ಚಿನ್ನಾಭರಣ, ಹಣ, ಬೈಕ್, ಮೋಟರ್ ಕಳ್ಳತನ ಪ್ರಕರಣ: ಕಳುವಾಗಿದ್ದ ವಸ್ತುಗಳು ಮಾಲೀಕರಿಗೆ ವಾಪಸ್
Belgaum News: ಒಂದು ವರ್ಷದಲ್ಲಿ ಬೆಳಗಾವಿ ನಗರದ ವಿವಿಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಚಿನ್ನಾಭರಣ, ಹಣ ಕಳ್ಳತನ, ಬೈಕ್ ಕಳ್ಳತನ, ಮೋಟರ್ ಕಳ್ಳತನ ಪ್ರಕರಣಗಳನ್ನು ಬೇಧಿಸಿರುವ ಪೊಲೀಸರು.
ಬೆಳಗಾವಿ: ಬೆಳಗಾವಿ ನಗರದ ವಿವಿಧ ಪೊಲೀಸ್ ಠಾಣೆಯಲ್ಲಿ ದಾಖಲಾದ ಕಳ್ಳತನ ಪ್ರಕರಣಗಳನ್ನು ಬೇಧಿಸಿರುವ ಪೊಲೀಸರು ವಶಪಡಿಸಿಕೊಂಡು ವಸ್ತುಗಳನ್ನು ಮಾಲೀಕರಿಗೆ ಹಸ್ತಾಂತರಿಸಿದ್ದಾರೆ.
ಒಂದು ವರ್ಷದಲ್ಲಿ ಬೆಳಗಾವಿ ನಗರದ ವಿವಿಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಚಿನ್ನಾಭರಣ, ಹಣ ಕಳ್ಳತನ, ಬೈಕ್ ಕಳ್ಳತನ, ಮೋಟರ್ ಕಳ್ಳತನ ಪ್ರಕರಣಗಳನ್ನು ಬೇಧಿಸಿರುವ ಪೊಲೀಸರು, ಇಂದು ನಗರದ ಡಿಆರ್ ಗ್ರೌಂಡ್ ನಲ್ಲಿ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟನ್ ಅವರ ನೇತೃತ್ವದಲ್ಲಿ ಕಳುವಾಗಿದ್ದ ವಸ್ತುಗಳನ್ನು ಮಾಲೀಕರಿಗೆ ಹಸ್ತಾಂತರಿಸಿದರು.
ಇದನ್ನೂ ಓದಿ- ರಸ್ತೆ ಬದಿ ನಿಂತು ಜಗಳವಾಡ್ತಿದ್ದವರಿಗೆ ವೋಲ್ವೋ ಬಸ್ ಡಿಕ್ಕಿ, ಇಬ್ಬರು ಸ್ಥಳದಲ್ಲೇ ಸಾವು!
ಒಂದು ವರ್ಷದಲ್ಲಿ ಒಟ್ಟು 33ರಷ್ಟು ಪ್ರಾಪರ್ಟಿ ರಿಕವರಿ ಮಾಡಲಾಗಿದೆ. ಮುಂದೆಯೂ ಕೂಡಾ ಹೆಚ್ಚು ರಿಕವರಿ ಮಾಡಬೇಕು. ಈ ವರ್ಷ ಸಾಕಷ್ಟು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅನೇಕ ಕಳ್ಳತನಗಳ ಬಗ್ಗೆ ನಮ್ಮ ಕಡೆ ಮಾಹಿತಿ ಇದೆ. ಮುಂದಿನ 15 ದಿನದಲ್ಲಿ 10-15 ಕೇಸ್ ಗಳನ್ನು ರಿಕವರಿ ಮಾಡುತ್ತೇವೆ. ಈ ರಿಕವರಿ ಮಾಡಲು ನಮ್ಮ ಪೊಲೀಸರು ಸಾಕಷ್ಟು ಶ್ರಮಪಟ್ಟಿದ್ದಾರೆ. ಜನರಿಂದ ಕೂಡಾ ಸಹಕಾರ ಸಿಗುತ್ತಿದೆ. ಜನರಲ್ಲಿ ಏನೇ ಮಾಹಿತಿ ಇದ್ದರು ನಮ್ಮ ಕಡೆ ಹಂಚಿಕೊಳ್ಳಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.
ಇದನ್ನೂ ಓದಿ- ಸರ್ಕಾರದಿಂದ ಬಿಗ್ Digital Strike: ಬರೋಬ್ಬರಿ 1.77 ಕೋಟಿ ಸಿಮ್ ಕಾರ್ಡ್ಸ್ ಬ್ಲಾಕ್..!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.