದಾರೆ. ಆತನ ಜೇಬಿನಲ್ಲಿ ಇಂಗ್ಲಿಷ್ ಪರೀಕ್ಷೆಯ ಪತ್ರಿಕೆಯ ಪ್ರತಿಯನ್ನು ಪತ್ತೆ ಹಚ್ಚಿದ್ದಾರೆ.

ಇದನ್ನೂ ಓದಿ:  ಬೈಜುಸ್ ವಿರುದ್ಧ ನಾಲ್ವರು ಹೂಡಿಕೆದಾರರಿಂದ ಕಾನೂನು ಕ್ರಮ!: ರವೀಂದ್ರನ್ ಪದಚ್ಯುತಿಗೆ ಆಗ್ರಹ

ಈ ವೇಳೆ ತಂಗಿಯ ಪರೀಕ್ಷೆಗೆ ಸಹಾಯ ಮಾಡಲು ನಕಲಿ ಪೊಲೀಸ್‌ ವೇಷ ಧರಿಸಿದ್ದ ಅನುಪಮ್‌ ಮದನ್‌ ವಂಚನೆಯ ಕೃತ್ಯ ಬೆಳಕಿಗೆ ಬಂದಿದೆ. ಬಳಿಕ ಪೊಲೀಸರು ಆತನನ್ನು ಬಂಧಿಸಿದ್ದು, ಆತನ ವಿರುದ್ಧ 1982ರ ಕಾಯ್ದೆಯ ಸೆಕ್ಷನ್ 417, 419, 170, 171 ಮತ್ತು ಸೆಕ್ಷನ್ 7ರ ಅಡಿ ಪ್ರಕರಣ ದಾಖಲಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News