ಬೆಂಗಳೂರು: ಒಂದು ಕಡೆ ಧರ್ಮಸ್ಥಳಕ್ಕೆ ಅಂತಾ ಹೋಗಿದ್ದವರಿಗೆ ಕಳ್ಳರು ಶಾಕ್ ಕೊಟ್ರೆ, ಮತ್ತೊಂದು ಕಡೆ ಸ್ನೇಹಿತನ ಮನೆಗೆ ದೇವರ ಪೂಜೆಗೆ ಅಂತಾ ತೆರಳಿದ್ದವರಿಗೆ, ಮಟಮಟ ಮಧ್ಯಾಹ್ನವೇ ಶಾಕ್ ಕಾದಿತ್ತು. ಸದ್ಯ ಅದೇ ಕದ್ದ ಚಿನ್ನಾಭರಣ, ನಗದು ಹಣವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಸಂಜಯನಗರದ ಪಟೇಲಪ್ಪ ಲೇಔಟ್ ನಲ್ಲಿ ಕಳ್ಳತನ ಮಾಡಿರುವ ಆರೋಪಿಯ   ಹೆಸರು ಸುಪ್ರತಾಮಂಡಲ್. ಈತ ಮನೆ ಹೊರಗೆ ಹಾಕಿರೊ ಹ್ಯಾಂಗಿಂಗ್ ಲಾಕ್ ಕಾಣಿಸಿ ಯಾರು ಇಲ್ಲ ಅಂತಾ ಕನ್ಫರ್ಮ್ ಮಾಡಿಕೊಂಡವನು ತಕ್ಷಣ ಕಾಂಪೌಂಡ್ ಜಂಪ್ ಮಾಡಿಯೇ ಬಿಡ್ತಾನೆ‌. ಸೀದಾ ಬಾಗಿಲು ಒಡೆದು ಮನೆ ಒಳಗೆ ನುಗ್ಗಿ ಬಿಟ್ಟಿದ್ದ..ಹೀಗೆ ಹೋದವನು ಮನೆಯಲ್ಲಿದ್ದ 211 ಗ್ರಾಂ ಚಿನ್ನಾಭರಣ ಹಾಗೂ 2 ಲಕ್ಷ ನಗದು ಹಣ ಕಳ್ಳತನ ಮಾಡಿದ್ದ. 


ಇದನ್ನೂ ಓದಿ- ಭೀಕರ ರಸ್ತೆ ಅಪಘಾತದಲ್ಲಿ ಅಣ್ಣ–ತಂಗಿ ಸಾವು


ಇಂಟ್ರಸ್ಟಿಂಗ್ ವಿಚಾರ ಅಂದ್ರೆ ಮನೆ ಮಾಲೀಕರು ಸ್ನೇಹಿತನ ಮನೆಗೆ ದೇವರ ಪೂಜೆಗೆ ಅಂತಾ ಆಗಸ್ಟ್ 27 ರಂದು ತೆರಳಿದ್ರು. ಮಧ್ಯಾಹ್ನದ ಹೊತ್ತೇ ಮನೆಗೆ ನುಗ್ಗಿದ ಆಸಾಮಿ ಗುಡಿಸಿ ಗುಂಡಾಂತರ ಮಾಡಿಬಿಟ್ಟಿದ್ದ. ಸದ್ಯ ಸಿಸಿಟಿವಿ ದೃಶ್ಯ ಆಧರಿಸಿ ಆರೋಪಿ ಬಂಧಿಸಿರೊ ಸಂಜಯನಗರ ಪೊಲೀಸರು 10 ಲಕ್ಷ ಮೌಲ್ಯದ ಚಿನ್ನಾಭರಣ 75 ಸಾವಿರ ನಗದು ವಶಕ್ಕೆ ಪಡೆದುಕೊಂಡಿದ್ದಾರೆ. 


ಮತ್ತೊಂದು ಕಡೆ ಬಾಗಲಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯ ಶೆಟ್ಟಿಹಳ್ಳಿ ನಿವಾಸಿ ಒಬ್ಬರು ಆಗಸ್ಟ್ 13 ರಂದು ಕುಟುಂಬ ಸಮೇತ ಧರ್ಮಸ್ಥಳ ಮಂಜುನಾಥ ಸ್ವಾಮಿ ದರ್ಶನಕ್ಕೆ ತೆರಳಿದ್ದರು. ಈ ವೇಳೆ ಅಲರ್ಟ್ ಆದ ಕಳ್ಳರು ಆಟೋದಲ್ಲಿ ಸುತ್ತಾಡುತ್ತಾ ಬೀಗ ಹಾಕಿದ ಮನೆಯ ಹುಟುಕಾಟದಲ್ಲಿದ್ರು. ತಕ್ಷಣ ಹ್ಯಾಂಗಿಂಗ್ ಬೀಗ ಹಾಕಿದ ಮನೆ ಬಾಗಿಲು ಒಡೆದು ಒಳಗೆ ನುಗ್ಗಿ, ಚಿನ್ನಾಭರಣ ನಗದು ಕದ್ದು ಎಸ್ಕೇಪ್ ಆಗಿದ್ರು‌.ಪ್ರಕರಣ ದಾಖಲಿಸಿಕೊಂಡ ಬಾಗಲಗುಂಟೆ ಪೊಲೀಸರು, ರವಿ, ಇಮ್ರಾನ್, ಜಯಕುಮಾರ್ ಎಂಬುವವರನ್ನ ಬಂಧಿಸಿದ್ದು,6.45 ಲಕ್ಷ ಮೌಲ್ಯದ 129 ಗ್ರಾಂ ಚಿನ್ನಾಭರಣ, 1.08 ಲಕ್ಷ ನಗದು ಹಣ ಕೃತ್ಯಕ್ಕೆ ಬಳಸಿದ್ದ 2 ಬೈಕ್ ವಶಕ್ಕೆ ಪಡೆದುಕೊಂಡಿದ್ದಾರೆ.


ಇದನ್ನೂ ಓದಿ- Dharwad: ಅಧಿಕಾರ ಸ್ವೀಕರಿಸಿದ ದಿನವೇ ಹೃದಯಾಘಾತದಿಂದ ಅಧಿಕಾರಿ ಸಾವು..!


ಸದ್ಯ ಸಿಲಿಕಾನ್ ಸಿಟಿಯಲ್ಲಿ ಹ್ಯಾಂಗಿಂಗ್ ಲಾಕ್ ಹಾಕಿರೊ ಮನೆಗಳಲ್ಲಿಯೇ ಕಳ್ಳತನ ಹೆಚ್ಚಾಗ್ತಿದ್ದು. ಹ್ಯಾಂಗಿಂಗ್ ಲಾಕ್ ಬದಲಿಗೆ ಬೇರೆ ಲಾಕ್ ಬಳಸಿದ್ರೆ ಒಳ್ಳೆದು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.