Mumbai: ಮುಂಬೈನಲ್ಲಿ ಏರ್ ಇಂಡಿಯಾ ಗಗನಸಖಿಯ ಭೀಕರ ಕೊಲೆ..!

Mumbai Air Hostess Death: ರೂಪಾಲ್ ಅವರ ಕೊಲೆ ಆರೋಪದ ಮೇಲೆ ಅಪಾರ್ಟ್‌ಮೆಂಟ್‌ನ ಸ್ವಚ್ಛತಾ ಕೆಲಸಗಾರ ವಿಕ್ರಮ್ ಅತ್ವಾಲ್(40) ಎಂಬುರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Written by - Puttaraj K Alur | Last Updated : Sep 5, 2023, 05:34 PM IST
  • ಮುಂಬೈನಲ್ಲಿ ಕತ್ತು ಸೀಳಿ ಛತ್ತೀಸ್‌ಗಢ ಮೂಲದ ಗಗನಸಖಿ ಭೀಕರವಾಗಿ ಕೊಲೆ
  • ಅಪಾರ್ಟ್‌ಮೆಂಟ್‍ವೊಂದರಲ್ಲಿ ವಾಸವಿದ್ದ ರೂಪಾಲ್ ಓಗ್ರೆ(24) ಹತ್ಯೆ ಮಾಡಿದ ದುಷ್ಕರ್ಮಿಗಳು
  • ಕೊಲೆ ಆರೋಪದ ಮೇಲೆ ಸ್ವಚ್ಛತಾ ಕೆಲಸಗಾರ ವಿಕ್ರಮ್ ಅತ್ವಾಲ್ ಪೊಲೀಸ್ ವಶಕ್ಕೆ
Mumbai: ಮುಂಬೈನಲ್ಲಿ ಏರ್ ಇಂಡಿಯಾ ಗಗನಸಖಿಯ ಭೀಕರ ಕೊಲೆ..! title=
ಗಗನಸಖಿ ಭೀಕರ ಕೊಲೆ!

ಮುಂಬೈ: ವಾಣಿಜ್ಯ ನಗರಿ ಮುಂಬೈನಲ್ಲಿ ಕತ್ತು ಸೀಳಿ ಛತ್ತೀಸ್‌ಗಢ ಮೂಲದ ಗಗನಸಖಿಯನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ. ರೂಪಾಲ್ ಓಗ್ರೆ(24) ಹತ್ಯೆಯಾದ ದುರ್ದೈವಿ.

ಅಂದೇರಿಯ ಟಾಟಾ ಶಕ್ತಿ ಕೇಂದ್ರದ ಮರೋಳ್‌ನ NG ಕಾಂಪ್ಲೆಕ್ಸ್‌ನಲ್ಲಿ ಸೋಮವಾರ ರಾತ್ರಿ ರೂಪಾಲ್‍ರನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆಂದು ವರದಿಯಾಗಿದೆ.

ಇದನ್ನೂ ಓದಿ:  ಸೆಪ್ಟೆಂಬರ್ 5ರಂದೇ ‘ಶಿಕ್ಷಕರ ದಿನ’ ಆಚರಿಸಲು ಕಾರಣವೇನು ಗೊತ್ತಾ? ‘ಸರ್ವ’ ಮಹತ್ವ ಅಂತಿಂಥದಲ್ಲಾ…

ಅಪಾರ್ಟ್‌ಮೆಂಟ್‍ವೊಂದರಲ್ಲಿ ಗಗನಸಖಿ ರೂಪಾಲ್‌ ಅವರ ಕತ್ತು ಸೀಳಿದ್ದ ಅಪರಿಚಿತ ದುಷ್ಕರ್ಮಿಗಳು ಎಸ್ಕೇಪ್ ಆಗಿದ್ದರು. ಆದರೆ ಉಸಿರಾಡುತ್ತಿದ್ದ ಅವರು ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದ್ರೂ ಪ್ರಯೋಜನವಾಗಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ.

ರೂಪಾಲ್ ಅವರ ಕೊಲೆ ಆರೋಪದ ಮೇಲೆ ಅಪಾರ್ಟ್‌ಮೆಂಟ್‌ನ ಸ್ವಚ್ಛತಾ ಕೆಲಸಗಾರ ವಿಕ್ರಮ್ ಅತ್ವಾಲ್(40) ಎಂಬುರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆದರೆ ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಸೆ.12 ರವರೆಗೆ ಈ ಭಾಗಗಳಲ್ಲಿ ನಿರಂತರ ವರ್ಷಧಾರೆ: ಗುಡುಗು-ಸಿಡಿಲು ಸಹಿತ ಭಾರೀ ಗಾಳಿ ಮುನ್ಸೂಚನೆ

ಕಳೆದ 6 ತಿಂಗಳುಗಳ ಹಿಂದೆಯಷ್ಟೇ ರೂಪಾಲ್ ಮುಂಬೈಗೆ ಬಂದು ತನ್ನ ಸಹೋದರಿ ಜೊತೆ ಮರೋಳ್‌ನ ಅಪಾರ್ಟ್‌ಮೆಂಟ್‌ನಲ್ಲಿ ತಂಗಿದ್ದರು. ಏರ್‌ ಇಂಡಿಯಾ ಗಗನಸಖಿಯಾಗಿ ಇತ್ತೀಚಿಗಷ್ಟೇ ಕೆಲಸಕ್ಕೆ ಸೇರಿಕೊಂಡಿದ್ದರು.  

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News