ಬೆಂಗಳೂರು: ಬೆಂಗಳೂರು ಮತ್ತು ತಮಿಳುನಾಡಿನಲ್ಲಿ ಕಳ್ಳತನ ಮಾಡಿ ಪೊಲೀಸರಿಗೆ ತಲೆ ನೋವಾಗಿದ್ದ ಇಬ್ಬರು ಕಳ್ಳ ಸಹೋದರರು ಸೇರಿ ಮೂವರು ಆರೋಪಿಗಳನ್ನ ಹೆಣ್ಣೂರು ಪೊಲೀಸರು ಬಂಧಿಸಿದ್ದಾರೆ. 


COMMERCIAL BREAK
SCROLL TO CONTINUE READING

ಗುಣಶೇಖರ್ ಅಲಿಯಾಸ್ ಕೊರಂಗು, ಅಜಿತ್ ಹಾಗೂ ಮುತ್ತುಕುಮಾರ್‌ ಬಂಧಿತರು. ಆರೋಪಿಗಳು ಬೀಗ ಹಾಕಿದ ಮನೆಗಳನ್ನ ದೂರದಿಂದಲೇ ಅನೇಕ ದಿನಗಳ ಕಾಲ ವಾಚ್‌ ಮಾಡುತ್ತಿದ್ದರು. ನಂತರ ಮನೆಯಲ್ಲಿ ಯಾರು ಇಲ್ಲದಿರುವುದನ್ನು ಗಮನಿಸಿ ಕಳ್ಳತನ ಮಾಡುತ್ತಿದ್ದರು. ಕದ್ದ ವಸ್ತಗಳನ್ನು ಕಡಿಮೆ ಬೆಲೆಗೆ ಮಾರಿ ಐಷಾರಾಮಿ ಜೀವನ ನಡೆಸಲು ಹಾಗೂ ಮಾದಕ ವಸ್ತು ಸೇವೆನೆಗೆ ಹಣ ವ್ಯಯಿಸುತ್ತಿದ್ದರು. ಬ್ಲಡ್ ಶುಗರ್ ನಿಯಂತ್ರಣದಲ್ಲಿ ಇಲ್ಲವಾದರೆ ಎದುರಾಗುವುದು ಈ ಸಮಸ್ಯೆಗಳು. !


ಇನ್ನೂ ಆರೋಪಿ ಗುಣಶೇಖರ್ ಬಾಲ್ಯದಿಂದಲೇ ಕಳ್ಳತನಕ್ಕೆ ಮಾಡುವ ಚಾಳಿಗೆ ಇಳಿದಿದ್ದ. ತಮಿಳುನಾಡಿನಲ್ಲಿ ಕೋಳಿ ಜೂಜಾಡಲು ಕಳ್ಳತನದ ಹಣ ಬಳಕೆ ಮಾಡುತ್ತಿದ್ದ. ಹೀಗೆ ಈ ಕಳ್ಳ ಸಹೋದದರು ಸಿಲಿಕಾನ್‌ ಸಿಟಿಯ ಹೆಣ್ಣೂರು, ಕೊತ್ತನೂರಿನಲ್ಲಿ ಮನೆಯ ಬಾಲ್ಕನಿ ಸ್ಲೈಡಿಂಗ್ ಡೋರ್ ಬ್ರೇಕ್ ಮಾಡಿ ಚಿನ್ನಾಭರಣ ದೋಚಿದ್ದರು. ಪೊಲೀಸರು ಮೊಬೈಲ್‌ ನಂಬರ್‌ ಟ್ರ್ಯಾಪ್‌ ಮಾಡಬಾರದು ಅಂತಾ ವಾಟ್ಸ್‌ ಆಪ್‌ ಕರೆ ಮಾಡುತ್ತಿದ್ದರು. ಬೆಂಗಳೂರಿನಲ್ಲಿ ಕದ್ದ ಚಿನ್ನಾಭರಣವನ್ನು ತಮಿಳುನಾಡಿನಲ್ಲಿ ಮಾರಾಟ ಮಾಡಿದ್ದರು.


ಇದನ್ನೂ ಓದಿ-New Bike Launch: ಹಬ್ಬಕ್ಕೆ ಬೈಕ್ ಖರೀದಿಸಬೇಕೆ? ಸದ್ದಿಲ್ಲದೇ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಈ ಹೊಚ್ಚ ಹೊಸ ಬೈಕ್, ಇಂದೇ ಬುಕ್ ಮಾಡಿ


ಈ ಹಿಂದೆಯೂ ಕಳ್ಳತನ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸಿ ಬೇಲ್‌ ಪಡೆದು ಬಂದು ಮತ್ತದೇ ಪ್ರವೃತ್ತಿ ಮುಂದುವರೆಸಿದ್ದರು. ಸದ್ಯ ಹೆಣ್ಣೂರು ಪೊಲೀಸರು ಫಿಂಗರ್‌ ಪ್ರಿಂಟ್‌ ಆಧಾರದಲ್ಲಿ ಕಳ್ಳರನ್ನು ಬಂಧಿಸಿ 49 ಲಕ್ಷ ಮೌಲ್ಯದ 1.1 ಕೆಜಿ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಆರೋಪಗಳ ಮೇಲೆ ಒಟ್ಟು ಹದಿನಾಲ್ಕು ಪ್ರಕರಣಗಳಿರುವ ಅಂಶ ಬೆಳಕಿಗೆ ಬಂದಿದ್ದು, ಮಕ್ಕಳ ಕಳ್ಳತನ ವೃತ್ತಿಗೆ ಪೋಷಕರ ಸಾಥ್ ಕೊಡುತ್ತಿದ್ದರು ಎಂಬುದು ಸಹ ತನಿಖೆಯಲ್ಲಿ ಗೊತ್ತಾಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.