ಬೆಂಗಳೂರು: ಮನೆಯಲ್ಲಿ‌ ಮಲಗಿದ್ದ ಮಗಳನ್ನು ಯಾರೋ ಅಪಹರಿಸಿದ್ದಾರೆ ಎಂದು ಪೋಷಕರು ದೂರು ಕೊಟ್ಟು ಪೊಲೀಸರಿಗೆ ತಲೆ ನೋವು ತಂದಿರುವ ಪ್ರಸಂಗ ಬೆಳಕಿಗೆ ಬಂದಿದೆ.‌


COMMERCIAL BREAK
SCROLL TO CONTINUE READING

ಬೆಂಗಳೂರಿನ ಕೆ.ಆರ್‌.ಪುರದ ಜನತಾ ಕಾಲೋನಿಯ ನಿವಾಸಿಗಳಾದ ಮೀನಾ ದಂಪತಿ ಮನೆಯಲ್ಲೇ ಇದ್ದ ತಮ್ಮ 6 ವರ್ಷದ ಮಗಳಿಗಾಗಿ ಪೊಲೀಸರ ಜತೆ ಸೇರಿ ಊರೆಲ್ಲಾ ಹುಡುಕಿದ್ದಾರೆ. ಕೊನೆಗೆ ಮನೆಗೆ ವಾಪಸ್‌ ಬಂದು ನೋಡಿದಾಗ ಬಾಲಕಿ ಮನೆಯಲ್ಲೇ ಇರುವುದನ್ನು ಕಂಡು ನಿಟ್ಟುಸಿರು ಬಿಟ್ಟಿದ್ದಾರೆ. 


ಮೀನಾ ದಂಪತಿಗೆ 6 ವರ್ಷದ ಮುದ್ದಾದ ಮಗಳಿದ್ದಾಳೆ. ಆದರೆ ನನ್ನ ಮಗು ಕಿಡ್ನ್ಯಾಪ್‌ ಆಗಿದೆ ಎಂದು ನಿನ್ನೆ ರಾತ್ರಿ 7.30 ಕ್ಕೆ ಕೆ.ಆರ್‌.ಪುರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. ಮಗು ಮನೆ ಮುಂದೆ ಆಟವಾಡುತ್ತಿದಾಗ ಕಾಣೆಯಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು. ಮಗಳನ್ನು ಎಲ್ಲಾ ಕಡೆ ಹುಡುಕಾಟ ನಡೆಸಿದ್ರೂ ಸಿಗಲಿಲ್ಲ. ಹೀಗಾಗಿ ಕಂಪ್ಲೇಟ್ ಕೊಡಲು ಬಂದಿದ್ದೇವೆ ಎಂದು ಪೋಷಕರು ಕಣ್ಣೀರು ಹಾಕಿದ್ದಾರೆ. 


ಇದನ್ನೂ ಓದಿ- Crime News: ಗರ್ಭಿಣಿಯನ್ನು ಬಲಿ ಪಡೆದ ಆಟೋ ರಿಕ್ಷಾ 


ತಕ್ಷಣ ಪೊಲೀಸರು ಹುಡುಕಾಟ ಆರಂಭಿಸಿದಾಗ ಪೊಲೀಸರ ಜೊತೆ ಮಗಳಿಗಾಗಿ ಪೋಷಕರು ಅಕ್ಕಪಕ್ಕದ ಏರಿಯಾಗಳಲ್ಲೆಲ್ಲಾ ಹುಡುಕಾಟ ನಡೆಸಿದ್ದಾರೆ. ನಂತರ ಕಿಡ್ನಾಪ್ ಆದ ಸ್ಥಳದಲ್ಲಿ ಏನಾದರೂ ಮಾಹಿತಿ ಸಿಗಬಹುದಾ ಎಂದು ಹುಡುಕಲು ಪೊಲೀಸರು ತೆರಳಿದ್ದಾರೆ. ಈ ವೇಳೆ ಮನೆಯಲ್ಲೇ ಬಾಲಕಿ ನಿದ್ದೆ ಮಾಡುತ್ತಿರುವುದು ತಿಳಿದುಬಂದಿದೆ. ಮನೆಯಲ್ಲಿ ಗುಡ್ಡೆ ಹಾಕಿದ್ದ ಬಟ್ಟೆಗಳ ಅಡಿಯಲ್ಲಿ ತಮ್ಮ ಮಗಳು ಮಲಗಿರುವುದನ್ನು ಕಂಡು ಮೀನಾ ದಂಪತಿ ನಿಟ್ಟುಸಿರು ಬಿಟ್ಟಿದ್ದಾರೆ. 


ಇದನ್ನೂ ಓದಿ- ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಸಿದ ಪಿಎಸ್ಐ ಸಸ್ಪೆಂಡ್: ಎಫ್ಐಆರ್ ದಾಖಲಿಸಿ ತನಿಖೆ


ಬಾಲಕಿ ಮಲಗಿದ್ದಾಗ ತಾಯಿ ಒಣಗಿದ್ದ ಬಟ್ಟೆಯನ್ನು ಬಾಲಕಿ ಮೇಲೆ ತಂದು ಹಾಕಿದ್ದರು. ಮಗು ಮಲಗಿ ಚೆನ್ನಾಗಿ ನಿದ್ರಿಸುತ್ತಿತ್ತು. ತಾಯಿ ಬಟ್ಟೆ ಹಾಕಿದ್ರೂ ಎಚ್ಚರಗೊಂಡಿರಲಿಲ್ಲ. ಆದರೆ ಮಗಳು ಬಟ್ಟೆಯಲ್ಲಿ ಮರೆಯಾಗಿರುವುದನ್ನು ಗಮನಿಸಿದೇ ಮಗಳನ್ನು ಯಾರೋ ಅಪಹರಿಸಿದ್ದಾರೆ ಎಂದು ದೂರು ನೀಡಿ ಪೇಚಿಗೆ ಸಿಲುಕಿ ಬೇಜಾವಾಬ್ದಾರಿ ಮೆರೆದಿದ್ದಾರೆ. ಇನ್ನೂ ದಂಪತಿಯ ದೂರಿನಿಂದ  ಪೊಲೀಸರು ಸಹ ಬಾಲಕಿಯನ್ನು ಹುಡುಕಿ ಸುಸ್ತಾಗಿ ಸದ್ಯ ನಿಟ್ಟುಸಿರು ಬಿಟ್ಟಿದ್ದಾರೆ‌.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.