ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ  ಕ್ರೈಂ ಮೀತಿ ಮೀರಿ ಹೋಗುತ್ತಿದೆ. ಮನೆ ಕೆಲಸಕ್ಕೆ ಸೇರಿಕೊಳ್ಳುವ ಹಲವರು ಕಳ್ಳತನ ಮಾಡಿ ಎಸ್ಕೇಪ್ ಆಗುತ್ತಿದ್ದಾರೆ‌. ಅದರಲ್ಲೂ ಮನೆ ಕೆಲಸಕ್ಕೆ ಸೇರುವ ಹೊರ ರಾಜ್ಯದವರು ಮನೆಯನ್ನು ಗುಡಿಸಿ ಗುಂಡಾಂತರ‌ ಮಾಡೋದು ಕಾಮನ್ ಆಗಿದೆ. ಹೀಗೆ ಮಾಜಿ ಗೃಹ ಸಚಿವ, ಹಾಲಿ ಶಾಸಕರ ಮನೆಯಲ್ಲಿ ಕಳ್ಳನೊಬ್ಬ ಕೈಚಳಕ ತೋರಿ ಈಗ ಪೊಲೀಸರ ಅತಿಥಿಯಾಗಿದ್ದಾನೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: Amazon Great Freedom Festival: ಮೊಬೈಲ್ ಮೇಲೆ ಶೇ.40, ಟಿವಿಗಳಿಗೆ ಶೇ.60ರಷ್ಟು ರಿಯಾಯಿತಿ!


ಸದಾಶಿವನಗರದಲ್ಲಿರುವ ಮಾಜಿ ಗೃಹ ಸಚಿವ ಎಂಬಿ ಪಾಟೀಲ್ ಮನೆಯಲ್ಲಿ ಕಳೆದ ತಿಂಗಳು 1.30 ಲಕ್ಷ, 70 ಸಾವಿರ‌ ಮೌಲ್ಯದ ವಿದೇಶಿ ಕರೆನ್ಸಿ.6 ಬ್ರಾಂಡೆಡ್ ವಾಚ್ ಗಳು ಕಳ್ಳತನ ಮಾಡಿದ್ದಾನೆ.ಎಂಬಿ ಪಾಟೀಲ್ ಮನೆಯಲ್ಲಿ ಲಾಂಡ್ರಿ ಕೆಲಸ ಮಾಡುತ್ತಿದ್ದ ಜಯಂತ್ ದಾಸ್ ಎಂಬುವನು ಕದ್ದು ಒಡಿಸ್ಸಾಗೆ ಪರಾರಿಯಾಗಿದ್ದ. ಮಾಹಿತಿ ತಿಳಿದು ಮಾಜಿ ಗೃಹಮಂತ್ರಿಗಳು ತಮ್ಮ‌ ಮನೆಯಲ್ಲಿ ಅಡುಗೆ ಕೆಲಸ ಮಾಡುವ ವ್ಯಕ್ತಿಯ ಮೂಲಕ ಸದಾಶಿವನಗರ ಠಾಣೆಯಲ್ಲಿ ದೂರು ಎಫ್ ಐ ಆರ್ ದಾಖಲಿಸಿದ್ದರು.


ದೂರಿನನ್ವಯ ಸದಾಶಿವನಗರ ಪೊಲೀಸರು ಆರೋಪಿ ಜಯಂತ್ ನನ್ನು ಬಂಧಿಸಿ ಕರೆ ತಂದು ಐದು ದಿನ‌ ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿ ಜಯಂತ್ ದಾಸ್ ಕಳೆದ ಐದು ವರ್ಷದಿಂದ ಎಂ‌ಬಿ ಪಾಟೀಲ್ ಮನೆಯಲ್ಲಿ ಕೆಲಸಕ್ಕಿದ್ದ ಎಂದು ತಿಳಿದು ಬಂದಿದೆ.


ಇದನ್ನೂ ಓದಿ: WhatsApp Mistakes: ಅಪ್ಪಿತಪ್ಪಿಯೂ ಗ್ರೂಪ್‌ಗಳಿಗೆ ಈ 4 ವಿಷಯ ಕಳುಹಿಸಬೇಡಿ..!


ಇನ್ನೂ ಮಾಜಿ ಸಚಿವ ಎಂಬಿ ಪಾಟೀಲ್ ಸಾಹೇಬರು ಮಾತ್ರ ತಮ್ಮ ಹೆಸರಲ್ಲಿ ದೂರು ದಾಖಲಿಸದೇ ಬೇರೆಯವರಿಂದ ಯಾಕೆ ದೂರು ಕೊಡಿಸಿದ್ದರು ಎಂಬುದು ಪ್ರಶ್ನೆಗೆ ಕಾರಣವಾಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.